ಯರಗಟ್ಟಿ

ಕರಾಳ ದಿನಾಚರಣೆಗೆ ಅನುಮತಿ ನೀಡದಂತೆ ಕರವೇ ಆಗ್ರಹ

ಕರಾಳ ದಿನಾಚರಣೆಗೆ ಅನುಮತಿ ನೀಡದಂತೆ ಕರವೇ ಆಗ್ರಹ

ಯರಗಟ್ಟಿ 30: ಎಂಇಎಸ್ ಸಂಘಟನೆ ನ.1ರಂದು ಆಯೋಜಿಸುವ ಕರಾಳ ದಿನಕ್ಕೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಕರವೇ ತಾಲ್ಲೂಕು ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇಲ್ಲಿನ ಸಂಗೋಳ್ಳಿ ರಾಯಣ್ಣ ವೃತ್ತದಿಂದ ತಹಶೀಲ್ದಾರ ಕಚೇರಿವರೆಗೆ ಪ್ರತಿಭಟನೆ ಮೂಲಕ ತೆರಳಿ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. 

ಕರವೇ ಅಧ್ಯಕ್ಷ ರಫೀಕ್ ಡಿ.ಕೆ ಕನ್ನಡ ರಾಜ್ಯೋತ್ಸವ ಬಹಿಷ್ಕರಿಸಿ ಕರಾಳ ದಿನಾಚರಣೆ ನಡೆಸುವ, ನಾಡ ವಿರೋಧಿ ಈ ಕ್ರಮಕ್ಕೆ ಅವಕಾಶ ಕೊಡಬಾರದು. ಅದನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು. 

ಈ ವೇಳೆ ಕರವೇ ಉಪಾಧ್ಯಕ್ಷ ಮಂಜು ಬಾವಿಹಾಳ, ಪ್ರಧಾನ ಕಾರ್ಯದರ್ಶಿ ಚನ್ನಪ್ಪ ಪಣದಿ, ವಿಕ್ರಂ ದೇಸಾಯಿ, ಲಕ್ಕಪ್ಪ ಜಗದಾರ, ನವೀನ ನೀಸಾನಿಮಠ, ವಿನೋದ್ ದೇವರಡ್ಡಿ, ಫಾರೂಕ್ ಅತ್ತಾರ,ಮಹಾದೇವ ಮಲಶೆಟ್ಟಿ, ಪ್ರಮೋದ ಬಡಿಗೇರ, ಶೇಖರ ಇಟ್ನಾಳ ಸೇರಿದಂತೆ ಆಟೋ ಚಾಲಕರು ಪಾಲ್ಗೊಂಡಿದ್ದರು. 


ಸುದ್ದಿ ಓದಿ