ಕನಕದಾಸರ ಆದರ್ಶ ಪಾಲಿಸಿ: ಜಂಬಗಿ
ಮದ್ಲೂರ : ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಸಮಾನತೆಯನ್ನು ಹೊಗಲಾಡಿಸಲು ಪ್ರಯತ್ನಿಸಿದರು.ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸೋಣ ಎಂದು ಪ್ರಧಾನ ಗುರುಗಳಾದ ಎಸ್.ಬಿ.ಜಂಬಗಿ ಹೇಳಿದರು.
ಸವದತ್ತಿ ತಾಲೂಕಿನ ಮದ್ಲೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಆಚರಿಸಿದ ಕನಕದಾಸರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಹಿರಿಯ ಶಿಕ್ಷಕರಾದ ಬಿ.ಎನ್.ಅಂಗಡಿ ಅವರು ಪ್ರಾಸ್ತಾವಿಕ ನುಡಿಯಲ್ಲಿ ಕನಕದಾಸರ ಜೀವನ ಚರಿತ್ರೆ ಹೇಳಿದರು.ಮಕ್ಕಳು ಕನಕದಾಸರ ಕುರಿತು ಭಾಷಣ,ಕೀರ್ತನೆಗಳನ್ನು ಹೇಳಿದರು. ಈ ಸಂದರ್ಭದಲ್ಲಿ ಗುರುಮಾತೆಯರಾದ ಎಂ.ಎ.ಹುದ್ಲಿ, ಎಫ್.ಎಚ್.ಜಮಾದಾರ,ಪಿ.ಪಿ.ಶೇಷಗಿರಿ , ಕೆ.ಎ.ನಾಗನೂರ, ಶಿಕ್ಷಕರಾದ ಎಸ್.ವಾಯ್.ಹಂಚಿನಮನಿ ,ಎ.ಜಿ.ಕಮತಗಿ ಹಾಗೂ ಅಡುಗೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು