ಕೆಂಪೇಗೌಡರ ದೂರದೃಷ್ಟಿಯ ದೊರೆ ಮಹಾ ಮೇಧಾವಿ: ಮಂಜುನಾಥ ಸ್ವಾಮಿ
ಸಿರುಗುಪ್ಪ 27: ಯಲಹಂಕ ನಾಡ ಪ್ರಭುಗಳ ವಂಶದ ದೂರದೃಷ್ಟಿಯ ಮೇಧಾವಿ ದೊರೆ ಮಹಾ ಕನಸುಗಾರ ನಾಡಿನ ಬಹುಮುಖ್ಯ ಸಾಂಸ್ಕೃತಿಕ ನಾಯಕರಲ್ಲೊಬ್ಬರು 1537ರಲ್ಲಿ ಬೆಂಗಳೂರು ಮಹಾನಗರದ ನಿರ್ಮಾಣ ಧರ್ಮ ಸಂಸ್ಕೃತಿಗೆ ಅನನ್ಯ ಕೊಡುಗೆ ನೀಡಿದ ಕೆಂಪೇಗೌಡ ಎಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಾಲೂಕಾ ಕಾರ್ಯನಿರ್ವಾಹಕ ದಂಡಾಧಿಕಾರಿ ತಹಸೀಲ್ದಾರ್ ಎನ್. ಆರ್ ಮಂಜುನಾಥ ಸ್ವಾಮಿ ಹೇಳಿದರು.
ತಾಲ್ಲೂಕು ಪಂಚಾಯತ್ ಸಭಾ ಭವನದಲ್ಲಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ್ ಬಳ್ಳಾರಿ ತಾಲ್ಲೂಕು ಪಂಚಾಯತ್ ಸಿರುಗುಪ್ಪ ತಾಲ್ಲೂಕು ಆಡಳಿತ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ ಸರ್ವಶ್ರೆ?ಷ್ಠ ದಾರ್ಶನಿಕ ಅಪ್ರತಿಮ ಆಡಳಿತಗಾರ ಬೃಹತ್ ಬೆಂಗಳೂರು ಮಹಾ ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ 513ನೇ ಜಯಂತಿ ಸಮಾರಂಭದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ಮಾಲೆ ಅರ್ಿಸಿ ನಮನ ಸಲ್ಲಿಸಿ ಗೌರವಿಸಿ ಸ್ಮರಿಸಿ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ ಅವರು ಮಾತನಾಡುತ್ತಾ ಸರ್ವಧರ್ಮ ಮತ್ತು ಎಲ್ಲಾ ಜಾತಿ ವರ್ಗಗಳ ಜನರನ್ನು ಸಮಭಾವನೆಯಿಂದ ಕಂಡ ಅಪರೂಪದ ಆಡಳಿತಗಾರರು ಕುವೆಂಪು ಹೇಳಿದಂತೆ ಸರ್ವ ಜನಾಂಗದ ಸುಂದರ ತೋಟ ಕೆಂಪೇಗೌಡ ಕಟ್ಟಿದ ನಾಡು ಎಂದರು .ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲ್ಲೂಕು ವಿಸ್ತರಣಾಧಿಕಾರಿ ಕೆ ಗಾದಿಲಿಂಗಪ್ಪ ಅವರು ಮಾತನಾಡುತ್ತಾ ಬೆಂಗಳೂರು ಜಗತ್ತಿನ ಎಲ್ಲಾ ಜನರ ಆಕರ್ಷಣೀಯ ಕೇಂದ್ರವಾಗಿದೆ ನಾಡಪ್ರಭು ಕೆಂಪೇಗೌಡರ ಜನ್ಮ ದಿನದ ಶುಭಾಶಯಗಳು ನಾಡಿನ ಎಲ್ಲರಿಗೂ ಸಂತೋಷ ಮತ್ತು ಸಂಭ್ರಮದ ದಿನ ವಾಗಿದೆ ಎಂದರು .ಭಾರತ ಸರ್ಕಾರ ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಶನ್ ವಾರ್ತಾ ಮತ್ತು ಪ್ರಸಾರ ಜನ ಸಂಪರ್ಕ ಸಚಿವಾಲಯದ ಜನಾಭಿಪ್ರಾಯ ಮುಖಂಡರು ಶಿಕ್ಷಣ ಪ್ರೇಮಿ ಎ ಅಬ್ದುಲ್ ನಬಿ ಅವರು ಮಾತನಾಡಿ ನಮ್ಮ ವೈವಿಧ್ಯಮಯ ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಸಂವಿಧಾನ ಬದ್ಧ ಮೂಲಭೂತ ಕರ್ತವ್ಯ ಸ್ವಾತಂತ್ರ್ಯವೆಂದರೆ ದೇಶಪ್ರೆ?ಮ ಹಕ್ಕು ಕರ್ತವ್ಯ ಜವಾಬ್ದಾರಿ ಇತ್ಯಾದಿಗಳೆಲ್ಲ ಏಕಕಾಲಕ್ಕೆ ಅನುಷ್ಠಾನ ಗೊಳ್ಳುವಬೇಕಾದ ಪ್ರಕ್ರಿಯೆ ಸ್ವಾತಂತ್ರ್ಯದ ಸಂತಸ ನಿರಂತರವಾಗಿರಲಿ ಕೆಂಪೇಗೌಡರ ಸಾಧನೆಗೆ ಸರ್ಕಾರದ ಹೊಳಪು ಎಂದು ಅಬ್ದುಲ್ ನಬಿ ಅಭಿಪ್ರಾಯಪಟ್ಟರು.
ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ ಈರಣ್ಣ, ತಾಲ್ಲೂಕು ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕಿ ಬಿ ರಾಜೇಶ್ವರಿ, ತಾಲ್ಲೂಕು ಪಂಚಾಯತ್ ಅಧಿಕಾರಿ ಎಂ ವೀರನಗೌಡ ,ಅಕ್ಷರ ದಾಸೋಹ ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಡಾ ಪದ್ಮನಾಭ ರಾವ್, ಶಿಕ್ಷಣ ಇಲಾಖೆಯ ಇಸಿಒ ಬಸವರಾಜ ಸ್ವಾಮಿ,ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು ಗಣ್ಯರು ಸಿಬ್ಬಂದಿ ವರ್ಗದವರು ಶಾಲಾ ಮಕ್ಕಳು ಭಾಗವಹಿಸಿದ್ದರು.