ಗೋಕಾಕ್

ರಮೇಶ ಅಲಕನೂರ, ಶಿವಾನಂದ ಪಾಟೀಲಗೆ ಕರ್ನಾಟಕ ವಿಕಾಸ ರತ್ನ ಪ್ರಶಸ್ತಿ

ರಮೇಶ ಅಲಕನೂರ, ಶಿವಾನಂದ ಪಾಟೀಲಗೆ ಕರ್ನಾಟಕ ವಿಕಾಸ ರತ್ನ ಪ್ರಶಸ್ತಿ

ಘಟಪ್ರಭಾ 02: ಸಮೀಪದ ಬೆಲ್ಲದ ಬಾಗೇವಾಡಿಯ ನಿವಾಸಿಗಳಾದ ರಮೇಶ ಮಾರುತಿ ಅಲಕನೂರ ಹಾಗೂ ಶಿವಾನಂದ ಗೋಪಾಲ ಪಾಟೀಲ ಇವರಿಗೆ ಕರ್ನಾಟಕ ವಿಕಾಸ ರತ್ನ ರಾಜ್ಯ" ಪ್ರಶಸ್ತಿ ಲಭಿಸಿದೆ. 

ಇವರು ಸಹಕಾರಿ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ದಿನಾಂಕ 28-9-2023 ರಂದು ಮೈಸೂರಿನ ಟೌನ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ತು (ರ) ಮೈಸೂರ ಇವರು ಕೊಡಮಾಡುವ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ "ಕರ್ನಾಟಕ ವಿಕಾಸ ರತ್ನ" ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಲಾಯಿತು. 


ಸುದ್ದಿ ಓದಿ