ಕಾರವಾರ

ಕಾರವಾರ: ಸಂಸತ್ ಅಣಕು ಪ್ರದರ್ಶನ ಪ್ರಚಲಿತ ವಿದ್ಯಾಮನಗಳನ್ನ ಚಚರ್ಿಸಿದ ವಿದ್ಯಾಥರ್ಿ ಶಾಸಕರು, ಸಂಸದರು

ಕಾರವಾರ: ಸಂಸತ್ ಅಣಕು ಪ್ರದರ್ಶನ ಪ್ರಚಲಿತ ವಿದ್ಯಾಮನಗಳನ್ನ ಚಚರ್ಿಸಿದ ವಿದ್ಯಾಥರ್ಿ ಶಾಸಕರು, ಸಂಸದರು

ಲೋಕದರ್ಶನ ವರದಿ

ಕಾರವಾರ 11: ಮುಖ್ಯಮಂತ್ರಿಯವರು ಕನ್ನಡವನ್ನು ನಿರ್ಲಕ್ಷಿಸಿ ಇಂಗ್ಲೀಷ್ ಮಾಧ್ಯಮವನ್ನು ಹೇರಲು ಪ್ರಯತ್ನಿಸುತ್ತಿರುವುದು, ಕನ್ನಡ ಮಾತೆಗೆ ದ್ರೋಹ ಬಗೆದಂತಾಗಿದೆ ಎಂದು ವಿರೋಧ ಪಕ್ಷದವರು  ಮುಖ್ಯಮಂತ್ರಿಗಳನ್ನು ಸದನದಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಆಡಳಿತ ಪಕ್ಷದವರು ವಿರೋಧ ಪಕ್ಷದವರ ಮೇಲೆ ಪ್ರತಿಯಾಗಿ ವಾಗ್ದಾಳಿ ಮಾಡಿದಾಗ  ಸದನದಲ್ಲಿ ಗದ್ದಲವುಂಟಾಗಿ ಸದನವನ್ನು ಕೆಲ ಕಾಲ ಸಭಾಧ್ಯಕ್ಷರು  ಮುಂದೂಡಿದರು.

ಸಭಾಧ್ಯಕ್ಷರು ಸದನದಲ್ಲಿ ತುಂಬ ಮಹತ್ವದ ವಿಧೇಯಕದ ಬಗ್ಗೆ ಚಚರ್ಿಸಬೇಕಾಗಿದೆ. ಈ ವಿಷಯದ ಕುರಿತು ಶೂನ್ಯ ವೇಳೆಯಲ್ಲಿ ಚಚರ್ಿಸಲು ಅವಕಾಶ ನೀಡುವುದಾಗಿ ಹೇಳಿದರೂ, ವಿರೋಧ ಪಕ್ಷದವರು ಸಭಾಧ್ಯಕ್ಷರ ಮಾತಿಗೆ ಮಣಿಯದೇ ಗದ್ದಲ ಮುಂದುವರಿಸಿದಾಗ ಸಭಾಧ್ಯಕ್ಷರಿಗೆ ಅನಿದರ್ಿಷ್ಠಾವಧಿ ಕಾಲದವರೆಗೆ ಸದನವನ್ನು ಮುಂದೂಡುವ ಅನಿವಾರ್ಯತೆ ಉಂಟಾಯಿತು. ಹೌದು! ಇದು ಶುಕ್ರವಾರ ಇಲ್ಲಿನ ಬಾಲಮಂದಿರ ಪ್ರೌಢಶಾಲೆಯಲ್ಲಿ ಸಕ್ಷಮ ಪ್ರಾಧಿಕಾರ ಸಂಸದೀಯ ವ್ಯವಹಾರಗಳ ಇಲಾಖೆ ಪ್ರೌಢಶಾಲಾ ವಿದ್ಯಾಥರ್ಿಗಳಿಗೋಸ್ಕರ ಆಯೋಜಿಸಿದ ಜಿಲ್ಲಾ ಮಟ್ಟದ ಅಣುಕು ಯುವ ಸಂಸತ್ ಸ್ಪಧರ್ೆಯಲ್ಲಿನ ಕಂಡು ಬಂದ ದೃಶ್ಯವಿದು.

ಬಳಿಕ ಅಣಕು ಸ್ಪಧರ್ೆಯಲ್ಲಿ ರಾಜ್ಯದ ವಿಧಾನಸಭೆ ಹಾಗೂ ದೇಶದ ಲೋಕಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷದವರು ನಡೆದುಕೊಳ್ಳುವ ಶಿಷ್ಟಾಚಾರ,ಅವರ ಮಾತುಗಾರಿಕೆಯನ್ನು ಅನುಕರಿಸಿದ ವಿದ್ಯಾಥರ್ಿಗಳು ನೈಜ ಸಂಸತ್ ಮಾದರಿಯಲ್ಲಿ ಮಾತನಾಡಿ ಗಮನ ಸೆಳೆದರು. ಆಡಳಿತ ಮತ್ತು ವಿರೋಧ ಪಕ್ಷಗಳಿಂದ ಸಭಾಪತಿ ಆಯ್ಕೆ ನಡೆಸಿದ ವಿದ್ಯಾಥರ್ಿಗಳು, ಮಾಜಿ ಪ್ರಧಾನಿ ದಿ. ಅಟಲ್ಬಿಹಾರಿ ವಾಜಪೇಯಿ, ಜಾಫರ್ ಶರೀಪ್, ಚಿತ್ರನಟ ಮತ್ತು ರಾಜಕಾರಣಿ ಅಂಬರೀಷ್ ಸೇರಿದಂತೆ ಈಚೆಗೆ ನಿಧನರಾದ  ಮಹನೀಯರಿಗೆ ನುಡಿನಮನದ ಮೂಲಕ ಸಂತಾಪ ಸೂಚಿಸಿ, ಅಣಕು ಸಂಸತ್ ಪ್ರದರ್ಶನ ಪ್ರಾರಂಭಿಸಿದರು. ವಿದ್ಯಾಥರ್ಿಗಳನ್ನು ಎರಡು ವಿಭಾಗಗಳಲ್ಲಿ ವಿರೋಧ ಪಕ್ಷದ ನಾಯಕರು ಹಾಗೂ  ಆಡಳಿತ ಪಕ್ಷದ ಮುಖ್ಯಮಂತ್ರಿ, ಗೃಹ, ಹಣಕಾಸು, ಶಿಕ್ಷಣ, ಆರೋಗ್ಯ ಸಚಿವರನ್ನಾಗಿ ನಿಯುಕ್ತಿಗೊಳಿಸಿ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿತ್ತು. ಇತ್ತೀಚೆಗೆ ರಾಜ್ಯದಲ್ಲಿ ನಡೆದು ಹೋದ ಮತ್ತು ಸದ್ಯ ನಡೆಯುತ್ತಿರುವ ಘಟನೆ,ಸಮಸ್ಯೆಗಳ ಬಗ್ಗೆ ಪ್ರಶ್ನೆ ಕೇಳಿ ಆಡಳಿತ ಪಕ್ಷದವರನ್ನು ಹೈರಾಣಾಗಿಸಿದ ವಿರೋಧ ಪಕ್ಷದ ನಾಯಕರಿಗೆ ಅಷ್ಟೇ ಪ್ರಬಲವಾಗಿ ಆಡಳಿತ ಪಕ್ಷದವರು ಉತ್ತರಿಸಿ ಎದಿರೇಟು ನೀಡುವ ದೃಶ್ಯ  ಕಂಡು ಬಂತು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನಹಿತ ಮರೆತು ಸದಾ ವಿದೇಶ ಪ್ರವಾಸದಲ್ಲಿರುವುದು ಏಕೆ ? ಎಂದು ಪ್ರಶ್ನೆ ವಿರೋಧ ಪಕ್ಷದವರು ಕೇಳಿದರೆ,ವ್ಯಾಪಾರ ದೃಷ್ಠಿಯಿಂದ ಹೊರ ಜಗತ್ತಿನೊಂದಿಗೆ ಪರಸ್ಪರ ಹೊಂದಾಣಿಕೆ ಮಾಡಲು ಪ್ರಧಾನಮಂತ್ರಿಗಳು ವಿದೇಶ ಪ್ರವಾಸ ಮಾಡಲೇ ಬೇಕಾಗಿದೆ ಎಂದು ಪ್ರಧಾನಮಂತ್ರಿಗಳ ಪರವಾಗಿ ಹಣಕಾಸು ಸಚಿವರು ಸಮಜಾಯಿಸಿ ನೀಡಿದರು.

ಬಳಿಕ ಕನ್ನಡ ಮಾಧ್ಯಮಕ್ಕೆ ಆದ್ಯತೆ ನೀಡುವುದನ್ನು ಬಿಟ್ಟು,ಮುಖ್ಯಮಂತ್ರಿಗಳು ಇಂಗ್ಲೀಷ್ ಮಾಧ್ಯಮವನ್ನೇಕೆ ಜನರ ಮೇಲೆ ಹೇರುತ್ತಿದ್ದಾರೆ ಎಂಬ ಪ್ರಶ್ನೆಗೆ ವಿದೇಶಗಳಲ್ಲಿ ಕನರ್ಾಟಕದ ಹಿರಿಮೆ ಪಸರಿಸುವ ಉದ್ದೇಶದಿಂದ ಇಂಗ್ಲೀಷ್ ಮಾಧ್ಯಮ ಕಲಿಸಬೇಕಾಗಿದೆ ಎಂದು ಗೃಹ ಸಚಿವರು ವಾದಿಸಿದರು. ಮಲ್ಪೆ ಬೋಟಿನಲ್ಲಿದ್ದ 8 ಜನರನ್ನು ಅಪಹರಿಸಲಾಗಿದೆ ಎಂಬ ಶಂಕೆ ಇದೆ. ಆದರೆ ಸರಕಾರ ಮಾತ್ರ ಮಲಗಿಕೊಂಡಿದೆ. ಈ ಬಗ್ಗೆ ಸರಕಾರ ಏನೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಿರೋಧ ಪಕ್ಷದವರು ಆಕ್ಷೇಪ ವ್ಯಕ್ತಪಡಿಸಿದಾಗ, ಉತ್ತರಿಸಿದ ಆಡಳಿತ ಪಕ್ಷದವರು, ನಾಪತ್ತೆಯಾದವರ ಕುಟುಂಬಕ್ಕೆ 1 ಲಕ್ಷ ರೂ.ತಾತ್ಕಾಲಿಕ ಪರಿಹಾರ ನೀಡಲಾಗಿದೆ. ನಾಪತ್ತೆಯಾದ  ಬೋಟು ಪತ್ತೆಗೆ ಇಸ್ರೋ ಸಹಾಯ ಪಡೆಯಲಾಗಿದೆ ಎಂದು ವಿರೋಧ ಪಕ್ಷದವರ ಬಾಯಿ ಮುಚ್ಚಿಸಿ ದರು. ಹೀಗೆ ಸಾಲಮನ್ನಾ,ಶೂನ್ಯ ಬಡ್ಡಿಯಲ್ಲಿ ಸಾಲಸೋಲ, ಭಾರತ್ ಬಂದ್ನಿಂದ ಸಾರ್ವಜನಿಕರಿಗೆ ಆದ ತೊಂದರೆ, ಕೊಡಗಿನ ಅತಿವೃಷ್ಠಿ ಸಂದರ್ಭದಲ್ಲಿ ಸಚಿವರಿಂದ  ಸಂತ್ರಸ್ಥರ ಮೇಲೆ ಬಿಸ್ಕೀಟ್ ಎಸೆತ,ಗೋವಾ ಸಕರ್ಾರ ಕಾರವಾರದವರ  ಮೀನು ನಿಷೇಧ ಹೇರಿದ್ದು, ನ್ಯಾಯಬೆಲೆ ಅಂಗಡಿಗಳಿಂದ ಗ್ರಾಹಕರ ವಂಚನೆ,ತಾಂಡವವಾಡುತ್ತಿರುವ ಬ್ರಷ್ಟಾಚಾರ,ಸೈಕಲ್ ಶಾಲೆಗೆ ಬಾರದ  ಸಮಸ್ಯೆ,ಪರಿಸರ ಮಾಲಿನ್ಯ ಹೀಗೆ ನಾನಾ ವಿಷಯಗಳ ಬಗ್ಗೆ ಆರೋಪ ಪ್ರತ್ಯಾರೋಪ, ಶೂನ್ಯವೇಳೆಯ ಚಚರ್ೆಗೆ ಬಂದವು. ಕಲಾಪ ಬಹಿಷ್ಕಾರ,ಮಸೂದೆ ಮಂಡನೆ ಮೂಲಕ ವಿದ್ಯಾಥರ್ಿಗಳ ಅಣಕು ಸಂಸತ್ ಪ್ರದರ್ಶನ ಗಮನ ಸೆಳೆಯಿತು.

ಉದ್ಘಾಟನೆ :

ಕಾರವಾರ ಶೈಕ್ಷಣಿಕ ಜಿಲ್ಲೆಯ 5 ತಾಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕುಗಳಿಂದ ತಲಾ 12 ವಿದ್ಯಾಥರ್ಿಗಳು ಸೇರಿ ಒಟ್ಟು 60 ವಿದ್ಯಾಥರ್ಿಗಳು ಈ ಜಿಲ್ಲಾ ಮಟ್ಟದ ಅಣುಕು ಯುವ ಸಂಸತ್ ಸ್ಪಧರ್ೆಯಲ್ಲಿ ಭಾಗವಹಿಸಿದ್ದರು. ಸ್ಪಧರ್ೆಗೆ ಚಾಲನೆ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೇಶಕ ಎನ್.ಜಿ.ನಾಯಕ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನದ ಬಗ್ಗೆ ಯುವಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಸ್ಪಧರ್ೆ ನಡೆಸಲಾಗುತ್ತಿದೆ ಎಂದರು.

ಅಣಕು ಸಂಸತ್ನಲ್ಲಿ ನಂದಿನಿ ಪ್ರಥಮ, ಯಶೋಧಾ ನಾಯ್ಕ ದ್ವಿತೀಯ :

 ಅತ್ಯುತ್ತಮವಾಗಿ ವಾದ ಮಂಡಿಸಿದ ಕಾರವಾರದ ಸೈಂಟ್ ಮೈಕಲ್ ಹೈಸ್ಕೂಲ್ನ ನಂದಿನಿ ಸಾವಂತ್, ಪ್ರಥಮ. ಭಟ್ಕಳದ ಶ್ರೀವಲ್ಲಿ ಪ್ರೌಢಶಾಲೆಯ ಯಶೋಧಾ ನಾಯ್ಕ,ದ್ವಿತೀಯ. ಹೊನ್ನಾವರದ ನ್ಯೂ ಇಂಗ್ಲೀಷ್ ಸ್ಕೂಲ್ನ ಇನಿ ಎಂ.ನಾಯ್ಕ ತೃತೀಯ,ಕಾರವಾರದ ಬಾಲಮಂದಿರ ಪ್ರೌಢಶಾಲೆಯ ಸಹನಾ ಗೋವೇಕರ ನಾಲ್ಕನೇ ಹಾಗೂ ಭಟ್ಕಳದ 

ಶ್ರೀವಲ್ಲಿ ಪ್ರೌಢಶಾಲೆಯ ಶಶಿಧರ್ ಮಹಾಲೆ ಐದನೇ ಬಹುಮಾನ ಪಡೆದುಕೊಂಡರು. ವಿಜೇತ ಐವರು ವಿದ್ಯಾಥರ್ಿಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರನ್ನು ರಾಜ್ಯಮಟ್ಟದ ಸ್ಪಧರ್ೆಗೆ ಆಯ್ಕೆ ಮಾಡಲಾಯಿತು. ಪ್ರಕಾಶ್ ನಾಯಕ,ತಾರಾನಾಥ್ ಹರಿಕಂತ್ರ,ರತ್ನಮಾಲಾ ಹೆಗಡೆ ನಿಣರ್ಾಯಕರಾಗಿದ್ದರು.


ಸುದ್ದಿ ಓದಿ