ಸಂಭ್ರಮದ ಕಾರಿಮನಿ ಮಲ್ಲಯ್ಯ ಜಾತ್ರೆ
ಯರಗಟ್ಟಿ 01: ಸಮೀಪದ ಕಾರಿಮನಿ ಗ್ರಾಮದ ಪ್ರಸಿದ್ಧಮಲ್ಲಯ್ಯನ ಜಾತ್ರೆ ಸಂಭ್ರಮದಿಂದ ಜರಗಿತು. ಶ್ರಾವಣ ಮಾಸದ ಕೊನೆಯ ಬಾನುವಾರ ಬಹು ವಿಜೃಂಭಣೆಯಿಂದ ಜರುಗಿತು. ನಸುಕಿನಿಂದಲೇ ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾಲಂಕಾರ ಹಾಗೂ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಇದಕ್ಕಾಗಿ ಸಮಿತಿಯವರು ಸಕಲ ಸಿದ್ಧತೆ ಕೈಗೊಂಡಿದ್ದಾರೆ. ಶ್ರಾವಣ ಮಾಸದ ಕೊನೆಯ ಭಾನುವಾರ ದೇವಸ್ಥಾನದಲ್ಲಿ ವಗ್ಗಯ್ಯರು ಢಮರುಗ ಹಿಡಿದು ಮಂತ್ರಘೋಷಗಳನ್ನು ಪರಿಸಿದಾಗ ಹರಕೆ ತೀರಿಸುವ ಭಕ್ತರು ಏಳುಕೋಟಿ, ಏಳುಕೋಟಿ ಚಾಂಗ್ ಭಲೋ... ಎನ್ನುತ್ತಾ ಪಲ್ಲಕ್ಕಿ ಜೊತೆ ನಂದಿಕೋಲು ಹಿಡಿದು ದೇವಸ್ಥಾನ ಪ್ರದಕ್ಷಿಣೆ ಹಾಕಿದರು. ಜಿಲ್ಲೆಯೂ ಸೇರಿದಂತೆ ಅಕ್ಕಪಕ್ಕದ ಜಿಲ್ಲೆ ಹಾಗೂ ನೆರೆ ರಾಜ್ಯದ ಜನರೂ ಪಾಲ್ಗೊಂಡರು.