ಕರಿಬಸವೇಶ್ವರ ಸ್ವಾಮಿ ರಥೋತ್ಸವ

ಬ್ಯಾಡಗಿ 10: ತಾಲೂಕಿನ ಮೊಟೆಬೆನ್ನೂರ ಗ್ರಾಮದಲ್ಲಿ  ಮಂಗಳವಾರ ಮುಂಜಾನೆ  ಕರಿಬಸವೇಶ್ವರ ಸ್ವಾಮಿ ರಥೋತ್ಸವ ಸಡಗರ ಸಂಭ್ರಮದಿಂದ ನಡೆಯಿತು.ಸೋಮವಾರ ಸಂಜೆ ತಾತನ ಗದ್ದುಗೆಗೆರುದ್ರಾಭಿಷೇಕ ನಡೆಸಿದ ನಂತರ ರಥಕ್ಕೆ ಕಳಸ ಕಟ್ಟುವ ಕಾರ್ಯ ನಡೆಸಲಾಯಿತು. ಮಂಗವಾರ ಬೆಳಿಗ್ಗೆ  ಸ್ವಾಮಿ ದೇವಸ್ಥಾನದಲ್ಲಿ ತಾತನ ಗದ್ದುಗೆಗೆ ವಿಷೇಷ ಪೂಜೆ  ಮಾಡಲಾಯಿತು. 

ಬೆಳಗ್ಗೆ 8 ಕ್ಕೆ ದೇವಸ್ಥಾನದ ಎದುರಿನಿಂದ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.  ವಾದ್ಯಗಳು ಪುರವಂತರ ನುಡಿಗಳೊಂದಿಗೆ ನಂದಿಧ್ವಜ ರಥೋತ್ಸವದಲ್ಲಿ ಗಮನ ಸೆಳೆದವು.  ರಥವು ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಭಕ್ತರು ಹಣ್ಣು ಕಾಯಿ ನೈವೆದ್  ಸಮರ​‍್ಿಸಿ ಕರಿಬಸವೇಶ್ವರ ತಾತನ ದರ್ಶನ ಪಡೆದು ಪುನೀತರಾದರು.