ಚಿಣ್ಣರ ವೇಷಭೂಷಣ ಸ್ಪರ್ಧೆ ಸಂಭ್ರಮ
ಯರಗಟ್ಟಿ 14: ಅಗಷ್ಟ ತಿಂಗಳು ಬಂತೆಂದರೆ ಸಾಕು ಶಾಲೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ತಯಾರಿ. ಡಾನ್ಸ್, ವೇಷಭೂಷಣ ಸ್ಪರ್ಧೆಗಳು, ಕಥೆ ಕವನಗಳ ಸ್ಪರ್ಧೆ, ಫ್ಯಾಷನ್ ಶೋಗಳ ಭರಾಟೆನೆ ಜಾಸ್ತಿಯಾಗಿರುತ್ತದೆ. ಅಂತಹ ಆಚರಣೆಯಲ್ಲೊಂದು ಅಪರೂಪದ ಹೆಮ್ಮೆಯೆನಿಸುವ ಅದ್ಭುತ ಮನರಂಜನಾ ಕಾರ್ಯಕ್ರಮ ನಡೆದಿದೆ.
ಪಟ್ಟಣದ ವಿಶ್ವಕರ್ಮ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನ ವೇಷಭೂಷಣ ಸ್ಪರ್ಧೆಯಲ್ಲಿ ಮಕ್ಕಳಿಗೆ ತಮ್ಮ ಇಷ್ಟದ ವೇಷಗಳನ್ನು ತೊಟ್ಟು ಬರಲು ಶಿಕ್ಷಕರು ಮಕ್ಕಳಿಗೆ ತಿಳಿಸಿರುತ್ತಾರೆ. ಮಕ್ಕಳಿಗೆ ನಾನಾ ವೇಷಗಳನ್ನು ಹಾಕಿಕೊಂಡು ಬಂದ ಕ್ಷಣ ತುಂಬಾ ಸಂತೋಷ.ಈ ವೇಷಭೂಷಣ ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಭಾಗವಹಿಸಿದ್ದರು.