ಮುದ್ದೆಬಿಹಾಲ್

ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮ

ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮ

ಮುದ್ದೇಬಿಹಾಳ: ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಯುವಕರು ಕುಣಿದು ಕುಪ್ಪಳಿಸುವದರಿಂದ ಹಾಲುಮತ ಸಮಾಜದ ಅಭಿವೃದ್ದಿ ಆಗುವದಿಲ್ಲ. ಸಂತ ಕನಕದಾಸರ ಚಿಂತನೆಗಳನ್ನು ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಜೊತೆ ಶಿಕ್ಷಣವಂತರಾಗಿ ಒಗ್ಗಟ್ಟು ಪ್ರದರ್ಶಿಸಬೇಕು ಅಂದಾಗ ಮಾತ್ರ  ಹಾಲುಮತ ಸಮಾಜದ ಅಭಿವೃದ್ದಿ ಸಾದ್ಯ ಎಂದು  ತಾಲೂಕಾ ಕುರುಬ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ ಹೇಳಿದರು. 

ತಾಲೂಕಿನ ಬಂಗಾರಗುಂಡ ಗ್ರಾಮದಲ್ಲಿ ನಡೆದ ಸಂತ ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಪಾಲ್ಗೋಂಡು ಮಾತನಾಡಿದ ಅವರು, ಹಾಲುಮತ ಸಮಾಜವು ಸಂಕ್ರಮಣ ಕಾಲದಲ್ಲಿದೆ ಸಂಕ್ರಮಣ ಕಾಲವೆಂದರೆ ಸೂರ್ಯ ಉದಯಿಸುವದು ಮತ್ತು ಮುಳುಗುವ ಕಾಲವಿದ್ದಂತೆ. ಈ ಸಂಧಿಗ್ದ ಸಮಯದಲ್ಲಿ ಸಮಾಜದ ಶ್ರೇಯೋಬಿವೃದ್ದಿಗೆ ಎಲ್ಲರು ಒಗೂಡಿ ಶ್ರಮೀಸಬೇಕು. ಹಾಲುಮತ ಸಮುದಾಯವು ಆರ್ಥಿಕ, ಸಾಮಾಜಿಕವಾಗಿ ಮುಂದುವರೆಯಲು ರಾಜಕೀಯ ಅಧಿಕಾರ ಸಿಗಬೇಕು ಸಮಾಜ ಒಂದಾದರೆ ರಾಜಕೀಯ ಅಧಿಕಾರ ಪಡೆಯುವದು ಸುಲಬವಾಗಲಿದೆ ಎಂದು ಅವರು ಹೇಳಿದರು. 

ಒಗ್ಗಟ್ಟೆ ಬಲ ಒಡಕೆ ಕೆಡಕು ಎಂಬ ಸಂದೇಶವನ್ನು ಯುವಕರು ಅರಿಯಬೇಕು. ಯುವಕರು ಸಮಾಜದ ಬಗ್ಗೆ ಅರಿತುಕೋಂಡು ನಡೆಯಬೇಕು. ಹಾಲುಮತ ಸಮಾಜ ಮುಗ್ದ ಸಮಾಜವೆಂದು ನಮ್ಮನ್ನು ತುಳಿಯುವ ಪ್ರಯತ್ನ ಮಾಡುತ್ತಾರೆ. ಯುವಕರು ಎಚ್ಚರದಿಂದ ಇರಬೇಕು  

ಯುವಕರು ಸದೃಡರಾಗಬೇಕಾದರೆ ಮೋದಲು ಉನ್ನತ ಶಿಕ್ಷಣ ಪಡೆಯಬೇಕು. ಸಮಾಜದ ಯುವಕರು ರಾಜಕೀಯವಾಗಿ ಬೇಳೆಯಬೇಕಾದರು ಶಿಕ್ಷಣವೆ ಮುಖ್ಯ ಸಮಾಜದ ಎಲ್ಲರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು. ನಮ್ಮ ಹಾಲುಮತ ಸಮಾಜದವರು ಉಳಿದ ಸಮಾಜದವರ ಜೋತೆ ಅನ್ಯೂನ್ಯತೆಯಿಂದ ಬಾಳಬೇಕು. 300 ವರ್ಷಗಳ ಹಿಂದೆಯೆ ಹೆಣ್ಣುಮಕ್ಕಳಿಗೆ ಶಿಕ್ಷಣವೆಂದರೆ ದೂರವಿದ್ದ ಕಾಲದಲ್ಲಿ ಅಹಲ್ಯಾದೇವಿಯವರು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದ ನಮ್ಮ ಸಮಾಜದ ಹೆಮ್ಮೆಯ ಮಹಿಳೆಯ ಕುಲದವರು ನಾವು. ನಮ್ಮ ಸಮಾಜವನ್ನು ರಾಜಕೀಯವಾಗಿ ಹಿನ್ನಡೆಯಾಗಲು ಕೆಲವರು ತಡೆಯುತ್ತಾರೆ. ನಾವು ಶಿಕ್ಷಣವಂತರಾದಗ ಮಾತ್ರ ನಮ್ಮ ಸಮಾಜ ಸದೃಡವಾಗಿ ಬೆಳೆಯುತ್ತದೆ. 

ಕಾರ್ಯಕ್ರಮದಲ್ಲಿ ಬಂಗಾರಗುಂಡ ಕನಕದಾಸ ಯುವಕ ಸಂಘದವತಿಯಿಂದ ತಾಲೂಕಿನ 150ಕ್ಕೋ ಅಧಿಕ ಸಾದಕರಿಗೆ ಮತ್ತು ಪ್ರಗತಿಪರ ರೈತರಿಗೆ ಸಸಿ ನೀಡಿ ಸನ್ಮಾನಿಸಲಾಯಿತು. ಈ ಸಮಯದಲ್ಲಿ .ಅಸ್ಕಿ ಪೌಂಡೆಷನ್ ಅಧ್ಯಕ್ಷ ಸಿ.ಬಿ.ಅಸ್ಕಿ, ಲಕ್ಷ್ಮಣ ಬಿಜ್ಜೂರ, ಮುತ್ತಣ್ಣ ನಾಗಬೇನಾಳ, ಸೈನಿಕ ಬಸವರಾಜ ಬಿರಾದಾರ, ಸಿದ್ದಣ್ಣ ಗಡಗಿ, ಶರಣಗೌಡ ಗೌಡರ, ಸೋಮಣ್ಣ ಮದರಿ, ಬಸವರಾಜ ಬಡಕುರ್ಕಿ, ಮಲ್ಲು ಅರಸನಾಳ, ರಮೇಶ ಬಿರಾದಾರ, ಬಸಣ್ಣ ಕ್ಯಾದಗುಂಪಿ, ಮುತ್ತು ನಡಗಡ್ಡಿ, ಶ್ರೀಶೈಲಗೌಡ ಪಾಟೀಲ, ಸಂಗಮೇಶ ಗಾಳಪುಜಿ, ರಮೇಶ, ಕಚೇರಿ, ಮಲ್ಲಣ್ಣ ಎಮ್ಮಿ, ಪ್ರಜ್ವಲ ಬಾಗೇವಾಡಿ, ಆನಂದ ಕುಂಬಾರ ಮತ್ತಿತರರು ಇದ್ದರು. 


ಸುದ್ದಿ ಓದಿ