ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಸಂಸ್ಥೆ: ಡಾ.ನಿಷ್ಠೆರುದ್ರಪ್ಪ
ಲೋಕದರ್ಶನ ವರದಿ
ಹೂವಿನಹಡಗಲಿ: ಅ.17- ಕನ್ನಡ ಸಾಹಿತ್ಯ ಪರಿಷತ್ತು ಶತಮಾನಕ್ಕೂ ಹೆಚ್ಚು ಕಾಲ ಸುಧೀರ್ಘ ಇತಿಹಾಸ ಹೊಂದಿದ್ದು ನಾಡಿನಲ್ಲಿ ಕನ್ನಡ ಭಾಷೆ,ಸಾಹಿತ್ಯ,ಕಲೆ ಸಂಸ್ಕೃತಿ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದೆ ಕಸಾಪ ಜಿಲ್ಲಾಧ್ಯಕ್ಷ ನಿಷ್ಠೆರುದ್ರ್ಪ ಅಭಿಪ್ರಾಯಪಟ್ಟರು.
ಹೂವಿನಹಡಗಲಿ ತಾಲೂಕು ಕಸಾಪ ಘಟಕದಿಂದ ಭಾನುವಾರ ಇಟ್ಟಿಗಿ ಹೋಬಳಿ ಘಟಕದ ಪದಾಧಿಕಾರಿಗಳ ಸೇವಾ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ನಿರಂತರ ಕನ್ನಡಪರ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳಬೇಕೆಂದು ಕರೆ ನೀಡಿದರು.
ಸಾನಿಧ್ಯವಹಿಸಿದ್ದ ಉತ್ತಂಗಿ ಸೋಮಶಂಕರಸ್ವಾಮೀಜಿ ಆಶೀರ್ವಾಚನದಲ್ಲಿ ಇಂದಿನ ಮಕ್ಕಳಲ್ಲಿ ಉತ್ತಮ ಸಂಸ್ಕಾರ ನೀಡುವ ಮೂಲಕ ಭಾಷೆ,ಸಂಸ್ಕೃತಿ ಬಗ್ಗೆ ಅರಿವು ಮೂಡಿಸಬೇಕೆಂದರು.
ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಮತ್ತು ಕಸಾಪ ಮಾಜಿ ಅಧ್ಯಕ್ಷ ಡಾ.ಕೆ.ರುದ್ರ್ಪ ಮಾತನಾಡಿದರು.ತಾಲೂಕು ಕಸಾಪ ಅಧ್ಯಕ್ಷ ಟಿ.ವೀರೇಂದ್ರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.ಈ ವೇಳೆ ಹೋಬಳಿ ಘಟಕದ ಅಧ್ಯಕ್ಷ ಜಿ.ಬಿ..ವಿನಯರಾಜ,ಕಾರ್ಯದರ್ಶಿ ಕೆ.ಜಗದೀಶ,ಕೋಶಾಧ್ಯಕ್ಷ ಕೆ.ಬನ್ನೆಪ್ಪ, ಸಂಘಟನಾ ಕಾರ್ಯದರ್ಶಿ ಎಂ.ನಿಂಗರಾಜ,ಸದಸ್ಯರಾಗಿ ಹೆಚ್.ಬಿ.ಹೇಮಾವತಿ,ಎಸ್.ನಿಂಗರಾಜ,ನಿಸಾರ ಅಹಮದ್, ಟಿ.ಕನಕೇಶ,ಡಿ.ತಿಪ್ಪಣ್ಣ,ಕೆ.ಗಂಗಾಧರ್ಪ,ಬಿ.ದೇವರಾಜ ಸೇವಾ ಸ್ವೀಕಾರ ಮಾಡಿದರು.
ಗ್ರಾ.ಪಂ.ಅಧ್ಯಕ್ಷೆ ಪುಷ್ಪಾ ಮಹಾಬಲೇಶ, ಮಾಜಿ ಜಿ.ಪಂ.ಸದಸ್ಯೆ ಶೀಲಾ ಕೊಟ್ರೇಶ,ತಾಲೂಕು ಕಸಾಪ ಮಾಜಿ ಅಧ್ಯಕ್ಷ ಹೆಚ್.ಜಿ.ಪಾಟೀಲ,ಸಾಹಿತಿಗಳಾದ ಹಾಲಪ್ಪ,ಗುರುಬಸವರಾಜ,ಪ್ರೌಢ ಶಾಲಾ ಮುಖ್ಯಗುರು ಚಂದ್ರಗೌಡ,ಶಿಕ್ಷಕ ಕೊಟ್ರೇಶಗೌಡ,ಗಡ್ಡಿಬಸವರಾಜ,ಕೆ.ಮಲ್ಲಪ್ಪ,ಸುದರ್ಶನಶೆಟ್ಟಿ,ಚನ್ನಬಸಪ್ಪ,ರೇವಣ್ಣ,ಸಂಗೀತ ಕಲಾವಿದ ಸೋಮಶೇಖರ ಬಳಿಗಾರ ಇದ್ದರು.ಈ ವೇಳೆ ಕವಿಗೋಷ್ಠಿ,ರಾಜ ರಾಜೇಶ್ವರಿ ಸಂಗೀತ ಪಾಠ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.ಎಸ್.ನಿಂಗರಾಜ ಸ್ವಾಗತಿಸಿದರು.ಕೊಟ್ರೇಶ ನಿರೂಪಿಸಿದರು. ಜಗದೀಶ ವಂದಿಸಿದರು.