4ರಂದು ಕನ್ನಡ ಹಾಡುಗಳ ಸಂಭ್ರಮ
ಶಿಗ್ಗಾವಿ 1: ಪಟ್ಟಣದ ಸಂತೆ ಮೈದಾನದಲ್ಲಿ ಇದೇ ಏ. 4 ರ ರವಿವಾರ ದಂದು ಸಾಯಂಕಾಲ 4 ಘಂಟೆಗೆ ಯುವ ಕರ್ನಾಟಕ ರಕ್ಷಣಾ ವೇಧಿಕೆ ವತಿಯಿಂದ ಜಿಲ್ಲಾ ಹಾಗೂ ತಾಲೂಕಾ ಘಟಕದ ಉದ್ಘಾಟನಾ ಸಮಾರಂಭದ ಪ್ರಯುಕ್ತ ಸಾಧಕರಿಗೆ ಸನ್ಮಾನ ಹಾಗೂ ಕನ್ನಡ ಹಾಡುಗಳ ಸಂಭ್ರಮ ಕಾರ್ಯಕ್ರಮ ಜರುಗಲಿದೆ.
ಕಾರ್ಯಕ್ರಮದ ಸಾನಿದ್ಯವನ್ನು ಗಂಜೀಗಟ್ಟಿ ಚರಮೂರ್ತೇಶ್ವರ ಮಠದ ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಹಾಗೂ ಚಿಂಚಲಿಯ ಮಾಯಮ್ಮದೇವಿಯ ಅರ್ಚಕರಾದ ಶಂಕ್ರಣ್ಣ ಪೂಜಾರ ಅವರುಗಳು ವಹಿಸುವರು, ಉದ್ಘಾಟನೆಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ನೆರವೇರಿಸುವರು, ಮುಖ್ಯ ಅತಿಥಿಗಳಾಗಿ ಭಾರತ ಸೇನೆಯ ಕಮಾಂಡರ್ ಪರಶುರಾಮ ದಿವಾನದ, ಹೆಚ್ಚುವರಿ ಪೋಲೀಸ್ ಆಯುಕ್ತ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಯುವ ಕರ್ನಾಟಕ ರಕ್ಷಣಾ ವೇಧಿಕೆಯ ರಾಜ್ಯಾದ್ಯಕ್ಷ ವಿಜಯ ಹರ್ಲಾಪೂರ ಸೇರಿದಂತೆ ವಿವಿಧ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಮಾಜ ಸೇವಕರು ಭಾಗವಹಿಸಲಿದ್ದಾರೆ ಎಂದು ಹಾವೇರಿ ಜಿಲ್ಲಾ ಯುವ ಕರ್ನಾಟಕ ರಕ್ಷಣಾ ವೇದಿಕೆಯ ಅಧÀ್ಯಕ್ಷ ಸಂತೋಷ ಚಾಕಲಬ್ಬಿ ಪ್ರಕಟಣೆಗೆ ತಿಳಿಸಿದ್ದಾರೆ.