ಖೋ. ಖೋ: ಬಸವಗಲ್ಲಿ ತಂಡಕ್ಕೆ ಜಯ
ಯರಗಟ್ಟಿ 15: ಪಟ್ಟಣದಲ್ಲಿ ತೃತೀಯ ಬಾರಿಗೆ ಅಭಿಮನ್ಯು ಸ್ಪೋಟ್ಸ್ ಕ್ಲಬ್ ಹಾಗೂ ಎಸ್. ಬಿ. ಫೌಂಡೇಶನ್ ಇವರ ಆಶ್ರಯದಲ್ಲಿ ಶಾಸಕ ವಿಶ್ವಾಸ ವೈದ್ಯ ಜನ್ಮ ದಿನದ ಅಂಗವಾಗಿ ಬಸವೇಶ್ವರ ಪ್ರೌಢ ಶಾಲಾ ಆವರಣದಲ್ಲಿ ರವಿವಾರ ಹಮ್ಮಿಕೊಂಡಿದ್ದ ಹೊನಲು ಬೆಳಿಕಿನ ರಾಜ್ಯ ಮಟ್ಟದ ಮುಕ್ತ ಖೋ.ಖೋ. ಪಂದ್ಯಾಳಿಯಲ್ಲಿ, ಪಟ್ಟಣದ ಬಸವ, ಗಲ್ಲಿಯ ತಂಡ ಪ್ರಥಮ ಸ್ಥಾನ ಗಳಿಸಿತು.
ರೈನಾಪೂರ ತಂಡ ದ್ವಿತೀಯ ಹಾಗೂ-- ಹುಬ್ಬಳ್ಳಿಯ ತಂಡ ತೃತೀಯ ಸ್ಥಾನ ಪಡೆದವು, 24 ತಂಡಗಳು ಭಾಗವಹಿಸಿದ್ದವು, ಪಂದ್ಯಾವಳಿ ಗೆದ್ದ ತಂಡಕ್ಕೆ ಬಹುಮಾನ ವಿತರಿಸಿ ಸತ್ತಿಗೇರಿ ಗ್ರಾಮದ ಕಾಂಗ್ರೇಸ್ ಮುಖಂಡ ಪ್ರಕಾಶ ವಾಲಿ.ಮಾತನಾಡಿ ಆಟಗಾರರು ಸಹನೆ, ತಾಳ್ಮೆಯಿಂದ ಆಟವಾಡಬೇಕು ಮತ್ತು ಆಟದ ಜೊತಗೆ ವಿದ್ಯಾಭ್ಯಾಸದತ್ತ ಹೆಚ್ಚು ಗಮನ ಹರಿಸಬೇಕು ಎಂದರು.
ಪಟ್ಣದ ಯುವ ಮುಖಂಡ ಅಲ್ತಾ ಮುಲ್ಲಾ ಮಾತನಾಡಿ ಸಾಂಸ್ಕೃತಿ. ಕ್ರೀಡಾಕೂಟ ಆಯೋಜನೆಗೆ ನೆರವು ನೀಡುವುದಾಗಿ ಭರವಸೆ ನೀಡಿದರು.
ಟ್ರೋಪಿ ಪ್ರಾಯೋಜಕ ಸುರೇಶ ಭಜಂತ್ರಿ, ಶಿವಾನಂದ ಕರಿಗೋಣ್ಣವರ, ಎಪಿ.ಎಮ್,ಸಿ ಅಧ್ಯಕ್ಷ ನೀಲಕಂಠ ಶಿದ್ದಬಸವನ್ನವರ, ಸಂಪತ್ತ ಹಿರೇಮೆತ್ರಿ, ಪತ್ರಕರ್ತ ಶಿವಾನಂದ ಬಳಿಗಾರ, ಈರಣ್ಣ ಹುಲ್ಲೂರ ಇದ್ದರು.