ಕಾರಹುಣ್ಣಿಮೆ- ಕರಿ ಹರಿಯುವ ಕಾರ್ಯಕ್ರಮ
ಇಂಡಿ: ತಾಲೂಕಿನ ಆಳೂರ ಗ್ರಾಮದಲ್ಲಿ ಕಳೆದ ಶತ, ಶತಮಾನಗಳಿಂದಲೂ ಸಂಪ್ರದಾಯದಂತೆ ಆಚರಿಸಿಕೊಂಡು ಬರಲಾಗುತ್ತಿರುವ ಕಾರಹುಣ್ಣಿಮೆ ಪ್ರಯುಕ್ತ ಜೋಡೆತ್ತುಗಳನ್ನು ವಿವಿಧ ಬಗೆಯ ಬಣ್ಣ ಹಚ್ಚಿ ಎತ್ತಿನ ಕೋಡುಗಳಿಗೆ ರಿಬ್ಬನ್, ಹಣೆಪಟ್ಟಿ, ಗೆಜ್ಜೆ ಕಟ್ಟಿ ಶೃಂಗರಿಸಿ ಜೋಡೆತ್ತುಗಳನ್ನು ಓಡಿಸಿದ ಬಳಿಕ ಗ್ರಾಮದ ಅಗಸಿಯ ಹೆಬ್ಬಾಗಿಲಿಗೆ ಕಟ್ಟಿರುವ ಕರಿ ಹರೆದು ಸಂಭ್ರಮದಿಂದ ಸ್ಥಳೀಯರು ಕಾರಹುಣ್ಣಿಮೆ ಆಚರಿಸಿದರು.
ಗ್ರಾಮದ ಎಲ್ಲಾ ರೈತರು ಮನೆಗಳಲ್ಲಿ ಮಣ್ಣಿನಿಂದ ಮಾಡಿದ ಎತ್ತುಗಳನ್ನು ಪೂಜಿಸಿ, ಗ್ರಾಮದೇವರ ದೇವಾಲಯಗಳಲ್ಲಿ ಪೂಜೆ, ಪುನಸ್ಕಾರ, ನೈವೇದ್ಯ ಸಮರೆ್ಣ ಪುರಜ್ಯರಿಂದ ನಡೆಯಿತು.
ಸ್ಥಳೀಯ ಹಿರಿಯ ರೈತರ ಮಾರ್ಗದರ್ಶನ ಹಾಗೂ ಸಂಪ್ರದಾಯದಂತೆ ಇಲ್ಲಿಯ ಮಲ್ಲನಗೌಡ ಪಾಟೀಲರ ಮನೆತನದ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ನಾಮಾಂಕಿತ ಎರಡು ಎತ್ತುಗಳನ್ನು ಶೃಂಗರಿಸಿ ಪೂಜೆಸಿ, ಊರಿನ ಅಗಸಿಯ ಹೆಬ್ಬಾಗಿಲಲ್ಲಿ ಎತ್ತುಗಳನ್ನು ಓಡಿಸಲಾಯಿತು. ಈ ಸಲ ಮಲ್ಲನಗೌಡರ ಮನೆತನದ ಮುಂಗಾರು ಎತ್ತು ಮುಂದಾಗಿ ಓಡಿತು. ಎತ್ತುಗಳನ್ನು ಕರಿ ಹರಿದ ಬಳಿಕ ಯವಕರು ಒಬ್ಬರಿಗಿಂತ ಮತ್ತೊಬ್ಬರು ಜೋರಾಗಿ 135 ಕಿ.ಲೋ. ಕಲ್ಲು ಗುಂಡನ್ನು ಯುವಕರು ಎತ್ತುವ ಮೂಲಕ ಅವರವರ ಶಕ್ತಿ ಪ್ರದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಪಾಂಡುರಂಗ ಕುಲಕರ್ಣಿ, ರಾಮನಗೌಡ ಪಾಟೀಲ, ಬಸನಗೌಡ ಪಾಟೀಲ, ರಾಜಶೇಖರ ನಾಟೀಕಾರ, ಶ್ರೀಶೈಲ ನಾಟೀಕಾರ, ನೀಲಪ್ಪ ವಾಲೀಕಾರ, ಭೀಮರಾಯ ಬೇವನೂರ, ರಾಚಯ್ಯ ಪಠಪತಿ, ದುಂಡಪ್ಪ ತೇಲಿ, ಯಲ್ಲಪ್ಪ ಹಿರೇಕುರಬರ, ನಾಮದೇವ ಮಾವಿನಹಳ್ಳಿ ಸೇರಿದಂತೆ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.