ಶಿಗ್ಗಾವ್

ಪ್ರತಿಯೊಬ್ಬರಲ್ಲಿ ನಾಡು-ನುಡಿಯ ಬಗ್ಗೆ ಅಭಿಮಾನವಿರಲಿ: ಪ್ರಕಾಶ

ಪ್ರತಿಯೊಬ್ಬರಲ್ಲಿ ನಾಡು-ನುಡಿಯ ಬಗ್ಗೆ ಅಭಿಮಾನವಿರಲಿ: ಪ್ರಕಾಶ

ಶಿಗ್ಗಾವಿ ನವೆಂಬರ್ 04: ನಾಡು-ನುಡಿಯ ಬಗ್ಗೆ ಪ್ರತಿಯೊಬ್ಬರಲ್ಲಿ ಅಭಿಮಾನ ಮೂಡಬೇಕು, ಕನ್ನಡ ಅದೊಂದು ಆಡು ಭಾಷೆಯಲ್ಲ ಅದು ಜೀವನದ ಭಾಷೆಯಾಗಿ ಹೊರಹೊಮ್ಮಿದೆ ಎಂದು ತಹಶೀಲ್ದಾರ ಪ್ರಕಾಶ ಕುದುರಿ ಅಭಿಪ್ರಾಯಪಟ್ಟರು. 

ಪಟ್ಟಣದ ತಾಲೂಕಾ ಕ್ರೀಢಾಂಗಣದಲ್ಲಿ ತಾಲೂಕಾ ಆಡಳಿತ, ತಾಲೂಕಾ ಪಂಚಾಯತ ಹಾಗೂ ಪುರಸಭೆ ಶಿಗ್ಗಾವಿ ಇವುಗಳ ಆಶ್ರಯದಲ್ಲಿ ಜರುಗಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ನಂತರ ತಹಶೀಲ್ದಾರ ಕಾರ್ಯಾಲಯದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ತಾಲೂಕಿನ ಸರಕಾರಿ ಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ಪ್ರಥಮ ದ್ವೀತೀಯ ಮತ್ತು ತೃತೀಯ ಸ್ಥಾನ ಪಡೆದ  ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿ, ಕನ್ನಡ ವಿಷಯದಲ್ಲಿ 125 ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ತಾಲೂಕಿನಲ್ಲಿ ಕೋರೋನಾ ವಾರ್ಷಿಗಳಾಗಿ ಸೇವೆ ಸಲ್ಲಿಸಿದ ಆರೋಗ್ಯ ಮತ್ತು ಪೋಲೀಸ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳನ್ನು ತಾಲೂಕಾ ಆಡಳಿತದ ವತಿಯಿಂದ ಸನ್ಮಾನಿಸಲಾಯಿತು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ತುರುಕಾಣಿ, ಬಿಇಓ ಪ್ರಭಯ್ಯ ಚಿಕ್ಕಮಠ, ಅಕ್ಷರದಾಸೋಹ ಅಧಿಕಾರಿ ಅಶೋಕ ಕುಂಬಾರ, ಸಿಡಿಪಿಓ ನಿತಾ ವಾಡಕರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾನಂದ ಮ್ಯಾಗೇರಿ ಸೇರಿದಂತೆ ತಾಲೂಕಿನ ಅಧಿಕಾರಿಗಳು ಇದ್ದರು.

ಸುದ್ದಿ ಓದಿ