ಕಾರವಾರ

ಚಿತ್ತಾಕುಲಾ ಪಂಚಾಯತ್ ವಿರುದ್ಧ ಜು.2ರಂದು ಬಂದ್‌ಗೆ ಕರವೇ ಕರೆ

ಚಿತ್ತಾಕುಲಾ ಪಂಚಾಯತ್ ವಿರುದ್ಧ ಜು.2ರಂದು ಬಂದ್‌ಗೆ ಕರವೇ ಕರೆ

ಕಾರವಾರ  29: ಕಸ ವಿಲೇವಾರಿ ವ್ಯವಸ್ಥೆ ಮಾಡದ ಚಿತ್ತಾಕುಲಾ ಪಂಚಾಯತ ಧೋರಣೆ ವಿರೋಧಿಸಿ ಜು.2 ರಂದು ಹಗಲು 12 ತಾಸು ಬಂದ್ ಮಾಡಲಾಗುವುದು ಎಂದು ಕಾರವಾರ ಜಿಲ್ಲಾ ಕರವೇ ಘಟಕ ಘೋಷಿಸಿತು.  ಕಾರವಾರ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ಮಾಡಿದ ಕರವೇ ಅಧ್ಯಕ್ಷ ಅಕ್ಷಯ ಚಿತ್ತಾಕುಲಾ ಜನತೆ ,ವ್ಯಾಪಾರಸ್ಥರು ಬಂದ್ ಗೆ ಸಹಕರಿಸಲು ಕೋರಿದರು. ಕಸ ವಿಲೇವಾರಿ ಸಮಸ್ಯೆಯಿಂದ ಬೇಸತ್ತಿರುವ ಕಾರವಾರ ತಾಲ್ಲೂಕಿನ ಚಿತ್ತಾಕುಲಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಸದಾಶಿವಗಡದಲ್ಲಿ ಇದೀಗ ಸಾರ್ವಜನಿಕ ಆಕ್ರೋಶ ಬುಗಿಲೆದ್ದಿದೆ ಎಂದರು.

ಮನೆ ಮನೆಯಿಂದ ಕಸ ಸಂಗ್ರಹಣೆ ಸ್ಥಗಿತಗೊಂಡಿರುವುದನ್ನು ಪ್ರತಿಭಟಿಸಿ, ಜುಲೈ 2 ರಂದು ಸದಾಶಿವಗಡ ಬಂದ್‌ಗೆ ಕರೆ ನೀಡಲಾಗಿದೆ ಎಂದ ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ ಶೆಟ್ಟಿ ಬಣ) ಸದಾಶಿವಗಡ ಕಸದಿಂದ ತುಂಬಿ ಹೋಗಿದೆ. ಕಸ ಎತ್ತುವ ನಾಟಕ ಮಾಡುವವರು ಸ್ವಚ್ಚತಾ ಅಭಿಯಾನ ಪತ್ರಿಕೆಯಲ್ಲಿ ಪೋಟೋಕಷ್ಟೇ ಸೀಮಿತವಾಗಿದ್ದಾರೆ ಎಂದರು. ರಸ್ತೆ ಬದಿಯೇ ಡಂಪಿಂಗ್ ಯಾರ್ಡ್‌ : ಕಳೆದ ಒಂದೂವರೆ ವರ್ಷದಿಂದ ಈ ಕಸದ ಸಮಸ್ಯೆ ಸದಾಶಿವಗಡವನ್ನು ಕಾಡುತ್ತಿದೆ. ಇಲ್ಲಿನ ತ್ಯಾಜ್ಯ ವಿಲೇವಾರಿ ಘಟಕ ಸಂಪೂರ್ಣ ಸ್ಥಗಿತಗೊಂಡಿದ್ದು, ಮನೆಗಳಿಂದ ಕಸ ಎತ್ತುವವರೇ ಇಲ್ಲದಂತಾಗಿದೆ. ಪರಿಣಾಮವಾಗಿ, ಸ್ಥಳೀಯ ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು ಅನಿವಾರ್ಯವಾಗಿ ಮುಖ್ಯ ರಸ್ತೆಗಳ ಪಕ್ಕ ಹಾಗೂ ಕೆರೆಗಳಿಗೆ ಕಸ ಎಸೆಯುತ್ತಿದ್ದಾರೆ. 

ಸುದ್ದಿ ಓದಿ