ತಾಳಿಕೋಟಿ

ಅರ್ಚಕರೊಂದಿಗೆ ಕಾಶ್ಮೀರ ಫೈಲ್ಸ್‌ ಚಿತ್ರ ವೀಕ್ಷಣೆ

ಅರ್ಚಕರೊಂದಿಗೆ ಕಾಶ್ಮೀರ ಫೈಲ್ಸ್‌ ಚಿತ್ರ ವೀಕ್ಷಣೆ


ತಾಳಿಕೋಟೆ27: ತಾಲೂಕಿನ ವಿವಿಧ ಧಾರ್ಮಿಕ ಮಠಗಳ ಸ್ವಾಮಿಜಿಗಳು, ಅರ್ಚಕರೊಂದಿಗೆ ಯುವ ಭಾರತ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಉಮೇಶ ಕಾರಜೋಳ ಪಟ್ಟಣದ ಮಹಾವೀರ್ ಚಿತ್ರ ಮಂದಿರದಲ್ಲಿ ದಿ ಕಾಶ್ಮೀರಿ ಫೈಲ್ಸ್‌ ಚಲನಚಿತ್ರವನ್ನು ವೀಕ್ಷಣೆ ಮಾಡಿದರು. 

ತಾಲೂಕಿನ ಕೆಸರಟ್ಟಿ ಶಂಕಲಿಂಗ ಮಠದ ಸೋಮಲಿಂಗ ಸ್ವಾಮೀಜಿ, ನಾವದಗಿಯ ಬ್ರಹನ್ಮಠದ ರಾಜೇಂದ್ರ ಒಡೆಯರ, ತುಂಬಗಿ-ಸಾಸನೂರ ಹಿರೇಮಠದ ಕಿರಿಯ ಶಂಕರಲಿಂಗ ದೇವರು, ಚಬನೂರಿನ ರಾಮಲಿಂಗಯ್ಯ ಹಿರೇಮಠ, ಮಿಣಜಗಿಯ ಶಿವಯ್ಯ ಸ್ವಾಮಿಜಿ, ಅರ್ಚಕರಾದ ಸಂತೋಷ್‌ಭಟ್ ಜೋಶಿ, ಗುಂಡುರಾವ್ ಜೋಶಿ ಸೇರಿದಂತೆ ಬ್ರಾಹ್ಮಣ ಸಮಾಜ ಬಾಂಧವರು, ಬ್ರಾಹ್ಮಣ ಸಮಾಜದ ಮಹಿಳೆಯರು, ಯುವಕರಿಗಾಗಿ ನಮ್ಮೂರ ಅರ್ಚಕರೊಂದಿಗೆ ಕಾಶ್ಮೀರ ಫೈಲ್ಸ್‌ ಘೋಷಣೆಯೊಂದಿಗೆ ವೀಕ್ಷಣೆಗೆ ಅವಕಾಶವನ್ನು ಮಾಡಿಕೊಡಲಾಯಿತು. ಭಾರತ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಲನಚಿತ್ರ ವಿಕ್ಷಣೆಗೆ ಚಾಲನೆ ನೀಡಲಾಯಿತು. ಚಲನಚಿತ್ರ ವಿಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಯುವ ಭಾರತ ಸಮಿತಿ ಸಂಸ್ಥಾಪಕ ಉಮೇಶ ಕಾರಜೋಳ ಅವರು​‍್ನ ಬ್ರಾಹ್ಮಣ ಸಮಾಜದ ವತಿಯಿಂದ ಸನ್ಮಾನಿಸಿಲಾಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಉಮೇಶ ಕಾರಜೋಳ, ಕಾಶ್ಮೀರದಲ್ಲಿ ನಡೆದ ಘೋರ ದುರಂತದ ಕಠೋರ ಸತ್ಯವನ್ನು ಇಲ್ಲಿಯವರೆಗೆ ಮುಚ್ಚಿಕೊಂಡು ಬಂದಿದ್ದು ಅದನ್ನು ಈ ಚಲನಚಿತ್ರದ ಮೂಲಕ  ಜಾತ್ಯತೀತವಾಗಿ ಎಲ್ಲರೂ ನೋಡಲೇಬೆಕಾದ ಚಿತ್ರ ಇದಾಗಿದೆ. ಮೊದಲನೆದಾಗಿ ಚಲನಚಿತ್ರದ ನಿರ್ದೇಶಕ ವಿವೇಕ ಅಗ್ನಿಹೋತ್ರಿ ಹಾಗೂ ಸಂಪೂರ್ಣ ತಂಡದವರಿಗೆ ಧೈರ್ಯ ಮಾಡಿದ್ದಕ್ಕೆ ಸತ್ಯ ಹೊರಬಿದ್ದಿದೆ. ಯುವಕರು ದಿ ಕಾಶ್ಮೀರಿ ಫೈಲ್ಸ್‌ ಚಲನಚಿತ್ರ ವಿಕ್ಷಣೆ ಮಾಡಬೇಕು ಎಂದರು. 

ಕಕೆಸರಟ್ಟಿ ಶಂಕರಲಿಂಗ ಮಠದ ಸೋಮಲಿಂಗ ಸ್ವಾಮಿಗಳು ಮಾತನಾಡಿ, ಕಾಶ್ಮೀರ ಪಂಡಿತರ ಮೇಲೆ ಒತ್ತಾಯದಿಂದ ಧರ್ಮ ಬದಲಾವಣೆಗಾಗಿ ಒತ್ತಡಕ್ಕೆ ಮಣಿದು ಹಲವಾರು ಕಾಶ್ಮೀರಿ ಪಂಡಿತರು ರಾತ್ರೋರಾತ್ರಿ ಅಲ್ಲಿಂದ ಬೇರೆಡೆಗೆ ಹೊಗಿದ್ದು, ಧರ್ಮ ಬದಲಾವಣೆಗೆ ಒಪ್ಪದೆ ಅದೆಷ್ಟೋ ಜನರನ್ನು ಮಾನವಿಯತೆ ಇಲ್ಲದೇ ಕೊಂದಿದ್ದು ಅಲ್ಲಿಯ ಕ್ರೂರ ಮನಸ್ಸನ್ನು ಎತ್ತಿ ತೊರಿಸುತ್ತದೆ ಎಂದರು. 

 ಗಜದಂಡಯ್ಯ ಹಿರೇಮಠ, ವಿಕ್ರಮ ಸುರಪುರ, ಮಯೂರ ಪಾಟೀಲ, ಶ್ರೀಶೈಲ  ವಿಜಯಪುರ, ವಿರೇಶ ಸಾಸನೂರ, ಸಾಗರ ಕಾಜಘರ, ಕಿರಣ ಬಡಿಗೇರ, ಸಿತಾರಾಮ ಮೂಲಿಮನಿ, ರಾಜು ಪಾಟೀಲ, ದೇವರಾಜ ನಾಯಕಲ್, ರೂಷಿಕೇಶ ,ಆಕಾಶ, ಸಮರ್ಥ, ಬಾಬು, ರಾಜು ಕಟ್ಟಿಮನಿ, ಕಾಶಿನಾಥ ಅರಳಿಚಂಡಿ ಹಾಗೂ ಕಾರ್ಯಕರ್ತರು ಮತ್ತು ನಗರದ ಅರ್ಚಕ ಪರಿವಾರದವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ