ಕಸಾಪ ಚುನಾವಣೆ: ಶಿಡ್ಲಾಪೂರ ಜಿಲ್ಲೆಯಾದ್ಯಂತ ಪ್ರಚಾರ
ಶಿಗ್ಗಾವಿ 23: ಕನ್ನಡ ಸಾಹಿತ್ಯ ಪರಿಷತ್ನ್ನು ಇನ್ನೂ ಮುಂದೆ ತರುವ ಹಾಗೂ ಅಭಿವೃದ್ಧಿ ಪಡಿಸಬೇಕೆನ್ನುವ ಮಹದಾಸೆ ಹೊಂದಿರುವ ಸಾಹಿತಿ ಮಾರುತಿ ಶಿಡ್ಲಾಪೂರ ಅವರು ಜಿಲ್ಲೆಯಾದ್ಯಂತ ಪ್ರಚಾರವನ್ನು ಅತಿ ಬಿರುಸಿನಿಂದ ನಡೆಸುತ್ತಿದ್ದು ಅವರು ಗೆಲ್ಲುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿವೆ ಮತ್ತು ಅವರ ಗೆಲವು ನಿಶ್ಚಿತವಾಗಿದೆ ಎಂದರು ಬನ್ನೂರಿನ ಹಿರಿಯರಾದ ಟಾಕನಗೌಡ ಪಾಟೀಲ ಹೇಳಿದರು.ತಾಲೂಕಿನ ಬನ್ನೂರ ಗ್ರಾಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಹಾಗೂ ಹಿರಿಯ ಸಾಹಿತಿ ಮಾರುತಿ ಶಿಡ್ಲಾಪೂರ ಅವರ ಪ್ರಚಾರಾರ್ಥವಾಗಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ವಿ ಕೃ ಗೋಕಾಕರ ನಾಡಿನಲ್ಲಿ ಹುಟ್ಟಿದ ಇವರು ಅವರ ಸ್ಥಾನವನ್ನು ತುಂಬುತ್ತಿದ್ದಾರೆ,
ಸಾಹಿತಿಯಾಗಿ ಸುಮ್ಮನಿರಲಿಲ್ಲ ಜೀವನದೂದ್ದಕ್ಕೂ ಸಾಹಿತ್ಯಿಕ ಚಟುವಟಿಕೆಗಳನ್ನು ಮಾಡುತ್ತಾ ಬಂದವರು, ಕನ್ನಡ ನಾಡು ನುಡಿಗಾಗಿ ದುಡಿದವರು, ಅವರಿಗೆ ಈ ಬಾರಿ ಅಭೂತಪೂರ್ವ ಬೆಂಬಲ ಸಿಕ್ಕಿದ್ದು ಸಂತೋಷವಾಗಿದೆ ನಾವೆಲ್ಲರೂ ಅವರನ್ನು ಬೆಂಬಲಿಸಿ ಹೆಚ್ಚಿನ ಅಂತರದಿಂದ ಗೆಲ್ಲಿಸೋಣ ನಮ್ಮೂರಿನ 40 ಮತಗಳನ್ನು ಅವರಿಗೆ ನೀಡಿ ಅವರನ್ನು ಗೆಲ್ಲಿಸೋಣ ಎಂದರು. ಮುಖಂಡರಾದ ಶಂಕರಗೌಡ್ರ ಪೋಲಿಸ್ಪಾಟೀಲ್, ಫಕ್ಕಿರಗೌಡ ಹುಡೆದಗೌಡ್ರ, ಅರುಣ ಹುಡೆದಗೌಡ್ರ, ಎನ್ ಸಿ ಸಿದ್ದಣ್ಣವರ, ವಿನಾಯಕ ಲಂಗೋಟಿ, ಮಂಜುನಾಥ ಪಾಟೀಲ್, ನಾಗನಗೌಡ ಪೊಲೀಸಗೌಡ್ರ, ಮಂಜುನಾಥ ಮಾಯಣ್ಣನವರ, ಪ್ರಭು ಹರಿಜನ, ಎಮ್ ಬಿ ಹಳೆಮನಿ, ನಾಗಪ್ಪ ಬೆಂತೂರ, ಸಿ ಡಿ ಯತ್ನಳ್ಳಿ, ಸಿ ಎನ್ ಕಲಕೋಟಿ, ಎನ್ ಐ ಶೇತಸನದಿ, ಸಿ ಎಚ್ ತಾವರಗೊಂದಿ ಎಸ್ ಬಿ ಪಾಟೀಲ್, ಧರ್ಮನಾಥ ಪುಟ್ಟಣ್ಣನವರ, ಶೀತಲ ಹೊನ್ನಪ್ಪನವರ ಸೇರಿದಂತೆ ಇತರರು ಇದ್ದರು.