ಯರಗಟ್ಟಿ

ನಿಗದಿತ ದಿನದಂದು ತಾಲೂಕಾಡಳಿತದಿಂದಕನಕ ಜಯಂತಿ ಆಚರಣೆ

ನಿಗದಿತ ದಿನದಂದು ತಾಲೂಕಾಡಳಿತದಿಂದಕನಕ ಜಯಂತಿ ಆಚರಣೆ

ಯರಗಟ್ಟಿ 23: ಕನಕ ಜಯಂತಿಯನ್ನು ನಿಗದಿತ ದಿನದಂದು ತಾಲೂಕು ಆಡಳಿತದಿಂದಆಚರಣೆ ಮಾಡಲಾಗುತ್ತದೆ. ನಂತರದ ದಿನದಲ್ಲಿ ಸಮಾಜ ಮತ್ತು ಸಂಘ ಸಂಸ್ಥೆಗಳ ಜೊತೆಗೂಡಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ತಹಶೀಲ್ದಾರ ಎಂ ಎನ್ ಮಠದ ಹೇಳಿದ್ದಾರೆ.ಯರಗಟ್ಟಿ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಡಿಸೆಂಬರ್‌ನಲ್ಲಿ ವಿಧಾನಸಭಾ ಅಧಿವೇಶನ ಇರುವುದರಿಂದ ಶೀಘ್ರದಲ್ಲಿ ಕನಕ ಜಯಂತಿ ಆಚರಣೆ ದಿನಾಂಕವನ್ನು ನಿಗದಿಗೊಳಿಸಲಾಗುವುದು. ಯಾವುದೇ ಗೊಂದಲಕ್ಕೆ ಅವಕಾಶ ಮಾಡಿಕೊಡದೆ ಎಲ್ಲಾ ಸಮುದಾಯವರ ಜೊತೆಗೂಡಿ ಆಚರಣೆ ಮಾಡಬೇಕು ಎಂದರು.ಮಂಜುನಾಥ ತಡಸಲೂರ ಮಾತನಾಡಿ, ಕಾರಣಂತರಗಳಿಂದ ಕಳೆದ ನಾಲ್ಕು ವರ್ಷಗಳಿಂದ ಸರಳವಾಗಿ ಕನಕ ಜಯಂತಿ ಆಚರಣೆ ಮಾಡಲಾಗಿದೆ. ಈಬಾರಿ ಸಮಾಜದ ಬೇಡಿಕೆಯಂತೆ ಅದ್ದೂರಿಯಾಗಿ ಕನಕ ಜಯಂತಿ ಆಚರಣೆ ಮಾಡಬೇಕು.ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ಕುರುಬ ಸಮಾಜದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸನ್ಮಾನಿಸಬೇಕು ಎಂದು ಹೇಳಿದರು.  

ಕನಕ ಭವನಕ್ಕೆ ಶೀಘ್ರ ಜಾಗ ಮಂಜೂರು ಮಾಡಬೇಕು ಎಂದು ಸರಕಾರಕ್ಕೆ ಪ್ರಸ್ತಾವನೆ ಕಳಿಸಬೇಕು ಎಂದು ಕನಕ ಯುವ ಸಂಘಟನೆಯ ಗೋಪಾಲ ದಳವಾಯಿ ತಹಶೀಲ್ದಾರರಿಗೆ ಮನವಿ ಮಾಡಿಕೊಂಡರು.ಸಭೆಯಲ್ಲಿ ಎಎಸ್‌ಐ ವಾಯ್‌. ಎಂ. ಕಡಕೋಳ, ಪಶು ವೈದ್ಯಾಧಿಕಾರಿ ಎಂ. ವಿ. ಪಾಟೀಲ, ಶಿಕ್ಷಕ ಎನ್ ಎಸ್‌. ಕಾಂಬಳೆ,ಕೃಷಿ ಇಲಾಖೆ ಅಧಿಕಾರಿ ಎಂ. ಜಿ. ಕಳಸಪ್ಪನವರ, ಆರೋಗ್ಯ ಇಲಾಖೆಯ ಮಹಾಂತೇಶ ಕತ್ತಿ, ಶಿಶು ಅಭಿವೃದ್ಧಿ ಯೋಜನೆ ಹಿರಿಯ ಮೇಲ್ವಿಚಾರಕಿ ವಿ. ಜಿ. ಹಿರೇಮಠ, ಬಿ. ಎಸ್‌. ಗುಗರನಟ್ಟಿ, ಕುರುಬ ಸಮುದಾಯದ ಹಿರಿಯರಾದ ಶಿವಾನಂದ ಕರಿಗೋಣ್ಣವರ, ಬಸು ದಳವಾಯಿ, ಸಿದ್ದಪ್ಪ ಅಡಕಲಗುಂಡಿ, ಪಡೆಪ್ಪ ಅಡಕಲಗುಂಡಿ, ಶ್ರೀಕಾಂತ ಮೆಟ್ಟಗುಡ್ಡ, ರಮೇಶ ಯಕ್ಕನ್ನವರ, ನಿಂಗಪ್ಪ ಪೂಜೇರ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ