ಕೊವಿಡ್ ವಾರಿಯರ್ಸ್ರಗೆ ಕಿಟ್ ವಿತರಣೆ
ಕಾರವಾರ 28: ರೋಟರಿ ಕ್ಲಬ್ ಆಫ್ ಕಾರವಾರ ಸಂಸ್ಥೆಯು ತಾಲೂಕಿನ ಕೊವಿಡ್ ಫ್ರಂಟ್ಲೈನ್ ವಾರಿಯರ್ಸ ಆದ ಆಶಾ ಕಾರ್ಯಕರ್ತರಿಗೆ ಹಾಗೂ ನರ್ಸಗಳಿಗೆ ಅವರ ಕರ್ತವ್ಯದ ಸಮಯದಲ್ಲಿ ಉಪಯೋಗವಾಗುವ ಕೊಡೆ, ಸೆನಿಟೈಸರ್, ಎನ್. 95 ಎರಡು ಮಾಸ್ಕ, ಫೇಸ್ ಶೀಲ್ಡ್, ಟವೆಲ್ ಇರುವ ಅಂದಾಜು 2.5 ಲಕ್ಷ ಮೌಲ್ಯದ 250 ಕಿಟ್ಗಳನ್ನು ವಿತರಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾನ್ಯ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹಾಗೂ ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶರದ ನಾಯಕ ರವರ ಉಪಸ್ಥಿತಿಯಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ರೊ. ಸುನೀಲ ಸೋನಿ, ಕಾರ್ಯದರ್ಶಿ ರೊ. ಗಣಪತಿ ಬಾಡಕರ ಹಾಗೂ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ಕಿಟ್ಗಳನ್ನು ವಿತರಿಸಿದರು.
ಅಪರಜಿಲ್ಲಾಧಿಕಾರಿ ‘ರೊಟರಿ ಸಂಸ್ಥೆಯವರು ಈಗಾಲೇ ನಮ್ಮ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸುತ್ತ ಕೊವಿಡ್ ಸಮಯದಲ್ಲಿ ಹಲವಾರು ಸಹಾಯವನ್ನು ಮಾಡಿದ್ದಾರೆ. ಇತ್ತೀಚೆಗೆ ರೂ. 15/- ಲಕ್ಷ ಖರ್ಚುಮಾಡಿ ಆರ್.ಟಿ.ಸಿ.ಪಿ.ಆರ್. ಮಶಿನ್ ಕೊಡುಗೆಯಾಗಿ ನೀಡಿದ್ದಲ್ಲದೇ, ಸಾರ್ವಜನಿಕರಿಗೆ ಮಾಸ್ಕ, ಸೆನಿಟೈಸರ್, ಆಹಾರ ಕಿಟ್ ವಿತರಣೆ ಹೀಗೆ ಅನೇಕ ಜನಪರ ಕಾರ್ಯವನ್ನು ಮಾಡಿ ಇಂದು ನಮ್ಮ ಫ್ರಂಟ್ಲೈನ್ ವರ್ಕರ್ಸ ಆಶಾ ಕಾರ್ಯಕರ್ತರಿಗೆ ಹಾಗೂ ನರ್ಸಗಳಿಗೆ ರೋಟರಿ ಅಧ್ಯಕ್ಷರು ಅವರ ಸದಸ್ಯರೊಂದಿಗೆ ಬಂದು ಕಿಟ್ಗಳನ್ನು ವಿತರಿಸಿದ್ದು ಶ್ಲಾಘನೀಯ’ ಎಂದರು. ಅಧ್ಯಕ್ಷ ರೊ. ಸುನೀಲ ಸೋನಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಹಿರಿಯ ಸದಸ್ಯ ರೊ. ಕೆ.ಡಿ. ಪೆಡ್ನೇಕರ, ರೊ. ಎಂ.ಎ.ಕಿತ್ತೂರು. ರೊ. ಮನೋಹರ ಕಾಂಬ್ಳಿ, ರೊ. ಕೃಷ್ಣಾನಂದ ಬಾಂದೇಕರ, ರೊ. ಪ್ರಸನ್ನ ತೆಂಡೂಲ್ಕರ, ರೊ. ರಾಜೇಶ ವೆರ್ಣೇಕರ, ರೊ. ನಾಗರಾಜ ಜೋಶಿ, ರೊ. ಅಮರನಾಥ ಶೆಟ್ಟಿ, ರೊ. ಶೈಲೆಶ ಹಳದಿಪೂರ, ರೊ. ಅನಮೋಲ ರೇವಣಕರ, ರೊ. ಕೃಷ್ಣಾ ಕೆಳಸ್ಕರ, ರೊ. ಕೆ.ಪಿ. ಮೆಹಮೂದ್, ರೊ. ಸಾತಪ್ಪಾ ತಾಂಡೇಲ್, ರೋ. ಅರ್ಚನಾ ಶೆಟ್ಟಿ, ರೊ. ಪಾಂಡರಂಗ ಎಸ್. ನಾಯ್ಕ, ರೊ. ಮುರಲಿ ಗೊವೇಕರ, ರೊ. ಗೋವಿಂದ್ರಾಯ ಮಾಂಜ್ರೇಕರ, ರೊ. ಯೋಗೇಶ ಭಂಡಾರಕರ, ರೊ. ಗುರು ಹೆಗಡೆ, ರೊ. ಗುರುದತ್ತ ಬಂಟ, ಇನ್ನರ್ವ್ಹೀಲ್ ಅಧ್ಯಕ್ಷೆ ಸೋನಿ ಉಪಸ್ಥಿತರಿದ್ದರು.