ಗೋಕಾಕ್

ಕರ್ನಾಟಕ ನಾಮಕರಣ 50ನೇ ಸುವರ್ಣ ವರ್ಷಾಚರಣೆ: ಕನ್ನಡ ಜ್ಯೋತಿ ಯಾತ್ರೆ

ಕರ್ನಾಟಕ ನಾಮಕರಣ 50ನೇ ಸುವರ್ಣ ವರ್ಷಾಚರಣೆ: ಕನ್ನಡ ಜ್ಯೋತಿ  ಯಾತ್ರೆ

ಗೋಕಾಕ 02: ಕರ್ನಾಟಕ ಪ್ರಜಾ ರಕ್ಷಣಾ ಸೇನೆ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ 68ನೇ ಕನ್ನಡ ರಾಜ್ಯೋತ್ಸವ ಹಾಗೂ ಮೈಸೂರ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾದ 50ನೇ ಸುವರ್ಣ ವರ್ಷಾಚರಣೆ ಅಂಗವಾಗಿ ಕನ್ನಡ ಜ್ಯೋತಿ  ಯಾತ್ರೆ ಬರುವ ಶನಿವಾರ ದಿ. 04 ಮತ್ತು 05ರಂದು ಹಮ್ಮಿಕೊಂಡಿದೆ. ಅರಬಾವಿ ಮತಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಕೆ ಎಮ್ ಎಫ್ ನಿರ್ದೇಶಕರಾದ  ಬಾಲಚಂದ್ರ ಜಾರಕಿಹೊಳಿ ಈ ಯಾತ್ರೆಗೆ ಚಾಲನೆ ನೀಡಲಿದ್ದಾರೆ.  

ನಗರದ ಎನ್ ಎಸ್ ಎಫ್ ಆವರಣದಲ್ಲಿ ಬೆಳಗ್ಗೆ 10:30 ಕ್ಕೆ ಆರಂಭವಾಗಿ ಗೋಕಾಕ ನಗರದ ಪ್ರಮುಖ ರಸ್ತೆಗಳಲ್ಲಿ ಜ್ಯೋತಿ ಯಾತ್ರೆ ನಡೆಯಲಿದ್ದು ನಂತರ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ವಿವಿಧ  ಗ್ರಾಮಗಳಲ್ಲಿ ಯಾತ್ರೆ ಮಾಡುತ್ತಾ ಅಥಣಿ ಪಟ್ಟಣದಲ್ಲಿ ಜ್ಯೋತಿ ಯತ್ರೆ ಸಮಾರೋಪಗೊಳ್ಳಲಿದೆ ಎಂದು ಕರ್ನಾಟಕ ಪ್ರಜಾ ರಕ್ಷಣಾ ಸೇನೆ ಬೆಳಗಾವಿ ಜಲ್ಲಾ ಘಟಕದ ಅಧ್ಯಕ್ಷ ಆನಂದ ಸೋರಗಾಂವಿ ತಿಳಿಸಿದ್ದಾರೆ. ಪತ್ರಿಕಾ ಗೋಷ್ಟಿಯಲ್ಲಿ ಗೋಕಾಕ ತಾಲೂಕ ಅಧ್ಯಕ್ಷ ಮಂಜುನಾಥ ಬುಳ್ಳಿ ಮೂಡಲಗಿ ತಾಲೂಕ ಅಧ್ಯಕ್ಷ ವಿಠ್ಠಲ ಹಲಗಿ ಅಥಣಿ ತಾಲೂಕ ಅಧ್ಯಕ್ಷ ಧರೆಪ್ಪ ಚೌಗಲಾ ಹಣಮಂತ ಐಹೊಳೆ ಇದ್ದರು. 


ಸುದ್ದಿ ಓದಿ