ಗೋಕಾಕ್

ಕಿತ್ತೂರು ದೊರೆ ಮಲ್ಲಸರ್ಜ ದೇಸಾಯಿ ಸಮಾಧಿ ಅರಭಾವಿ ಮಠದಲ್ಲಿದೆ - ವಿಶೇಷ ಸರಣಿ ಉಪನ್ಯಾಸದಲ್ಲಿ ಚಿಂತಕ ಡಾ. ಸಿ.ಕೆ ನಾವಲಗಿ

ಕಿತ್ತೂರು ದೊರೆ ಮಲ್ಲಸರ್ಜ ದೇಸಾಯಿ ಸಮಾಧಿ ಅರಭಾವಿ ಮಠದಲ್ಲಿದೆ - ವಿಶೇಷ ಸರಣಿ ಉಪನ್ಯಾಸದಲ್ಲಿ ಚಿಂತಕ ಡಾ. ಸಿ.ಕೆ  ನಾವಲಗಿ

ಗೋಕಾಕ 25: ಕಿತ್ತೂರು ಸಂಸ್ಥಾನದ 11ನೇ ದೊರೆ ಮಲ್ಲ ಸರ್ಜ ದೇಸಾಯಿ ಪ್ರಾಣಬಿಟ್ಟ ನಗರದ ಅರಭಾವಿ ದುರದುಂಡೀಶ್ವರ ಮಠದಲ್ಲಿಯೇ ಅವರ ಸಮಾಧಿಯ ಪದಕಟ್ಟಿ ಇದೆ ಎಂದು ಸಂಶೋಧಕ, ಜಾನಪದ ಚಿಂತಕ ಡಾ. ಸಿ.ಕೆ  ನಾವಲಗಿ ಅಭಿಪ್ರಾಯಿಸಿದ್ದಾರೆ.  

ಅವರು ಆ. 24 ಗುರುವಾರದಂದು ಆರಿ​‍್ಸ ಯು ಆಶ್ರಯದ ರಾಣಿ ಚೆನ್ನಮ್ಮ ಅಧ್ಯಯನ ಪೀಠ ಹಾಗೂ ಮಹಾಂತಶಿವಯೋಗಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಅರಭಾವಿ ಮಠಗಳು ಸಂಯುಕ್ತವಾಗಿ ಹಮ್ಮಿಕೊಂಡ ವಿಶೇಷ ಸರಣಿ ಉಪನ್ಯಾಸದಲ್ಲಿ “ರಾಜ ಮಲ್ಲಸರ್ಜ ದೇಸಾಯಿ: ಕೊನೆಯ ದಿನಗಳು ಕುರಿತು ಮುಖ್ಯ ಅತಿಥಿ ಉಪನ್ಯಾಸ ನೀಡಿದರು.  

ಮಲ್ಲ ಸರ್ಜನ ಆಳ್ವಿಕೆ ಕಾಲ ವೆಲ್ಲ ಹೆಚ್ಚಾಗಿ ಹೋರಾಟದಲ್ಲಿಯೇ, ಯುದ್ಧ ಮಾಡುವುದರಲ್ಲಿಯೇ, ದಂಗೆಗಳನ್ನು ಸದೆ ಬಡಿಯುವಲ್ಲಿಯೇ ಕಳೆದು ಹೋಯ್ತು. ಟಿಪ್ಪು, ಪೇಶ್ವಾಯಿ ಬ್ರಿಟಿಷರ ಒತ್ತಡ, ಉಪಟಳ, ದ್ವೇಷ, ಅಸೂಯೆಗಳಿಂದ ಮಲ್ಲಸರ್ಜನಿಗೆ ಕಿತ್ತೂರಿನ ಆಡಳಿತ ನಡೆಸುವುದು ಬಿಕ್ಕಟ್ಟಿನದಾಗಿತ್ತು. ಅವರ ಒಳಸಂಚು, ಮೋಸ, ದಬ್ಬಾಳಿಕೆ, ವರ್ಷಶನ, ನಮ್ಮವರ ಪಿತೂರಿಗಳಿಂದ ನಲುಗಿ ಹೋಗಿದ್ದ. ದೊರೆಯ ವೀರತನ, ಪರಾಕ್ರಮ, ಯುದ್ಧ ಕೌಶಲ, ಸಂಸ್ಥಾನದ ಏಳ್ಗೆ ಕಂಡು, ಸಹಿಸಲಾರದ ಅಧಿಕಾರ ದಾಹ ಹೊಂದಿದ ಪೇಶ್ವಾಯಿ ದೊರೆಯನ್ನು ಮೋಸದಿಂದ ಬಂಧಿಸಿ ಪುಣೆಯ ಮುಧೋಳ್ಕರ ವಾಡೆಯಲ್ಲಿ ಮೂರು ವರುಷಗಳವರೆಗೆ ಬಂಧಿಸಿಟ್ಟ. ಅನ್ನ,ನೀರು ಬಿಟ್ಟು ಮಾರಣಾಂತಿಕ ಸ್ಥಿತಿಗೆ ತಲುಪಿ, ಕ್ಷಯರೋಗ ಪೀಡಿತನಾದ ಮಲ್ಲಸರ್ಜನನ್ನು ಪೇಶ್ವಾಯಿ, ಬಂಧನದಿಂದ ಬಿಡುಗಡೆಗೊಳಿಸಿದನು. ಜೀವಂತ ಶವವಾಗಿರುವ ದೊರೆಯನ್ನು ಪಲ್ಲಕ್ಕಿಯಲ್ಲಿ ಹೊತ್ತು ರಾಜಧಾನಿ ಕಿತ್ತೂರಿಗೆ ಬರುವ ದಾರಿ ಮಧ್ಯದ ಕಿತ್ತೂರು ಸಂಸ್ಥಾನದ ಆಡಳಿತಕ್ಕೊಳಪಟ್ಟ  ಗೋಕಾಕದ ಅರಭಾವಿ ಮಠದಲ್ಲಿ 1816ರಲ್ಲಿ ಮಲ್ಲಸರ್ಜ ಪ್ರಾಣ ತ್ಯಜಿಸಿದರು. ಇವರ ಪಾರ್ಥಿವ ಶರೀರವನ್ನು ಇಲ್ಲಿಯೇ ಮಠದ ಪಕ್ಕದಲ್ಲಿ ಚೆನ್ನಮ್ಮ, ರುದ್ರಮ್ಮ ಅವರ ಮಕ್ಕಳು, ಸಂಸ್ಥಾನದ ವೀರರು, ಸಾರ್ವಜನಿಕರ ಸಮಕ್ಷಮದಲ್ಲಿ ಸಮಾಧಿ ಮಾಡಿದರು. ಕುರುಹಾಗಿ ಪದಕಟ್ಟಿಯನ್ನು ಕಟ್ಟಲಾಗಿದೆ ಎಂದು ತಿಳಿಸುತ್ತಾ, ಕಿತ್ತೂರಿನಲ್ಲಾಗಲೀ, ವಣ್ಣೂರಿನಲ್ಲಾಗಲೀ, ಮಲ್ಲಸರ್ಜನನ ಸಮಾಧಿ ಇದ್ದಂತಿಲ್ಲ. ಅದು ಅರಭಾವಿಯಲ್ಲಿಯೇ ಇರುವ ಸಾಧ್ಯತೆಗಳನ್ನು ಗಣಿತಜ್ಞನಂತೆ ಲೆಕ್ಕಹಾಕಿ ಸಾಕ್ಷಿ ಸಮೇತ ವಿವರಿಸಿದ ಸಿ.ಕೆ ನಾವಲಗಿ ಗೋಕಾಕ್ ನಾಡವರು ಅರಭಾವಿ ಕ್ಷೇತ್ರದವರು ಹೆಮ್ಮೆಪಡುವ ಸಂಗತಿ ಇದೆಂದು ಹೆಮ್ಮೆಯಿಂದ ಹೇಳಿದರು.  

ಚೆನ್ನಮ್ಮ ಅಧ್ಯಯನ ಪೀಠದ ನಿರ್ದೇಶಕ ಪ್ರೊ. ಎಂ.ಎಸ್ ಗಂಗಾಧರಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಡಾ. ಮಹೇಶ್ ಗಾಜಪ್ಪನವರ, ಕಾಡಯ್ಯ ದಡ್ಡಿ, ವಿನುತಾ ನಾವಲಗಿ ಉಪಸ್ಥಿತರಿದ್ದರು. ಪ್ರಾಚಾರ್ಯ ಎಸ್‌. ಡಿ ವಾಲಿಕಾರ ಪ್ರಾಸ್ತಾವಿಕ ಮಾತನಾಡಿದರು. ಎಸ್‌.ಎ ಸುಭ0ಜಿ ಸ್ವಾಗತಿಸಿದರು. ಶ್ರೀಮತಿ ಆರ್‌.ಎಂ ಕಳಸದ ನಿರೂಪಿಸಿದರು. ಸೀರೀನ್ ಮೋಮಿನ್ ವಂದಿಸಿದರು. 


ಸುದ್ದಿ ಓದಿ