ಕರಿಯಮ್ಮದೇವಿ ಮರಿಯಮ್ಮದೇವಿ ಜಾತ್ರಾಮಹೋತ್ಸವ
ಬ್ಯಾಡಗಿ: ತಾಲೂಕಿನ ಬಿಸಲಹಳ್ಳಿ ಗ್ರಾಮದ ಹೊಳಬಸವೇಶ್ವರ ಹಾಗೂ ಕರಿಯಮ್ಮದೇವಿ ಮರಿಯಮ್ಮದೇವಿ ಜಾತ್ರಾಮಹೋತ್ಸವ ಮಂಗಳವಾರ ಶ್ರದ್ಧಾಭಕ್ತಿಯಿಂದ ಜರುಗಿತು.
ಬೆಳಗ್ಗೆ 8ಗಂಟೆಗೆ ಜಾತ್ರ್ಯೋತ್ಸವದ ಅಂಗವಾಗಿ ಹೊಳಬಸವೇಶ್ವರ ಗದ್ದುಗೆಗೆ ಮಹಾರುದ್ರಾಭಿಷೇಕ, ಮಹಾಪೂಜೆ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ಜರುಗಿತು. ರಾತ್ರಿ 9ಗಂಟೆಗೆ ಕರಿಯಮ್ಮದೇವಿ ಹಾಗೂ ಮರಿಯಮ್ಮದೇವಿ ಕಾತರ್ಿಕೋತ್ಸವ ಜರುಗಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ರಥೋತ್ಸವವನ್ನು ಭಕ್ತರು ವಿಜೃಂಣೆಯಿಂದ ಸೇವೆ ಸಲ್ಲಿಸುವ ಮೂಲಕ ತೇರು ಎಳೆದು ಭಕ್ತಿ ಮೆರೆದರು.
ತೇರಿನ ಕಳಸಕ್ಕೆ ಬಾಳೆಹಣ್ಣು ಉತ್ತತ್ತಿಗಳನ್ನು ಎಸೆಯುವ ಮೂಲಕ ಇಷ್ಟಾರ್ಥಸಿದ್ಧಿಯ ಸಂಕಲ್ಪ ಮಾಡಿಕೊಂಡರು. ರಥೋತ್ಸವದ ಮುಂದೆ ವಿವಿಧ ಕಲಾತಂಡಗಳ ವಾದ್ಯ ವೃಂದಗಳು ಭಕ್ತಿಸೇವೆಯಲ್ಲಿ ಸಲ್ಲಿಸುತ್ತಿರುವ ಭಕ್ತ ಜನಸ್ತೋಮ ಸದೃಶ್ಯವಾಗಿತ್ತು.
ಜನಮನ ಸೆಳೆದ ವೀರಗಾಸೆ ತಂಡದವರು ಪ್ರಾಚೀನಕಾಲದ ಐತಿಹಾಸಿಕ ಘಟನೆ, ಶರಣರ ಜೀವನದ ಘಟನೆಗಳ ಒಡಪುಗಳು, ನೈತಿಕ ಜೀವನದ ದೃಷ್ಟಾಂತ, ಧಾಮರ್ಿಕ ಕಥಾಸಾರಗಳು ವೀರಾವೇಶದಲ್ಲಿ ಹೇಳುತ್ತಿದ್ದ ವೀರಗಾಸೆ ತಂಡ ಜನಮನ ಸೆಳೆಯಿತು.