ಕನಕ ಸಮುದಾಯದ ಭವನ ಲೋಕಾರೆ್ಣ ದ್ವೇಷ ಅಸೂಯೆ ತೊರೆದು ಉತ್ತಮ ಸಮಾಜ ನಿರ್ಮಿಸಿ
ಲೋಕದರ್ಶನ ವರದಿ
ಹೂವಿನಹಡಗಲಿ 30: ಇಲ್ಲಿ ಸ್ವ-ಪ್ರತಿಷ್ಠೆ ನಡೆದಿಲ್ಲ ಬದಲಾಗಿ ಗುರು ಪ್ರತಿಷ್ಠೆ ನಡೆದಿದ್ದು ಎಲ್ಲರೂದ್ವೇಷ, ಅಸೂಯೆ ಮೆಟ್ಟಿ ನಿಂತು ಎಲ್ಲರೂ ಸಮಾಜ ಕಟ್ಟುವ ಕೆಲಸದಲ್ಲಿ ತೊಡಗಬೇಕು ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.ಪಟ್ಟಣದಲ್ಲಿ ಸೋಮವಾರ ಕನಕ ಸಮುದಾಯ ಭವನ ಲೋಕಾರೆ್ಣ ನೆರವೇರಿಸಿ ಮಾತನಾಡಿದರು.ಕನಕ ಸಮುದಾಯ ಭವನ ಉದ್ಘಾಟನೆಗೆ ರಾಜಕೀಯ ಸ್ವಾರ್ಥ,ಸ್ವ ಪ್ರತಿಷ್ಠೆ ಬಿಟ್ಟು ಮೂರು ದಿನದ ಈ ಬದುಕಿನಲ್ಲಿ ಒಳಿತು ಒಂದೇ ಸಾಧನೆ ಅನಿಸಿಕೊಳ್ಳುತ್ತದೆ. ಪ್ರೀತಿ-ವಿಶ್ವಾಸ, ದಾನ, ಧರ್ಮ ಸಾರ್ಥಕ ಬದುಕಿಗೆ ಅಗತ್ಯ. ಮನುಷ್ಯನು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.
ಪ್ರಾಣಿಗಳಿಂದ ನಿಸ್ವಾರ್ಥ ತೆ, ಸಮಾಧಾನ ಮತ್ತು ಪ್ರಕೃತಿಯೊಂದಿಗಿನ ಸಾಮರಸ್ಯ ವನ್ನು ಮನುಷ್ಯ ಕಲಿಯಬೇಕು ಎಂದರು. ಕುರುಬರ ಸಮಾಜದ ಅದ್ಯಕ್ಷ ಹೆಚ್.ಬೀರ್ಪ ಅದ್ಯಕ್ಷತೆ ವಹಿಸಿದ್ದರು. ಡಾ.ರಾಕೇಶಯ್ಯ ರಾಮಸ್ವಾಮಿ, ಮಕರಬ್ಬಿ ರೇವಣ ಸಿದ್ದಯ್ಯ ಮಠದ ವಿವೇಕಾನಂದ ಯ್ಯ ಗುರುಮೂರ್ತಿ,ಗುರುವಿನ ಕೊಟ್ರೇಶ,ವಕೀಲರಾದ ಎಂ.ಪರಮೇಶ್ವರ್ಪ,ಗೊರವಪ್ಪ ರಾಮಣ್ಣ, ಪ್ರಮೋದ ಭಟ್ಟರು, ಈಟಿ.ಹನುಮೇಶ, ಗುರುವಿನ ರಾಜಣ್ಣ,ಪತ್ರಕರ್ತ ಹೆಚ್.ವಿಶ್ವನಾಥ, ಉಪನ್ಯಾಸಕ ಕೆ.ದ್ಯಾಮಜ್ಜ, ಐನಳ್ಳಿ ಮಲ್ಲಣ್ಣ, ಈಟಿ.ಲಿಂಗರಾಜ, ಈಟಿ.ಮಾಲತೇಶ, ಆರ್.ವೆಂಕಣ್ಣ ಇದ್ದರು.ನಿವೃತ್ತ ಪ್ರಾಚಾರ್ಯ ಬಿ.ಪ್ರಕಾಶ ಸ್ವಾಗತಿಸಿದರು, ಶಿಕ್ಷಕ ವಿರುಪಣ್ಣ ನಿರೂಪಿಸಿದರು. ಕುರುಬರ ಸಮಾಜದ ರಾಜ್ಯ ನಡುವೆ ನಿರ್ದೇಶಕ ಬಿ.ಹನುಮಂತಪ್ಪ ಪ್ರಾಸ್ತಾವಿಕ. ಮಾತನಾಡಿದರು.