ಕೊಟ್ಟೂರು

ಕೊಟ್ಟೂರು ನಗರದಲ್ಲಿ ನಮೋ ಯುವ ಮ್ಯಾರಥಾನ ಓಟ

ಕೊಟ್ಟೂರು ನಗರದಲ್ಲಿ ನಮೋ ಯುವ ಮ್ಯಾರಥಾನ ಓಟ

ಕೊಟ್ಟೂರು 29:  ಭಾರತೀಯ ಜನತಾ ಪಾರ್ಟಿ ಹಗರಿಬೊಮ್ಮನಹಳ್ಳಿ ಮಂಡಲ ಕೊಟ್ಟೂರು ಮಹಾಶಕ್ತಿ ಕೇಂದ್ರದ ನಗರ ಘಟಕದ ಅಧ್ಯಕ್ಷರಾದ ಅಂಗಡಿ ಪಂಪಾಪತಿ ನೇತೃತ್ವ ದಲ್ಲಿ ಬೃಹತ್ ನಮೋ ಯುವ ಮ್ಯಾರಥಾನ ಓಟ ಹಮ್ಮಿ ಕೊಳ್ಳಲಾಗಿತ್ತು. 

ವಿಶ್ವನಾಯಕ ಹೆಮ್ಮೆಯ ಪ್ರಧಾನ ಮಂತ್ರಿಯವರಾದ ಮೋದೀಜೀರವರ ಹುಟ್ಟುಹಬ್ಬದ ಅಂಗವಾಗಿ ಸೇವಾ ಪಾಕ್ಷಿಕದ ಭಾಗವಾಗಿ ಸೋಮವಾರ ನಗರದ ಮರಿಕೊಟ್ಟೂರೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಕೋಟೆಯಲ್ಲಿರುವ ಮೂಲ ದೇವಸ್ಥಾನ ಕೊಟ್ಟೂರೇಶ್ವರ ದರ್ಭಾರ ಮಠದಲ್ಲಿ ಅಂತ್ಯವಾಯಿತು.ಈ ಸಂಧರ್ಭದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ನಗರ ಘಟಕದ ಅಧ್ಯಕ್ಷರಾದ ಅಂಗಡಿ ಪಂಪಾಪತಿ ಯುವ ಮ್ಯಾರಥಾನ್ ಅನ್ನುವುದು ಕೇವಲ ಒಂದು ಓಟವಲ್ಲ, ಇದು ಯುವಜನರು ದಾಸ್ಯಮುಕ್ತ ಹಾಗೂ ವ್ಯಸನಮುಕ್ತರಾಗಿ ಸುಭದ್ರ ದೇಶ ಕಟ್ಟುವ ಸಂಕಲ್ಪದ ಸಂಕೇತವೆಂದರು.ಜಾಥದಲ್ಲಿ ಜಿಲ್ಲಾ ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿ ಬಲ್ಲಾಹುಣಸಿ ರಾಮಣ್ಣ, ಮಂಡಲ ಅಧ್ಯಕ್ಷರಾದ ಕೆ.ಎಸ್‌. ಪ್ರಕಾಶ್, ಜಿಲ್ಲಾ ಉಪಾಧ್ಯಕ್ಷರಾದ ಕೃಷ್ಣನಾಯ್ಕ, ಪಿ.ಹೆಚ್‌.ಕೊಟ್ರೇಶಿ, ಹ.ಬೊ. ಪುರಸಭೆ ಸದಸ್ಯರಾದ ಜೋಗಿ ಹನುಮಂತಪ್ಪ, ಕನಕಪ್ಪ, ಮಂಜುನಾಥ ಹಿರೇಮಠ,ಪ.ಪಂ. ಸದಸ್ಯರಾದ ಬೋರ್ ವೆಲ್ ತಿಪ್ಪೇಸ್ವಾಮಿ, ಪ.ಪಂ. ಉಪಾಧ್ಯಕ್ಷರಾದ ಗಂಗನಹಳ್ಳಿ ಸಿದ್ದಯ್ಯ, ಪ.ಪಂ.ಸದಸ್ಯರಾದ ಕೆ.ಎಸ್‌. ವೀಣಾ, ಕೆಂಗಪ್ಪ, ವಿಕ್ರಂ, ಶಾಂತಕ್ಕ, ಉಮಾದೇವಿ, ಚಿರಿಬಿ ಪ್ರಕಾಶ್, ಗುಂಡಾಕೃಷ್ಣಣ್ಣ, ಮಂಜುನಾಥ, ಸಂದೀಪ್, ಯುವರಾಜ್,ಚಂದ್ರಶೇಖರ್, ಭಜಂತ್ರಿ ಮಂಜುನಾಥ ಸೇರಿದಂತೆ ಅನೇಕ ಕಾರ್ಯಕರ್ತರು, ಪಧಾಧಿಕಾರಿಗಳು, ಅಭಿಷೇಕ ನಡಲಮನಿ ಹಾಗೂ ಅನೇಕ ಮೋದಿ ಅಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮ ಯಶ್ವಸ್ವಿಗೊಳಿಸಿದರು. 


ಸುದ್ದಿ ಓದಿ