ಯರಗಟ್ಟಿ

16ರಿಂದ ಯರಝರ್ವಿ ಗ್ರಾಮದ ಕರೇಮ್ಮದೇವಿ ಜಾತ್ರಾ ಮಹೋತ್ಸವ

16ರಿಂದ ಯರಝರ್ವಿ ಗ್ರಾಮದ ಕರೇಮ್ಮದೇವಿ ಜಾತ್ರಾ ಮಹೋತ್ಸವ

ಯರಗಟ್ಟಿ: ಸಮೀಪದ ಯರಝರ್ವಿ ಗ್ರಾಮದ ಕರೇಮ್ಮದೇವಿ ಜಾತ್ರಾ ಮಹೋತ್ಸವ ದಿ.16 ಬೆಳಿಗ್ಗೆ ವಿಷೇಶ ಪೂಜೆ ಅಲಂಕಾರ ಜರಗುವುದು ಮತ್ತು ಜಾತ್ರಾ ಮಹೋತ್ಸವ ಪ್ರಾರಂಭಗೊಳ್ಳುವುದು. ಅಂದು ಸಂಜೆ ಎಲ್ಲ ದೇವರುಗಳ ಪಲ್ಲಕ್ಕಿ ಉತ್ಸವ ಬರಮಾಡಿಕೊಳ್ಳುವುದು. ರಾತ್ರಿ 10 ಘಂಟೆಗೆ ವಾದ್ಯಮೇಳ, ಡೊಳ್ಳಿನ ವಾಲಗ ಜರಗುವುದು. 

ಶುಕ್ರವಾರ ದಿ.17 ರಂದು ವಿಷೇಶ ಮಹಾ ಪೂಜೆ ವಿವಿದ ಕಾರ್ಯಕ್ರಮಗಳು ವೇ.ಮೂ. ಮುರಗಯ್ಯ ಸ್ವಾಮಿಗಳು ಹಿರೇಮಠ ಇವರಿಂದ ಜರಗುವುದು. ನಂತರ ಸರ್ವ ಧರ್ಮ ಸಾಮೂಹಿಕ ವಿವಾಹ ದಿವ್ಯ ಸಾನಿದ್ಯ ಪೂಜ್ಯ ಚಿದಾನಂದ ಮಹಾಸ್ವಾಮಿಗಳು ಯರಝರ್ವಿ, ಸಾನಿದ್ಯ ಫಕ್ಕೀರ​‍್ಪ ಲಿಂಗರಡ್ಡಿ ಧರ್ಮಧರ್ಶಿಗಳು, ಉಧ್ಘಾಟಕರು ವಿರುಪಾಕ್ಷ ಮಾಮನಿ ಬಿಜೆಪಿ ಮುಖಂಡರು ಸವದತ್ತಿ, ಅಧ್ಯಕ್ಷತೆ ರತ್ನಾ ಮಾಮನಿ ಬಿಜೆಪಿ ಮುಖಂಡರು ಸವದತ್ತಿ, ಮುಖ್ಯ ಅಥಿತಿಗಳು ಬಸಯ್ಯ ಹಿರೇಮಠ ಅಧ್ಯಕ್ಷ ಯಲ್ಲಮ್ಮ ದೇವಸ್ಥಾನ ಆಡಳಿಮಂಡಳಿ, ಈರಣ್ಣ ಚಳಕೊಪ್ಪ, ಪುಂಡಲೀಕ ಮೇಟಿ, ವಿಧ್ಯಾರಾಣಿ ಸೊನ್ನದ, ಎಸ್ ಎಚ್ ನಾಯ್ಕರ ನಿವೃತ ಕೃಷೀ ಅಧಿಕಾರಿ ಯರಗಟ್ಟಿ, ಬಸವರಾಜ ಮುತ್ತೆನ್ನವರ, ಡಾ. ಎ ಎಂ ಶಂಕರಲಿಂಗಪ್ಪ ಮುಂತಾದವರು ಪಾಲ್ಗೂಳ್ಳುವುರು ಎಂದು ಜಾತ್ರಾ ಕಮಿಟಿ ಪ್ರಕಟನೆ ತಿಳಸಿದ್ದಾರೆ. ಶನಿವಾರ 18ರಂದು ಬಂಡಾರ ಒಡೆಯಿವುದರ ಮುಖಾಂತರ ಕರೇಮ್ಮಾ ದೇವಿಯ ಜಾತ್ರೆ ಸಂಪನ್ನಗೊಳ್ಳವುದು. 


ಸುದ್ದಿ ಓದಿ