ಯರಗಟ್ಟಿ

ಇಂದಿನಿಂದ ಕರಿಸಿದ್ದೇಶ್ವರ ಜಾತ್ರೆ : ಸಾಮೂಹಿಕ ವಿವಾಹ

ಇಂದಿನಿಂದ ಕರಿಸಿದ್ದೇಶ್ವರ ಜಾತ್ರೆ : ಸಾಮೂಹಿಕ ವಿವಾಹ

ಲೋಕದರ್ಶನ ವರದಿ 

ಯರಗಟ್ಟಿ 26: ಸಮೀಪದ ಸುಕ್ಷೇತ್ರ ಐತಿಹಾಸಿಕ ಪರಂಪರೆಯುಳ್ಳ ಯರಝರ್ವಿ ಗ್ರಾಮದ ಕರಿಸಿದ್ದೇಶ್ವರ ಜಾತ್ರೆ ಸೋಮವಾರ ದಿ. 27 ರಿಂದ 29 ರವರಗೆ ನಡೆಯಲಿದೆ. 


ಮಂಗಳವಾರ ದಿ. 28 ರಂದು ಉಚಿತ ಸಾಮೂಹಿಕ ವಿವಾಹ ಜರುಗಲಿದ್ದು,  ಮುಂಜಾನೆ ಕರಿಸಿದ್ದೇಶ್ವರ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮುಂತಾದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗುವುವು.  


    ಮುರಗೋಡದ ನೀಲಕಂಠ ಮಹಾಸ್ವಾಮಿಜಿ, ಘೋಟಗೇರಿಯ ಮಲ್ಲಯ್ಯ ಮಹಾಸ್ವಾಮಿಜಿ, ಬಾಲಕೋಟೆಯ ಪರಮರಾಮಾರೂಡ ಮಹಾಸ್ವಾಮಿಗಜಿ, ಯರಝರ್ವಿಯ ಚಿದಾನಂದ ಮಹಾಸ್ವಾಮಿಜಿ ಸಾನಿದ್ಯವನ್ನು ವಹಿಸಲ್ಲಿದ್ದಾರೆ. ಮುಖ್ಯ ಅತಿಥಿ ಕಾಂಗ್ರೇಸ್ ಮುಖಂಡ ಸೌರವ ಚೋಪ್ರಾ, ಅತಿಥಿ ಸಂತೋಷ ಹಾದಿಮನಿ, ಮಹಾದೇವ ಯಡ್ರಾಂವಿ, ಅನೇಕರು ಆಗಮಿಸಲ್ಲಿದ್ದಾರೆ ಮತ್ತು ಬುಧುವಾರ ದಿ. 29 ರಂದು ಭಂಡಾರ ಒಡೆಯುವದರೊಂದಿಗೆ ಜಾತ್ರೆ ಮಂಗಲಗೊಳ್ಳಲಿದೆ ಎಂದು ಜಾತ್ರಾ ಕಮೀಟಿಯವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ. 


ಸುದ್ದಿ ಓದಿ