ಯರಗಟ್ಟಿ

ಖೋ ಖೋ ಪಂದ್ಯಾವಳಿ:ಬಸವ ತಂಡ ಪ್ರಥಮ

ಖೋ ಖೋ ಪಂದ್ಯಾವಳಿ:ಬಸವ ತಂಡ ಪ್ರಥಮ

ಯರಗಟ್ಟಿ 24: ಪಟ್ಟಣದ ಬಸವೇಶ್ವರ ಪ್ರೌಢ ಶಾಲಾವರಣದಲ್ಲಿ ನಡೆದ ಹೊನಲು ಬೆಳಕಿನ 18 ವರ್ಷದ ಬಾಲಕರ ಖೋ ಖೋ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಟ್ಟಣದ ಬಸವ ಖೋ ಖೋ ತಂಡ, ದ್ವೀತಿಯ ಸ್ಥಾನ ಅಭಿಮನ್ಯು ಖೋ ಖೋ ತಂಡ, ತೃತೀಯ ಸ್ಥಾನ ಯರಗಟ್ಟಿ ಎಸ್‌. ಬಿ. ಖೋಖೋ ಕ್ಲಬ್, ಚತುರ್ಥಿ ಸ್ಥಾನವನ್ನು ಮಾಡಮಗೇರಿ ಖೋ ಖೋ ತಂಡ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.ಈ ವೇಳೆ ವಿಠ್ಠಲ ಬಂಟನೂರ, ಚೇತನ ಜಕಾತಿ, ಶಿವಾನಂದ ಕರಿಗೋಣ್ಣವರ, ಪ್ರಕಾಶ ವಾಲಿ, ಸಲಿಂಬೇಗ ಜಮಾದಾರ, ರಾಜು ಬಿರ್ಜಿ, ಬಾಸ್ಕರ ಹಿರೇಮೆತ್ರಿ, ರಾಮನಗೌಡ ಪಾಟೀಲ, ಮಹಾಂತೇಶ ಮತ್ತಿಕೊಪ್ಪ, ಮಹೇಶ ಆರಿಬೇಚಿ, ಸಾಗರ ಮಿಕಲಿ ಸೇರಿದಂತೆ ಅನೇಕ ಮುಖಂಡರು ಇದ್ದರು. 


ಸುದ್ದಿ ಓದಿ