ಕೊಟ್ಟೂರು

ಪತ್ರಕರ್ತ ಚಿಗಟೇರಿ ಕೊಟ್ರೇಶಿಗೆ ಕೌಜಲಗಿ ನಿಂಗಮ್ಮ ಪ್ರಶಸ್ತಿ

ಪತ್ರಕರ್ತ  ಚಿಗಟೇರಿ ಕೊಟ್ರೇಶಿಗೆ ಕೌಜಲಗಿ ನಿಂಗಮ್ಮ ಪ್ರಶಸ್ತಿ

ಕೊಟ್ಟೂರು 25: ಕೊಟ್ಟೂರಿನ ಪತ್ರಕರ್ತರು ಹಾಗೂ ಕಲ್ಪತರು ಕಲಾ ಟ್ರಸ್ಟ್‌ ನ ಅಧ್ಯಕ್ಷರು ಆದ ಚಿಗಟೇರಿ ಕೊಟ್ರೇಶಿ ಇವರಿಗೆ 2023-24 ನೇ ಸಾಲಿನ ಕೌಜಲಗಿ ನಿಂಗಮ್ಮ ಪ್ರಶಸ್ತಿ ಲಭಿಸಿದೆ. 

ಶ್ರಿ ಲಕ್ಕಮ್ಮ ದೇವಿ ಕಲಾ ಪೋಷಕ ಸಂಘ ಬ್ಯಾಕೂಡ ಬಾದಮಿ ಇವರ ಅಶ್ರಯದಲ್ಲಿ ನೆಡೆದ ಬಯಲಾಟ ಉತ್ಸವ ಹಾಗೂ ಅಖಿಲ ಕರ್ನಾಟಕ 4ನೇ ಜಾನಪದ ನೃತ್ಯ ಕಲಾಮೇಳ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಭವನದಲ್ಲಿ ನೆಡೆದ ಕಾರ್ಯಕ್ರಮದಲ್ಲಿ ಕಾಲಜ್ಞಾನಬ್ರಹ್ಮ ಸದ್ಗುರು ಶರಣಬಸವ ಸ್ವಾಮಿಗಳು ಸಾನಿಧ್ಯವಹಿಸಿ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಲಾಯಿತುಯೆಂದು ಪತ್ರಿಕೆಗೆ ತಿಳಿಸಿದ್ದಾರೆ. 

ನಂತರ ಮಾತನಾಡಿದ ಪ್ರಶಸ್ತಿ ಪುರಸ್ಕತರು ಹಾಗೂ ಕಲ್ಪತರು ಕಲಾ ಟ್ರಸ್ಟ್‌ ಅಧ್ಯಕ್ಷರು ಆದ ಚಿಗಟೇರಿ ಕೊಟ್ರೇಶಿ ಅಂತಹ ವೇದಿಕೆಯಲ್ಲಿ ಶರಣಬಸವ ಸ್ವಾಮಿಗಳ ಹಸ್ತದಿಂದ ನಾನು ಪ್ರಶಸ್ತಿ ಸ್ವೀಕರಿಸುವುದು ನನ್ನ ಪೂರ್ವ ಜನ್ಮದ ಪುಣ್ಯವೆಂದು ಹೇಳುತ್ತಾ, ನಾನು ಕಲಾಸೇವೆಯಲ್ಲಿ ಅಂಬೆಗಾಲು ಇಡುತ್ತಿದ್ದು ನನ್ನನ್ನು ಗುರುತಿಸಿ ಪ್ರಶಸ್ತಿ ನೀಡಿರುವುದಕ್ಕೆ ಆಭಾರಿಯಾಗಿದ್ದೇನೆ, ನನ್ನ ಜವಬ್ದಾರಿ ಹೆಚ್ಚಿದ್ದು, ಇನ್ನೂ ಹೆಚ್ಚಿನ ರೀತಿಯಲ್ಲಿ ಕಲಾ ಸೇವೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು. 


ಸುದ್ದಿ ಓದಿ