ಕಾರ್ಗಿಲ್ ಯುದ್ಧ: ಭಾರತೀಯ ಸೈನಿಕರು ಶೌರ್ಯ ಪ್ರದರ್ಶಿಸಿದ ದಿನ
ಯರಗಟ್ಟಿ 26: ಕಾರ್ಗಿಲ್ ಯುದ್ಧ ಭಾರತೀಯ ಪ್ರತಿಯೊಬ್ಬ ಪ್ರಜೆಯ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವಂತಹ ದಿನವಾಗಿದ್ದು, ಶೌರ್ಯ ಪರಾಕ್ರಮವನ್ನು ಪ್ರದರ್ಶಿಸಿದ ದಿನವಾಗಿದೆ. ಭಾರತೀಯರಲ್ಲಿ ದೇಶ ಪ್ರೇಮವನ್ನು ಮತ್ತು ಭಕ್ತಿಯನ್ನು ಅರ್ಿಸುವ ದಿನವಾಗಿದೆ ಎಂದು ನಿವೃತ್ತ ಶಿಕ್ಷಕ ಆರ್. ಎಲ್. ಜೂಗನವರ ಹೇಳಿದರು.
ಪಟ್ಟಣದ ಮಹಾಂತ ದುರದುಂಡೇಶ್ವರ ಮಠದಲ್ಲಿ ರಾಷ್ಟ್ರೀಯ ಮಾಜಿ ಸೈನಿಕರ ಸಮನ್ವಯ ಸಮೀತಿ ಹಾಗೂ ಜೈ ಜವಾನ್ ಜೈ ಕಿಸಾನ್ ವಿವಿಧ ಉದ್ದೇಶಗಳ ಸಹಕಾರಿ ಸಂಘ ಮತ್ತು ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ವಿಶೇಷವಾಗಿ ಆಚರಿಸಲಾದ 25ನೇ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತೀಯರು ಅಪರೇಶನ್ ವಿಜಯ್ ಮೂಲಕ ಕಾರ್ಗಿಲ್-ದ್ರಾಸ್ ವಲಯದಲ್ಲಿ ಪ್ರದರ್ಶಿಸಿದ ಶೌರ್ಯದ ನೆನಪಿಗಾಗಿ ಈ ದಿನ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಸೈನಿಕರ ಗೌರವಾರ್ಥವಾಗಿ ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸ್ ದಿನವನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ. ಇಂಡಿಯಾ ಗೇಟ್ನಲ್ಲಿರುವ ಅಮರ್ ಜವಾನ್ ಜ್ಯೋತಿಯಲ್ಲಿ ಸೈನಿಕರಿಗೆ ಗೌರವ ಸಲ್ಲಿಸುತ್ತಾರೆ.ಕಾರ್ಗಿಲ್ನಲ್ಲಿ ನಡೆದ ಈ ಯುದ್ಧದಲ್ಲಿ ಪಾಕಿಸ್ತಾನವನ್ನು ನಮ್ಮ ವೀರ ಯೋಧರು ಸದೆ ಬಡೆದು ಅವರು ಆಕ್ರಮಿಸಿಕೊಂಡಿದ್ದ ಜಾಗವನ್ನು ವಶಕ್ಕೆ ಪಡೆದ ದಿನವಾಗಿದೆ. 1999 ರ ಮೇ ಇಂದ ಜುಲೈ ಚಳಿಗಾಲದಲ್ಲಿ ಮೈನಸ್ ಡಿಗ್ರಿ ಸೆಲ್ಸಿಯಸ್ ಇಳಿಯುತ್ತದೆ. ಈ ಸಂದರ್ಭ ಇಲ್ಲಿ ಗಡಿ ಕಾಯುವುದೇ ಅತ್ಯಂತ ಸವಾಲಿನ ಕೆಲಸವಾಗಿದೆ.ಪಾಕ್ನ ಸೇನೆ, ಭಾರತದ ಒಳಗೆ ನುಸುಳಿದ್ದನ್ನು ನೋಡಿದ ಕುರಿಗಾಹಿಗಳ ಖಚಿತ ಮಾಹಿತಿಯೊಂದಿಗೆ ಮತ್ತು ಭಾರತದ ಯೋದರನ್ನು ಚಿತ್ರಹಿಂಸೆ ನೀಡಿ ಕೊಂದದ್ದನ್ನು. ಗಂಭೀರವಾಗಿ ಪರಿಗಣಿಸಿದ ಭಾರತ, ತಕ್ಷಣವೇ ಸೈನಿಕರನ್ನ ಸಜ್ಜುಗೊಳಿಸಿ ಆಪರೇಷನ್ ವಿಜಯದ ಹೆಸರಿನಲ್ಲಿ ಕಾರ್ಯಚರಣೆ ಮಾಡಿತು.ಶತ್ರುಗಳನ್ನು ಬಗ್ಗು ಬಡಿದ ಭಾರತೀಯ ಸೈನಿಕರು, ಪಾಕಿಗಳನ್ನು ಹಿಮ್ಮೆಟ್ಟಿಸಿ ಭಾರತವು ಯುದ್ಧ ಗೆದ್ದಿತು. ಇದಾದ ಬಳಿಕ ಪ್ರತೀ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸ್ ಅನ್ನು ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಕಾರ್ಗಿಲ್ ಸೈನಿಕರನ್ನು ಸ್ಮರಿಸಿ ಭಾರತದ ಭೂಪಟ ರಚನೆ ಮಾಡಿ ಸೈನಿಕರ ರೈಪಲ್ ನ ಚಿತ್ರದೊಂದಿಗೆ, ಶಾಲಾ ಮಕ್ಕಳು ದೀಪ ಬೆಳಗಿಸಿ ಗೌರವ ನಮನವನ್ನು ಸಲ್ಲಿಸಿದರು.
ಹುತಾತ್ಮರಾದ ಮನೋಜ್ ಕುಮಾರ್, ವಿಕ್ರಂ ಬಾತ್ರ, ಸಂಜಯ್ ಕುಮಾರ್, ಅನುಜ್ ಮತ್ತು ಯೋಗೇಂದ್ರ ಸಿಂಗ್ ವೀರ ಸೈನಿಕರನ್ನು ಸ್ಮರಿಸಿ ಭಾರತದ ಭೂಪಟ ರಚನೆ ಮಾಡಿ ಸೈನಿಕರ ರೈಪಲ್ನ ಚಿತ್ರದೊಂದಿಗೆ, ಶಾಲಾ ಮಕ್ಕಳು ನೃತ್ಯ ಮಾಡುವ ಮೂಲಕ ಗೌರವ ನಮನವನ್ನು ಸಲ್ಲಿಸಿದರು. ಇದಲ್ಲದೇ 1962 ರ ರೈಫಲ್ ಮಾನ್ ಜಸ್ವಂತ್ ಸಿಂಗ್ ರಾವತ್ ಮತ್ತು 1965 ರ ಆಶಾ ರಾಮ್ ತ್ಯಾಗಿ ಅಂತಹ ಮಹಾನ್ ಸೈನಿಕರನ್ನು ಸ್ಮರಿಸಿ ಹೂವುಗಳನ್ನು ಅರ್ಿಸಿದರು.
ಡಾ. ಶಿವಲಿಂಗ ಮುರುಘರಾಜೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವನ್ನು, ಗಣಪತಿ ಮಹಾರಾಜರು ಸಾನಿಧ್ಯ ವಹಿಸಿದ್ದರು, ಅಧ್ಯಕ್ಷತೆಯನ್ನು ಮಾಜಿ ಸೈನಿಕ ಎಮ್. ಎಸ್. ಅಳಗೋಡಿ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಮಾಜಿ ಜಿ. ಪಂ. ಸದಸ್ಯ ಅಜೀತಕುಮಾರ ದೇಸಾಯಿ, ಎ. ಪಿ.ಎಂ.ಸಿ ಕಾರ್ಯದರ್ಶಿ ಪ್ರವೀಣ ಅಂಗಡಿ, ಪಿಎಸ್ಐ ಆಯ್ ಎಂ ಹಿರೇಗೌಡರ, ಮಾಜಿ ತಾ. ಪಂ. ಅಧ್ಯಕ್ಷ ಪೌರ್ವತಗೌಡ ಪಾಟೀಲ, ಮಹಾಂತೇಶ ಜಕಾತಿ, ಭಾಸ್ಕರ ಹಿರೇಮೆತ್ರಿ, ಶಿವಾನಂದ ಕರಿಗೋಣ್ಣವರ, ರಫೀಕ್ ಡಿ ಕೆ, ಸೋಮು ರೈನಾಪೂರ, ಚೇತನ ಜಕಾತಿ, ಕೃಷ್ಣಮೂರ್ತಿ ತೊರಗಲ, ಮಾಜಿ ಸೈನಿಕರಾದ ಕುಮಾರ ಹಿರೇಮಠ, ಮತ್ತು ಮಾಜಿ ಸೈನಿಕರು ಹಾಗೂ ಶಾಲೆಯ ವಿದ್ಯಾರ್ಥಿಗಳು ಇದ್ದರು.