ಕನ್ನಡ ರಾಜ್ಯೋತ್ಸವವನ್ನು ಗಡಿ ಪ್ರದೇಶದಲ್ಲಿ ಹಬ್ಬದ ರೀತಿಯಲ್ಲಿ ಆಚರಣೆ ಮಾಡಬೇಕು : ಡಾ. ರಾಜಶೇಖರ ಬಿರಾದಾರ
ಯರಗಟ್ಟಿ 1 : ಕನ್ನಡ ನಾಡು-ನುಡಿಯ ವಿಚಾರದಲ್ಲಿ ಎಲ್ಲರೂ ಒಂದಾಗಿ ಇಂತಹ ಗಡಿ ಪ್ರದೇಶವನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸಬೇಕಿದೆ ಎಂದು ಸಾಹಿತಿ ಡಾ. ರಾಜಶೇಖರ ಬಿರಾದಾರ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಶುಕ್ರವಾರ ತಾಲೂಕು ಆಡಳಿತದ ಹಮ್ಮಿಕೊಂಡಿದ್ದ 69 ನೇ ಕನ್ನಡ ರಾಜ್ಯೋತ್ಸವ ಅಧ್ಯಕ್ಷತೆ ವಹಿಸಿ ಉದ್ಘಾಟನೆ ಮಾಡಿ ಮಾತನಾಡಿದರು. ಕನ್ನಡ ರಾಜ್ಯೋತ್ಸವ ಕೇವಲ ಆಚರಣೆಗೆ ಸೀಮಿತವಾಗಬಾರದು ಭಾಷೆ ಮತ್ತು ಭಾಷೆಯಲ್ಲಿ ಸೃಷ್ಟಿಯಾಗಿರುವ ಅಪಾರ ಸಾಹಿತ್ಯವನ್ನು ಸಂಭ್ರಮಿಸುವ ಹಾಗೂ ಸಾಹಿತಿಗಳನ್ನು ಸ್ಮರಿಸುವ ಕಾರ್ಯಕ್ರಮವಾಗದೇ. ಕನ್ನಡ ಭಾಷೆಯ ಹೇಳಿಕೆಯನ್ನು ಚರ್ಚಿಸುವಂತೆಯೇ ಕನ್ನಡಿಗರು ಒಟ್ಟು ಬದುಕನ್ನು ಮತ್ತು ಅದರ ಸುಧಾರಣೆ ಕುರಿತು ಚಿಂತಿಸುವ ಮಟ್ಟಿಗೆ ರಾಜ್ಯೋತ್ಸವ ವಿಸ್ತಾರಗೊಳ್ಳಬೇಕಿದೆ ಎಂದರು.
ಯಾವುದೇ ಸರ್ಕಾರವಿರಲಿ ಗಡಿ ಭಾಗದಲ್ಲಿ ಸಂಭ್ರಮಿಸಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಾರೆ ಅದೇ ರೀತಿ ಅಭಿವೃದ್ಧಿಗೆ ಹೆಚ್ಚು ಹೊತ್ತು ಕೊಡಬೇಕು ಎಂದರು.
ಇಡೀ ಕರುನಾಡನ್ನು ಒಗ್ಗೂಡಿಸಿ ಸಂಭ್ರಮಿಸಬೇಕಾದ ಈ ಹಬ್ಬ ಇದು ಒಂದು ವಲಯವನ್ನಷ್ಟೇ ಜಾಗೃತಿಗೊಳಿಸುತ್ತಾ ಬಹುತೇಕ ವಲಯಗಳನ್ನು ಸ್ಪರ್ಶಿಸದೆ ಉಳಿದಿರುವುದು ನೋವಿನ ಸಂಗತಿಯಾಗಿದೆ.
ಅನೇಕ ಮಹನೀಯರು ಕನ್ನಡ ಗೋಸ್ಕರ ಹೋರಾಡಿದ್ದಾರೆ ಗಡಿ ಭಾಗವಾಗಿರುವ ತಾಲೂಕಿನಲ್ಲಿ ಸರ್ಕಾರಿಗಳು ಹೆಚ್ಚಿನ ಸೌಲತ್ತುಗಳನ್ನು ಕೊಡಬೇಕು ಮತ್ತು ಗಡಿ ಭಾಗವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹೆಚ್ಚು ಗಮನ ಕೊಡಬೇಕು ಎಂದರು.
ಈ ಹಬ್ಬವನ್ನು ಪ್ರತಿ ಹಳ್ಳಿಯಲ್ಲಿ ಪ್ರತಿ ತಾಲೂಕಿನಲ್ಲಿ ಈ ಕನ್ನಡ ಹಬ್ಬವನ್ನು ಆಚರಿಸುತ್ತಾರೆ. ನಮ್ಮ ಕರ್ನಾಟಕ ರಾಜ್ಯವು ಹರಿದು ಹಂಚು ಹೋಗಿದ್ದ ಪ್ರಾಂತ್ಯಗಳನ್ನೆಲ್ಲ ಒಗ್ಗೂಡಿಸಿ ಕರ್ನಾಟಕ ಏಕೀಕರಣಕ್ಕೆ ಅನೇಕ ಮಹಾನುಭಾವರು ಶ್ರಮಿಸಿದ್ದಾರೆ ಅವರನ್ನು ನಾವು ಈಗ ಸ್ಮರಿಸಬೇಕು. ನಾಡು ನುಡಿಗಾಗಿ ಎಲ್ಲರೂ ಒಂದಾಗಿ ಮುನ್ನುಗಬೇಕಿದೆ ಎಂದು ಡಾ. ರಾಜಶೇಖರ ಬಿರಾದಾರ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ತಹಸಿಲ್ದಾರ ಎಮ್. ಎನ್. ಮಠದ ಕಾರ್ಯಕ್ರಮದ ಅಧ್ಯಕ್ಷರು ಮಾತನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕರಾದ ಎಮ್. ಎಮ್. ಚೀಲದ, ಎಸ್. ಬಿ. ಮಿಕಲಿ ಅತ್ಯುತ್ತಮವಾಗಿ ನಡೆಸಿಕೊಟ್ಟರು.
ಅದೇ ರೀತಿ ವಿದ್ಯಾರ್ಥಿಗಳ ಮಕ್ಕಳ ಮನೋರಂಜನಾ ಕಾರ್ಯಕ್ರಮಗಳು ಎಲ್ಲರನ್ನೂ ರಂಜಿಸಿದವೋ.
ಕಾರ್ಯಕ್ರಮದ ನಂತರ ವಿವಿಧ ಇಲಾಖೆಗಳ ಸಾಧಕರನ್ನು ಸನ್ಮಾನಿಸಲಾಯಿತು ವಿಶೇಷವಾಗಿ ಪತ್ರಿಕೆಯ ವರದಿಗಾರರು ಇನ್ನು ಅನೇಕರನ್ನು ಇಲಾಖೆಯ ಸಾಧಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಡಿ. ಎನ್. ತಹಶೀಲ್ದಾರ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನವರ, ವೈದ್ಯಾಧಿಕಾರಿ ಡಾ. ಬಿ. ಎಸ್. ಬಳ್ಳೂರ, ಪಶುವೈದ್ಯಾಧಿಕಾರಿ ಎಂ. ವ್ಹಿ. ಪಾಟೀಲ, ಪಿಎಸ್ಐ ಎಲ್. ಬಿ. ಮಾಳಿ, ಕೃಷಿ ಇಲಾಖೆ ಅಧಿಕಾರಿ ಎಸ್. ಎಲ್. ದೇಸಾಯಿ, ಹೇಸ್ಕಾಂ ಮಹಾಂತೇಶ ಯರಗಟ್ಟಿ, ಎ. ಎ. ಮಕ್ತುಮನವರ, ಕಸಪಾ ಅಧ್ಯಕ್ಷ ತಮ್ಮಣ್ಣಾ ಕಾಮಣ್ಣವರ, ಕರವೇ ಅಧ್ಯಕ್ಷ ರಫೀಕ ಡಿ.ಕೆ, ಪಟ್ಟಣ ಪಂಚಾಯತಿ ನಾಮನಿರ್ದೇಶನ ಸದಸ್ಯ ಸಲಿಂಬೇಗ ಜಮಾದಾ, ಭೂ ನ್ಯಾಯಮಂಡಳಿ ಸದಸ್ಯ ಬಸವರಾಜ ಸತ್ತೂರಿ, ಆರೋಗ್ಯ ರಕ್ಷಣಾ ಸಮಿತಿ ಸದಸ್ಯ ಬಾಸ್ಕರ ಹಿರೇಮೆತ್ರಿ, ಶಿರಸ್ತದಾರ ಸಿದ್ದು ಕುಲಕರ್ಣಿ, ಕಂದಾಯ ನೀರಿಕ್ಷಕ ವಾಯ್. ಎಫ್. ಮುರ್ತೆನ್ನವರ, ಗ್ರಾಮ ಆಡಳಿತಾಧಿಕಾರಿ ಎಲ್. ಬಿ. ದಳವಾಯಿ ಸೇರಿದಂತೆ ಇನ್ನು ಹಲವು ಮುಖಂಡರು ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.