ಶಿಗ್ಗಾವ್

ಕೀತ್ರಿ ಶಾಲಾ ಸಂಸತ್ ಚುನಾವಣೆ: ಶೇ.91% ಮತದಾನ

ಕೀತ್ರಿ ಶಾಲಾ ಸಂಸತ್ ಚುನಾವಣೆ: ಶೇ.91% ಮತದಾನ

ಲೋಕದರ್ಶನವರದಿ

ಶಿಗ್ಗಾವಿ : ಶಾಲಾ ಸಂಸತ್ತ ಚುನಾವಣೆಯಿಂದ ವಿದ್ಯಾಥರ್ಿಗಳಲ್ಲಿ ನಾಯಕತ್ವ ಗುಣ ಬೆಳೆಯಲು ಸಾಧ್ಯವಾಗಿದೆ ಎಂದು ಕೀತರ್ಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಎಂ.ಬಿ.ಉಂಕಿ ಹೇಳಿದರು.

     ತಾಲೂಕಿನ ಬಂಕಾಪುರ ಪಟ್ಟಣದ ಕೀತರ್ಿ ಪ್ರೌಡಶಾಲೆಯ ಶಾಲಾ ಸಂಸತ್ತ ಚುನಾವಣಾ ಕಾರ್ಯಕ್ರಮವನ್ನುದ್ಧೇಸಿಸಿ ಮಾತನಾಡಿದ ಅವರು ವಿದ್ಯಾಥರ್ಿಗಳಿಗೆ ಚುನಾವಣೆಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರಾಯೋಗಿಕವಾಗಿ ಶಾಲಾ ಸಂಸತ್ತ ಚುನಾವಣೆಯನ್ನು ನಾಮಪತ್ರ ಸಲ್ಲಿಕೆಯಿಂದ ಹಿಡಿದು ನಾಮಪತ್ರ ಹಿಂಪಡೆಯುವಿಕೆ, ನಾಮಪತ್ರ ತಿರಸ್ಕೃತ, ಮತದಾನ, ಮತ ಏಣಿಕೆ, ಆಯ್ಕೆಯಾದ ಅಭ್ಯಥರ್ಿಗಳ ಪ್ರಮಾಣವಚನ ಸ್ವೀಕಾರದಂತಹ ಕಾರ್ಯಕ್ರಮವನ್ನು ಕ್ರಮಬದ್ದವಾಗಿ ಮಾಡಿ, ಚುನಾವಣೆಬಗ್ಗೆ ಮಕ್ಕಳಲ್ಲಿ ಅರಿವುಮೂಡಿಸಲಾಯಿತು. ಒಟ್ಟು 189 ವಿದ್ಯಾಥರ್ಿ ಮತದಾರರಲ್ಲಿ 172 ಮತ ಚಲಾವಣೆಗೋಂಡು ಶೇ. 91% ಮತದಾನ ನಡೆಯಿತು.

9 ಸ್ಥಾನಗಳ ಚುನಾವಣೆಗೆ 20 ಅಭ್ಯಥರ್ಿಗಳು ಕಣದಲ್ಲಿ ಉಳಿದು ಸ್ಪಧರ್ೆ ನೀಡಿದರು. ಪ್ರತಿಯೊಬ್ಬ ಅಭ್ಯಥರ್ಿಗಳಿಗೂ ಕೂಡಾ ಒಂದೋಂದು ಚಿಹ್ನೆ ನೀಡಲಾಗಿತ್ತು. ಅಭ್ಯಥರ್ಿ ವಿಧ್ಯಾಥರ್ಿಗಳಿಗೆ ಪ್ರಚಾರ ಕೈಗೊಳ್ಳಲು ಎರಡು ದಿನ ಕಾಲವಾಕಾಶ ನೀಡಲಾಗಿತ್ತು. 

       ಅಭ್ಯಥರ್ಿಗಳು ಮತದಾರ ವಿದ್ಯಾಥರ್ಿಗಳಲ್ಲಿ ಶಾಲೆಯಲ್ಲಿ ಸೇರಿದಂತೆ ಕೇಲವು ಅಭ್ಯಥರ್ಿಗಳು ಮನೆ,ಮನೆಗೆ ತೆರಳಿ ಮತಯಾಚನೆ ನಡೆಸಿದರು. ಮತದಾನ ದಿನವಾದ ಶನಿವಾರದಂದು ವಿದ್ಯಾಥರ್ಿಗಳು ಸರತಿಸಾಲಿನಲ್ಲಿ ನಿಂತು ಮತಚಲಾಯಿಸಿದರು. 

ಕೊನೆಗೆ 9 ಅಭ್ಯಥರ್ಿಗಳು ಚುನಾವಣೆಯಲ್ಲಿ ಅಯ್ಕೆಯಾದರು. ಪ್ರಧಾನ ಮಂತ್ರಿಯಾಗಿ ಅನುಷಾ ಸುಲಾಖೆ ಪ್ರವಾಸ ಮಂತ್ರಿಯಾಗಿ ಕರಣ ಕೋಂತಂಬ್ರಿ ಶಿಸ್ತು ಮತ್ತು ಆರೋಗ್ಯ ಮಂತ್ರಿಯಾಗಿ ಸೌಬಾಗ್ಯ ದವಂಡೆ ಕ್ರೀಡಾ ಮಂತ್ರಿಯಾಗಿ ಜ್ಯೋತಿ ಟೋಪಣ್ಣವರ ಸಾಂಸ್ಕೃತಿಕ ಮಂತ್ರಿಯಾಗಿ ಸಾನಿಯಾ ಇಂಗಳಕಿ ಹಣಕಾಸು ಮಂತ್ರಿಯಾಗಿ ಸುಷ್ಮಿತಾ ಕಟ್ಟಿಮನಿ ಪ್ರಾರ್ಥನಾ ಮಂತ್ರಿಯಾಗಿ ಗಂಗಾ ಕುಂದಗೋಳ, ಪರಿಸರ ಮಂತ್ರಿಯಾಗಿ ಗೀತಾ ಪಾಟೀಲ ಮಹಿಳಾ ಪ್ರತಿನಿಧಿಯಾಗಿ ಅಕ್ಷತಾ ಮಾದರ ಆಯ್ಕೆಯಾದರು. 

 ಆಯ್ಕೆಯಾದ ಅಭ್ಯಥರ್ಿಗಳಿಗೆ ಸಂಸ್ಥೆಯ ಅಧ್ಯಕ್ಷ ಜೆ.ಸಿ. ಕುರಂದವಾಡ ಪ್ರಮಾಣ ವಚನ ಬೋದಿಸಿದರು. ಅಭ್ಯಥರ್ಿಗಳು ಅವರವರ ಇಷ್ಟದೇವರ ಹೇಸರಿನಲ್ಲಿ, ಮತ್ತೇ ಕೇಲವರು ಭಾರತಮಾತೆ, ರೈತರ ಹೇಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

      ಚುನಾವಣಾ ಅಧಿಕಾರಿಗಳಾಗಿ ಎಸ್.ಸಿ.ಹಿರೇಮಠ, ಆರ್.ಎಚ್.ರೊಡ್ಡಣ್ಣವರ ಕಾರ್ಯನಿರ್ವಹಿಸಿದರು. ಸಿ.ಟಿ.ನೆಲೋಗಲ್ಲ, ಬಿ.ಎಸ್.ಕಮ್ಮಾರ, ಮಕ್ಕಳಿಗೆ ಮತ ಪತ್ರವನ್ನು ನೀಡುವುದು ಬೇರಳಿಗೆ ಶಾಹಿ ಹಾಕುವ ಕೇಲಸದಲ್ಲಿ ನಿರತರಾಗಿದ್ದರು. ಎಮ್.ಎನ್. ಚಿನಿವಾರ, ವೆಂಕಟೇಶ ಗೋಲ್ಲರ ಪಿ.ಎಮ್.ದುಗಲದ, ಎಸ್.ಜಿ. ಹಾದಿಮನಿ  ಮತಯಣಿಕೆ ಕಾರ್ಯ ನಿರ್ವಹಿಸಿದರು.

 

ಸುದ್ದಿ ಓದಿ