ಕಾರವಾರ

ಕರ್ತವ್ಯನಿರತ ನರ್ಸಗಳಿಗೆ ಕಿಟ್ ವಿತರಣೆ

ಕರ್ತವ್ಯನಿರತ ನರ್ಸಗಳಿಗೆ ಕಿಟ್ ವಿತರಣೆ

ಕಾರವಾರ 03: ಕೊವಿಡ್ ಮಹಾಮಾರಿಯ ಸಂದರ್ಭದಲ್ಲಿ ನಮ್ಮ ಹೆಮ್ಮೆಯ ನರ್ಸಗಳು ತಮ್ಮ ತಮ್ಮ ಕುಟಂದಿಂದಲೂ ದೂರವಿದ್ದು, ಅತ್ಯಂತ ನಿಷ್ಟೆಯಿಂದ, ಜೀವದ ಹಂಗನ್ನೂ ತೊರೆದು ಗಂಟೆಗಟ್ಟಲೆ ಪಿ.ಪಿ. ಕಿಟ್ ಧರಿಸಿ ಕೋವಿಡ್ ರೋಗಿಗಳ ಆರೈಕೆ ಮಾಡುತ್ತಿದ್ದಾರೆ.  ರೋಟರಿ ಕ್ಲಬ್ ಕಾರವಾರ ಸಂಸ್ಥೆಯು ಈ ಸಂದರ್ಭದಲ್ಲಿ ಅವರನ್ನು ಸ್ಮರಿಸುವುದು ತಮ್ಮ ಆದ್ಯ ಕರ್ತವ್ಯವೆಂದು ಭಾವಿಸಿ ಅವರಿಗೆ ತಮ್ಮಿಂದ ಒಂದು ಚಿಕ್ಕ ಸಹಾಯವನ್ನು ಮಾಡುವುದಾಗಿ ಯೋಚಿಸಿ ಅವರಿಗೆ ಉಪಯೋಗವಾಗುವ ಕೊಡೆ, ಎರಡು ಓ95 ಮಾಸ್ಕ, ಸೆನಿಟೈಸರ್, ಫೇಸ್ ಶೀಟ್, ಟವೆಲ್ ಇರುವ ಸುಮಾರು 20 ಸಾವಿರ ಮೌಲ್ಯದ ಕಿಟ್‌ಗಳನ್ನು ಕರ್ತವ್ಯ ನಿರ್ವಹಿಸುತ್ತಿರುವ 57 ನರ್ಸಗಳಿಗೆ ವಿತರಿಸಿದರು. ಸದ್ರಿ ಕಿಟ್‌ಗಳನ್ನು ರೋ. ಪ್ರಜೀತ ಪಿ.ವಿ. ಪ್ರಾಯೋಜಿಸಿದ್ದರು.     

ಕಾರವಾರ ವೈದ್ಯಕೀಯ ಮತ್ತು ವಿಜ್ಞಾನ ಸಂಸ್ಥೆಯ ಮಾನ್ಯ ನಿರ್ದೇಶಕ  ಡಾ. ಗಜಾನನ ನಾಯಕರವರು ರೋಟರಿ ಸಂಸ್ಥೆಯವರು ಕೊವಿಡ್ ಫ್ರಂಟ್‌ಲೈನ್ ವರ್ಕರ‌್ಸಗಳನ್ನು ಗುರುತಿಸಿ ಅವರಿಗೆ ಸಹಾಯ ಮಾಡುತ್ತಿರುವುದು ತುಂಬಾ ಶ್ಲಾಘನೀಯ, ಈಗಾಲೇ ಕಾರವಾರ ತಾಲುಕಿನ ಎಲ್ಲಾ ಆಶಾ ಕಾರ್ಯಕರ್ತರಿಗೆ ಹಾಗೂ ಕೋವಿಡ್ ಸಮಯದಲ್ಲಿ ಫೀಲ್ಡವರ್ಕ ಮಾಡುತ್ತಿರುವ ನರ್ಸಗಳಿಗೆ ಇದೇ ಕಿಟ್‌ಗಳನ್ನು ನೀಡಿ ಗೌರವಿಸಿದ್ದಾರೆ” ಎಂದು ರೋಟರಿ ಸಂಸ್ಥೆಗೆ ಧನ್ಯವಾದ ಹೇಳಿದರು.  

 ರೋಟರಿ ಸಂಸ್ಥೆಯ ಅಧ್ಯಕ್ಷ ರೋ. ಸುನೀಲ ಸೋನಿ ಎಲ್ಲರನ್ನೂ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾನ್ಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಿವಾನಂದ ಕುಡ್ತರಕರ, ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರದ ನಾಯಕ, ಮಾನ್ಯ ಷುಶ್ರುಶಾಧ್ಯಕ್ಷಕಿ ಲಕ್ಷ್ಮಿ ಭಟ ಹಾಗೂ ರೋಟರಿ ಸಂಸ್ಥೆಯ ರೋ. ಅಮರನಾಥ ಶೆಟ್ಟಿ, ರೋ. ನಾರಗಾಜ ಜೋಶಿ, ರೋ. ಕೃಷ್ಣಾ ಕೇಳಸ್ಕರ, ರೋ. ರಾಮಚಂದ್ರ ಪಡವಳಕರ, ರೋ. ಪಾಂಡುರಂಗ ಎಸ್‌. ನಾಯ್ಕ. ರೋ. ಗುರುದತ್ತ ಬಂಟ, ರೋ. ಗುರು ಹೆಗಡೆ  ಉಪಸ್ಥಿತರಿದ್ದರು. 


ಸುದ್ದಿ ಓದಿ