ಹೂವಿನ ಹಡಗಲಿ

ಕಸಾಪ ಹಿರೇಹಡಗಲಿ ಹೋಬಳಿ ಘಟಕ ಸೇವಾ ದೀಕ್ಷೆ ಸ್ವೀಕಾರ ; ಗ್ರಾಮೀಣ ಪ್ರದೇಶಗಳಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಚಿಂತನೆ : ರುದ್ರ​‍ಪ್ಪ

ಕಸಾಪ ಹಿರೇಹಡಗಲಿ ಹೋಬಳಿ ಘಟಕ ಸೇವಾ ದೀಕ್ಷೆ ಸ್ವೀಕಾರ ; ಗ್ರಾಮೀಣ ಪ್ರದೇಶಗಳಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಚಿಂತನೆ : ರುದ್ರ​‍ಪ್ಪ

ಲೋಕದರ್ಶನ ವರದಿ 

ಹೂವಿನಹಡಗಲಿ: ಅ.17- ಹೋಬಳಿ ಘಟಕಗಳಲ್ಲಿ ಸಾಹಿತ್ಯ ಸಮ್ಮೇಳನ ಮಾಡುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ನಾಡು-ನುಡಿ,ಭಾಷೆ,ಸಂಸ್ಕೃತಿ ಬೆಳವಣಿಗೆಗೆ ಶ್ರಮಿಸಬೇಕೇಂದು ಕಸಾಪ ಜಿಲ್ಲಾಧ್ಯಕ್ಷ ಡಾ.ನಿಷ್ಠೆರುದ್ರ​‍್ಪ ಹೇಳಿದರು. 

ತಾಲೂಕಿನ ಹೊಳಲು ಗ್ರಾಮದ ಪಾಂಡುರಂಗ ದೇಗುಲದಲ್ಲಿ ಶನಿವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ತು ಹಿರೇಹಡಗಲಿ ಹೋಬಳಿ ಘಟಕದ ಪದಾಧಿಕಾರಿಗಳ ಸೇವಾ ದೀಕ್ಷೆ ಸ್ವೀಕಾರ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿ ರಾಜ್ಯದಲ್ಲಿ ಅತಿ ಹೆಚ್ಚು ದತ್ತಿದಾನಿಗಳನ್ನು ನೀಡಿದ ಬಳ್ಳಾರಿ ಜಿಲ್ಲೆ ದಾನಿಗಳನ್ನು ಸ್ಮರಿಸಿದ ಅವರು ಜಿಲ್ಲೆಯಲ್ಲಿ 8ನೇ ಹೋಬಳಿ ಘಟಕಕ್ಕೆ ಚಾಲನೆ ನೀಡಲಾಗಿದೆ.ಮುಂದಿನ ದಿನಗಳಲ್ಲಿ ಕಸಾಪ ಶಾಲೆಯ ಮಕ್ಕಳಿಗೆ ಸಾಹಿತ್ಯ,ಭಾಷೆ,ನಾಡು-ನುಡಿಯ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದರು. 

ಹಿರೇಹಡಗಲಿ ಹೋಬಳಿ ಘಟಕದ ಅಧ್ಯಕ್ಷ ಜಿ.ಎಸ್‌.ಸತೀಶ,ಕಾರ್ಯದರ್ಶಿ ಪುಟ್ಟಪ್ಪ ತಂಬೂರಿ ಮೈಲಾರ,ಕೋಶಾಧ್ಯಕ್ಷ ಚಂದ್ರಶೇಖರ ಕೌಟಿ ಹಿರೇಹಡಗಲಿ, ಸಂಘಟನಾ ಕಾರ್ಯದರ್ಶಿ ವೆಂಕಟೇಶ ಹೊಳಲು,ಪ.ಜಾ. ಪ್ರತಿನಿಧಿಯಾಗಿ ಬೀಮಾನಾಯ್ಕ, ಪ.ಪಂ.ಕರಿಬಸಪ್ಪ,ಹಿಂದುಳಿದ ವರ್ಗ ಬಿ.ಮಲ್ಲನಗೌಡ, ಅಲ್ಪಸಂಖ್ಯಾತ ರಫಿ ಮಹಮ್ಮದ್,ಮಹಿಳಾ ಐನಳ್ಳಿ ಭಾಗ್ಯಮ್ಮ ಸೇವಾ ಸ್ವೀಕರ ಮಾಡಿದರು. 

ತಾಲೂಕು ಕಸಾಪ ಅಧ್ಯಕ್ಷ ಟಿ.ವೀರೇಂದ್ರಪಾಟೀಲ ಅಧ್ಯಕ್ಷತೆ ವಹಿಸಿದ್ದರು.ತಾಲೂಕು ಕಸಾಪ ಮಾಜಿ ಅಧ್ಯಕ್ಷ ಹೆಚ್‌.ಜಿ.ಪಾಟೀಲ ಮಾತನಾಡಿದರು.ಹೊಳಲು ಗ್ರಾ.ಪಂ.ಅಧ್ಯಕ್ಷೆ ರೇಖಾ,ದತ್ತಿದಾನಿ ಟಿ.ಕೆ.ಬ್ಯಾಡಿಗಿ, ಹೆಚ್‌.ಎಂ.ವಾಮದೇವಯ್ಯ,ಕೆ.ಸಿ.ಪರಶುರಾಮ ಇದ್ದರು.ಕವಿಗಳಾದ ಸೊಪ್ಪಿನ ಕೃಷ್ಣಪ್ಪ,ಎಂ.ಎಂ.ಮಲ್ಲಯ್ಯ, ಜಿ.ಎಸ್‌.ಸತೀಶ, ಕೆ.ಹರಿಶ್ಚಂದ್ರ,ಶೀಲಾ ಕಾವ್ಯ ವಾಚಿಸಿದರು. 


ಸುದ್ದಿ ಓದಿ