ಕನಕ ಜಯಂತಿ; ಸಮಾಜದಲ್ಲಿ ಸಮಾನತೆ ಕೀರ್ತಿಕನಕದಾಸರಿಗೆ ಸಲ್ಲುತ್ತದೆ- ಶಾಸಕ ಪಠಾಣ
ಕನಕ ಜಯಂತಿ; ಸಮಾಜದಲ್ಲಿ ಸಮಾನತೆ ಕೀರ್ತಿಕನಕದಾಸರಿಗೆ ಸಲ್ಲುತ್ತದೆ- ಶಾಸಕ ಪಠಾಣ
ಶಿಗ್ಗಾವಿ 08: ಸಮಾಜದಲ್ಲಿ ಅಸಮಾನತೆ, ಕೀಳರಿಮೆ ತೊಲಗಿಸಿ ಸಮಾನತೆ ತಂದ ಕೀರ್ತಿ ದಾಸ ಶ್ರೇಷ್ಠ ಭಕ್ತಕನಕದಾಸರಿಗೆ ಸಲ್ಲುತ್ತದೆ ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಹೇಳಿದರು. ತಾಲೂಕಿನ ಬಾಡದಲ್ಲಿ ನಡೆದ ತಾಲೂಕ ಆಡಳಿತ ಶಿಗ್ಗಾವಿ ದಾಸಶ್ರೇಷ್ಠ ಶ್ರೀ ಕನಕದಾಸರ 538 ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಎಲ್ಲಿಯವರೆಗೆ ಸೂರ್ಯ ಮತ್ತು ಚಂದ್ರ ಇರುತ್ತದೆಯೋ ಅಲ್ಲಿಯವರೆಗೂ ಭಕ್ತ ಕನಕದಾಸರ ಸಾಹಿತ್ಯ ಅಜರಾಮವಾಗಿರುತ್ತದೆ ಹಾಗೂ ಆದಿಕೇಶವ ಮತ್ತು ಚನ್ನಕೇಶವರ ಮೂರ್ತಿಯೊಂದಿಗೆ ಮುಂದಿನ ವರ್ಷದ ಭವ್ಯ ರಥೋತ್ಸವದೊಂದಿಗೆ ಕಾರ್ಯಕ್ರಮ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಅಲ್ಲದೇ ಹಂಪಿ ಉತ್ಸವ, ದಸರಾ ಉತ್ಸವ ರೀತಿಯಲ್ಲಿ ಕನಕೋತ್ಸವ ಕಾರ್ಯಕ್ರಮವನ್ನು ಒಂದು ವರ್ಷ ಕಾಗಿನೆಲೆ ಹಾಗೂ ಬಾಡದಲ್ಲಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದೇನೆ ಎಂದರು.
ಗಡಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ ಲೋಕಕಲ್ಯಾಣಕ್ಕಾಗಿ ಹಾಗೂ ದಾಸ ಸಾಹಿತ್ಯಕ್ಕೆ ಶ್ರೇಷ್ಠ ಹೆಸರನ್ನು ತಂದ ಕೀರ್ತಿ ಭಕ್ತ ಕನಕದಾಸನಿಗೆ ಸಲ್ಲುತ್ತದೆ. ಸಾಮ್ರಾಜ್ಯ ಕಾಪಾಡುವ ಸಲುವಾಗಿ ತನ್ನ ಎಲ್ಲ ಘನತೆ ಹಾಗೂ ಗೌರವಗಳನ್ನು ತ್ಯಜಿಸಿದ ಕೀರ್ತಿ ಭಕ್ತಕನಕದಾಸನದು ಹಾಗೂ ಈ ಪವಿತ್ರ ಪುಣ್ಯ ಕ್ಷೇತ್ರದಲ್ಲಿ ನಾವು ನೆಲೆಸಿರುವುದು ನಾವು ಪುಣ್ಯವಂತರು ಎಂದರು. ಉಪನ್ಯಾಸವನ್ನು ಡಾ.ಚಂದ್ರು ಸೊಬಟಿ ನಿರ್ವಹಿಸಿದರು. ಕನಕದಾಸರ ಪ್ರಭಂದ ಸ್ಪರ್ಧೆಯನ್ನು ವಲಯವಾರು ಏರಿ್ಡಸಿ ತೇರ್ಗಡೆಯಾದವರಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಕಾಗಿನೆಲೆ ಪ್ರಾಧಿಕಾರ ಆಯುಕ್ತ ಡಾ.ನಾಗರಾಜ, ತಹಶೀಲ್ದಾರ ಯಲ್ಲಪ್ಪ ಗೊಣೆಣ್ಣವರ, ಇಓ ಮಂಜುನಾಥ ಸಾಳೊಂಕೆ, ಬಿ.ಇ.ಓ ಎಂ.ಬಿ.ಅಂಬಿಗೇರ, ಪುರಸಭೆ ಅಧ್ಯಕ್ಷೆ ಸವಿತಾ ಮ್ಯಾಗಿ, ಗ್ಯಾರಂಟಿ ಅಧ್ಯಕ್ಷ ಶೇಖಪ್ಪ ಮಣಕಟ್ಟಿ, ಕುರುಬ ಸಮಾಜದ ಅಧ್ಯಕ್ಷ ಚಂದ್ರು ಮಾಯಣ್ಣವರ, ಶಿವಾನಂದ ರಾಮಗೇರಿ, ಗುಡ್ಡಪ್ಪ ಜಲದಿ, ಗುರುನಗೌಡ ಪಾಟೀಲ, ಪ್ರೇಮಾ ಪಾಟೀಲ, ಶಿವಾನಂದ ಮ್ಯಾಗೇರಿ, ಮಹಾಂತೇಶ ಸಾಲಿ, ಸಂತೋಷ ಚಾಕಲಬ್ಬಿ, ಎಂ.ಎನ್,ವೇಂಕೋಜಿ, ಅಣ್ಣಪ್ಪ ಲಮಾಣಿ, ಅತ್ತಾವುಲ್ಲಾ ಖಾಜೇಖಾನವರ, ಮಲ್ಲಮ್ಮ ಸೋಮನಕಟ್ಟಿ, ವಸಂತಾ ಬಾಗೂರ, ಸೇರಿದಂತೆ ಸಮಾಜದ ಹಿರಿಯರು, ಮುಖಂಡರು ಉಪಸ್ಥಿತರಿದ್ದರು.