ರಾಣೆಬೆನ್ನೂರ

ಕರಾಟೆ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಲು ನೆರವು:ಸೊರಗೊಂಡ

ಕರಾಟೆ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಲು ನೆರವು:ಸೊರಗೊಂಡ
ನಗರದ ಮದರ ಮಾರ್ಷಲ್ ಆರ್ಟ್ಸ ಸ್ಪೋರ್ಟ್ಸ ಅಕಾಡೆಮಿಯ ವಿದ್ಯಾರ್ಥಿನಿ ಬ್ಲಾಕ್ ಬೆಲ್ಟ್ ಪರೀಕ್ಷೆಯಲ್ಲಿ ಉತ್ತೀರ್ಣಳಾದ ಅರ್ಪಿ

ರಾಣೇಬೆನ್ನೂರು 28: ಇಂದಿನ ಶಿಕ್ಷಣದಲ್ಲಿ ಕರಾಟೆಯು ಒಂದು ಭಾಗವಾಗಿದ್ದು ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಲು ನೆರವಾಗುತ್ತದೆ ಎಂದು ಆಲ್ ಇಂಡಿಯಾ ಕೈಝನ್ ಮಾರ್ಷಲ್ ಆರ್ಟ್ಸ ಸ್ಪೋರ್ಟ್ಸ ಫೆಡರೇಷನ್‍ನ ಅಧ್ಯಕ್ಷರಾದ ಸನ್‍ಸೈ ಶ್ರೀಕಾಂತ ಸೊರಗೊಂಡ ಹೇಳಿದರು.

ಸ್ಥಳೀಯ ರಂಗನಾಥ ನಗರದ ರಂಗಪ್ಪಜ್ಜನ ದೇವಸ್ಥಾನದಲ್ಲಿ ಆಲ್ ಇಂಡಿಯಾ ಕೈಝನ್ ಮಾರ್ಷಲ್ ಆರ್ಟ್ಸ ಸ್ಪೋರ್ಟ್ಸ ಫೆಡರೇಷನ್ ಅವರು ಆಯೋಜಿಸಿದ್ದ ಬ್ಲಾಕ್ ಬೆಲ್ಟ್ ಪರೀಕ್ಷೆಯಲ್ಲಿ ಉತ್ತೀರ್ಣಳಾದ ನಗರದ ಮದರ್ ಮಾರ್ಷಲ್ ಆರ್ಟ್ಸ ಸ್ಪೋರ್ಟ್ಸ ಅಕಾಡೆಮಿಯ ವಿದ್ಯಾರ್ಥಿನಿ ಅರ್ಪಿತಾ ನವಲೆ ಅವರನ್ನು ಅಭಿನಂದಿಸಿ ಮಾತನಾಡಿದರು. 

ಇಂದಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಭೌದ್ಧಿಕ ಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯಯುತ ಜೀವನ ನಡೆಸಬೇಕೆಂದರು.

ಮದರ್ ಮಾರ್ಷಲ್ ಆರ್ಟ್ಸ ಸ್ಪೋರ್ಟ್ಸ ಅಕಾಡೆಮಿಯ ತರಬೇತುದಾರರಾದ ನಾಗರಾಜ ಸುಣಗಾರ ಮಾತನಾಡಿ, ಕರಾಟೆ ಒಂದು ಆತ್ಮರಕ್ಷಣೆ ಕಲೆಯಾಗಿದ್ದು ವಿದ್ಯಾರ್ಥಿ ಹಂತದಲ್ಲಿಯೇ ಇದರಲ್ಲಿ ಪರಿಣಿತಿ ಹೊಂದಿದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸಿಕೊಳ್ಳಬಹುದು. ಇಂದಿನ ವಿದ್ಯಾರ್ಥಿಗಳು ಮೊಬೈಲ್‍ಗೆ ಅಂಟಿಕೊಂಡು ಸಮಯ ವ್ಯರ್ಥ ಮಾಡುವ ಬದಲು ಕರಾಟೆಯಂತಹ ಕ್ರೀಡೆಗಳಲ್ಲಿ ಭಾಗವಹಿಸಿ ಸದೃಢ ಆರೋಗ್ಯವನ್ನು ಪಡೆಯಬೇಕು ಎಂದು ಹೇಳಿದರು.

ಪಾಲಕರಾದ ಪ್ರವೀಣ ಮಾಳೋದಕರ, ಮಂಜುನಾಥ ಜಿಂಗಾಡೆ, ಶೋಭಾ ಮಾಳೋದಕರ, ಸಾವಿತ್ರಮ್ಮ ಜಿಂಗಾಡೆ, ಪ್ರಕಾಶ ಜಿಂಗಾಡೆ, ಶಂಕರ ಜಿಂಗಾಡೆ ಸೇರಿದಂತೆ ಅಕಾಡೆಮಿಯ ವಿದ್ಯಾರ್ಥಿಗಳು ಇದ್ದರು.

ಸುದ್ದಿ ಓದಿ