ಕೇಸರಿ ನಂದನ ಹನುಮ ಜಯಂತಿ ಆಚರಣೆ
ತಾಳಿಕೋಟಿ: ಪಟ್ಟಣದ ವಿಜಯಪುರ ರಸ್ತೆಯ ಡೋಣಿ ನದಿಯಲ್ಲಿರುವ ಹನುಮಾನ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಜನ ಸೇವಾ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹನುಮ ಜಯಂತಿ ಆಚರಣೆ ಮಾಡಿದರು. ಈ ಸಮಯದಲ್ಲಿ ಜನ ಸೇವಾ ಸಂಘದ ಅಧ್ಯಕ್ಷರಾದ ಅಮಿತಸಿಂಗ ಮನಗೂಳಿ ಮಾತನಾಡಿ ರಾಮಾಯಣದಲ್ಲಿ ಹನುಮ ರಾಮನ ಭಕ್ತರಾಗಿದ್ದರು. ಹನುಮನ ಜನ್ಮಸ್ಥಳವು ಕರ್ನಾಟಕದಲ್ಲಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ಹತ್ತಿರದ ಅಂಜನಾದ್ರಿ ಬೆಟ್ಟವಾಗಿರುವದು ನಮ್ಮೆಲ್ಲರಿಗೆ ಸಂತಸದ ವಿಷಯವಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ನೀತಿನ ವಿಜಾಪುರ, ವಿಶ್ವನಾಥ ಹಜೇರಿ, ಪ್ರಶಾಂತ್ ಸಜ್ಜನ, ವಿಠ್ಠಲ್ ಸಿಂಗ ಹಜೇರಿ, ಶರಣು ಸಜ್ಜನ, ರಾಜು ಹಜೇರಿ, ರಮೇಶ ವರದಪ್ಪನವರ, ಸಂತೋಷ ಹಜೇರಿ, ಶಂಕರ ಕೋಟಿಮನಿ, ಮಹಾಂತೇಶ ಪಟ್ಟಣಶೆಟ್ಟಿ, ಪ್ರಭುಸಿಂಗ ಗೌಡಗೇರಿ, ರಾಜೇಶ ಹಜೇರಿ, ರಾಮು ಹಜೇರಿ, ಪರಶುರಾಮ ಹಜೇರಿ ಹಲವರು ಪಾಲ್ಗೊಂಡಿದ್ದರು.