ಯರಗಟ್ಟಿ

ಕರ್ನಾಟಕ ಮಾಧ್ಯಮ ರತ್ನ ಪ್ರಶಸ್ತಿ ಪ್ರದಾನ

ಕರ್ನಾಟಕ ಮಾಧ್ಯಮ ರತ್ನ ಪ್ರಶಸ್ತಿ ಪ್ರದಾನ

ಯರಗಟ್ಟಿ 27: ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಈರಣ್ಣಾ ಹೂಲ್ಲೂರ, ಬಾಳಕೃಷ್ಣ ಮಿರಜಕರ, ಮಂಜುನಾಥ ಜಗದಾರ ಮತ್ತು ಮಹೇಶ ಮಿರಜಕರ ಅವರಿಗೆ ರಾಜ್ಯ ಮಟ್ಟದ ಕರ್ನಾಟಕ ಮಾಧ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಬೆಂಗಳೂರು ನೆಲಮಂಗಲದ ಎಮ್‌.ವಿ.ಎಮ್‌. ಕನ್ವೆನ್‌ಷನ್ ಹಾಲ್‌ನಲ್ಲಿ ಜರುಗಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ 2ನೇ ರಾಜ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ವನಕಲ್ಲು ಮಠ ಬಸವರಮಾನಂದ ಶ್ರೀಗಳು, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಜಾನಪದ ಗಾರುಡಿಗ ಗುರುರಾಜ ಹೊಸಕೋಟೆ,, ನೆಲಮಂಗಲ ಶಾಸಕ ಎನ್‌. ಶ್ರೀನಿವಾಸ,  ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ, ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ, ರಾಜ್ಯ ಉಪಾಧ್ಯಕ್ಷ ಬಿ.ಎಮ್‌. ಶಿರಸಂಗಿ, ರಾಜ್ಯ ಕಾರ್ಯದರ್ಶಿ ಫೀರೋಜ ಖಾದ್ರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ