ಕಂಪ್ಲಿ: ದೇವೇಂದ್ರಪ್ಪ ಮಣ್ಣಿನ ಮಗನಲ್ಲ, ಸರಾಯಿ ದೊರೆ, ಕೃಷಿಯ ಗಂಧಗಾಳಿ ಗೊತ್ತಿಲ್ಲ: ಶಿವಶಂಕರ ಹೇಳಿಕೆ

ಕಂಪ್ಲಿ: ದೇವೇಂದ್ರಪ್ಪ ಮಣ್ಣಿನ ಮಗನಲ್ಲ, ಸರಾಯಿ ದೊರೆ, ಕೃಷಿಯ ಗಂಧಗಾಳಿ ಗೊತ್ತಿಲ್ಲ: ಶಿವಶಂಕರ ಹೇಳಿಕೆ

ಲೋಕದರ್ಶನ ವರದಿ

ಕಂಪ್ಲಿ 27: ಕಂಪ್ಲಿ ವಿಧಾನಸಭಾ ಕ್ಷೇತ್ರದ ಪರಾಜಿತ ಸಿಪಿಐಎಂ ಅಭ್ಯಥರ್ಿ ವಿ.ಎಸ್.ಶಿವಶಂಕರ್ ಅವರು ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿ ಲೋಕಸಭೆಯಚುನಾವಣಿ ರಾಜಕೀಯ ವಿದ್ಯಮಾನಗಳ ಕುರಿತು ತಮ್ಮ ಅಭಿಪ್ರಾಯ ಗಳನ್ನು ವ್ಯಕ್ತಪಡಿಸಿದರು.   

ನರೇಂದ್ರ ಮೋದಿಯವರು ಮತ್ತೆ ಕೇಂದ್ರದಲ್ಲಿ ಚುಕ್ಕಾಣಿ ಹಿಡಿಯಲು ಹಗಲುಗನಸು ಕಾಣುತ್ತಿದ್ದಾರೆ.  2014ರ ಚುನಾವಣೆ ಸಂದರ್ಭದಲ್ಲಿ ನೀಡಿದ ಎಲ್ಲಾ ಭರವಸೆಗಳು ಹುಸಿಯಾಗಿವೆ. ದೇಶಕ್ಕೆ ಕಪ್ಪು ಹಣ ತರಲಿಲ್ಲ, ವರ್ಷಕ್ಕೆ 2ಕೋಟಿ ಉದ್ಯೋಗ ಸೃಷ್ಠಿಸಲಿಲ್ಲ. ಬದಲಿಗೆ ಪ್ರತಿ ಖಾತೆದಾರರಿಗೆ 15ಲಕ್ಷ ಹಾಕುವುದಾಗಿ ಹೇಳಿದ್ದ ಮೋದಿ, ಕನಿಷ್ಠ ಠೇವಣಿ ಕೊರತೆ ನೆಪದಲ್ಲಿ 4500ಕೋಟಿ ರೂ.ಗಳನ್ನು ನುಣ್ಣಗೆ ಮಾಡಿ ಮತದಾರರನ್ನು ವಂಚಿಸಿದ್ದಾರೆ. ದೇಶದಲ್ಲಿನ 1500ಗುಡಿ, ಸಣ್ಣ ಕೈಗಾರಿಕೆಗಳನ್ನು ನಾಶ ಮಾಡಿದ ಜಿಎಸ್ಟಿ ಹೇರಿಕೆ ಮಾಡುವ ಮೂಲಕ ಮಾಧ್ಯಮಜನಾಂಗ. ಬಡ, ಆಥರ್ಿಕವಾಗಿ     ಹಿಂದುಳಿ ದವರಿಗೆ ಶೇ.18ರಷ್ಟು ಹೊರೆ ಹೊರಿಸಿ ಅವರನ್ನು ಶೋಷಿಸಿದ್ದಾರೆ. ಸ್ವಾಮಿನಾಥನ್ ವರದಿ ಜಾರಿಗೊಳಿಸುವುದಾಗಿ ಮತ ಪಡೆದುಕೊಂಡಿದ್ದ ಮೋದಿ, ಸ್ವಾಮಿನಾಥನ್ ವರದಿ ಜಾರಿಯಾಗಲು ಸಾಧ್ಯವಿಲ್ಲ ಎಂದು ಸುಪರ್ಿಂ ಕೋಟರ್್ಗೆ ಅಫಿವಿಡೇಟ್ ಸಲ್ಲಿಸಿ  ರೈತರ ಆತ್ಮಹತ್ಯೆಗೆ ಕಾರಣರಾಗಿದ್ದಾರೆ. ಮೋದಿ ಕೇವಲ ಕಾಪರ್ೋರೇಟ್ ಪರ ಎನ್ನುವುದನ್ನು ಸರ್ವ ಮತದಾರರು ತಿಳಿದುಕೊಳ್ಳಬೇಕು. ಅಂಬಾನಿ, ಆದಾನಿ, ಮಲ್ಯರಂತಹ ಭ್ರಷ್ಟರಿಗೆ  ಕೋಟಿಗಟ್ಟಲೇ ಸಾಲ ಕೊಡಿಸಿ ಸಾಲ ಮನ್ನಾ ನೆಪದಲ್ಲಿ ದೇಶದಿಂದ ಓಡಿಸಿದ್ದಾರೆ. ಗರಿಷ್ಠ ನೋಟು ಅಮಾನ್ಯಕರಣ ಕೇವಲ ನಾಟಕವಾಗಿದ್ದು ಉಗ್ರರ ಹಾವಳಿ ನಿಂತಿಲ್ಲ.  ನರೇಗಾ ಕೂಲಿಕಾರರಿಗೆ 2500ಕೋಟಿ ರೂ.ಗಳನ್ನು ಬಿಡುಗಡೆಗೊಳಿಸದೆ ಮೋದಿ ನರೇಗಾ ಕೂಲಿಕಾಮರ್ಿಕರನ್ನು ಸಂಕಷ್ಟಕ್ಕೆ ದೂರಿದ್ದಾರೆ. 

ಮೋದಿ ಮತ್ತೊಮ್ಮೆ ಪ್ರಧಾನಿಯಾಗಬಾರದು. ಈಗಾಗಲೇ ಮೋದಿಯ ಐದು ವರ್ಷಗಳ ಆಡಳಿತದಲ್ಲಿ ದೇಶದ ಆಥರ್ಿಕ ಸ್ಥಿತಿಗತಿ ನೆಲಕಚ್ಚಿದೆ. ರೈತ, ಕಾಮರ್ಿಕ, ಯುವಜನತೆ ಸೇರಿ ಸಮಸ್ತರ ಪ್ರಗತಿಗಾಗಿ ಕೋಮುವಾದ, ಜಾತಿವಾದಿ ಬಿಜೆಪಿಯನ್ನು ಯಾರು ಬೆಂಬಲಿಸಬಾರದು ಎಂದು ಮನವಿ ಮಾಡಿಕೊಂಡರು. ಬಳ್ಳಾರಿ ಲೋಕಸಭೆಯ ಬಿಜೆಪಿ ಅಭ್ಯಥರ್ಿ ದೇವೇಂದ್ರಪ್ಪ ಮಣ್ಣಿನ ಮಗನಲ್ಲ, ಸರಾಯಿ ದೊರೆ. ದೇವೇಂದ್ರಪ್ಪನ ಹೆಂಡತಿ, ಮಗನ ಹೆಸರಿನಲ್ಲಿ ಹತ್ತಾರು ಬಾರ್ಗಳಿದ್ದು, ಕೃಷಿಯ ಗಂಧಗಾಳಿ ಗೊತ್ತಿಲ್ಲ. 

ಬಿಜೆಪಿ ಕ್ಷೇತ್ರದ ಉಸ್ತುವಾರಿ ಜಗದೀಶ್ ಶೆಟ್ಟರ್, ರಾಜ್ಯ ಉಪಾಧ್ಯಕ್ಷ ಬಿ.ಶ್ರೀರಾಮುಲು ಅವರು ದೇವೇಂದ್ರಪ್ಪ ಅವರನ್ನು ಮಣ್ಣಿನ ಮಗ ಎಂದು  ರೈತರಿಗೆ ಎಸಗಿದ ಅವಮಾನವಾಗಿದೆ. ದೇವೇಂದ್ರಪ್ಪ ಅವರ ಮಗ ಅಬ್ಕಾರಿ ಕಮೀಷನರ್ ಆಗಿದ್ದು, ಹೆಂಡತಿ ಮಕ್ಕಳ ಹೆಸರಿನಲ್ಲಿ ಸಾಕಷ್ಟು ಮದ್ಯದಂಗಡಿಗಳಿದ್ದು ಇವರು ಮಣ್ಣಿನ ಮಗ ಹೇಗಾಗುತ್ತಾರೆ ಎಂದು ಲೇವಡಿಮಾಡಿದರು ದೇವೇಂದ್ರಪ್ಪ ಅವರು ಮದ್ಯದ ದೊರೆಯಾಗಿದ್ದಾರೆ. ಜಿಲ್ಲೆಯ ಮಾತದಾರರು ಬಿಜೆಪಿಯ ಬಣ್ಣದ ಮಾತುಗಳಿಗೆ.ಮಾರು.ಹೋಗಬಾರದು.ಎಂದರು                       

ದೇವಸಮುದ್ರ ಗ್ರಾಮದಲ್ಲಿ ವೀರಅಭಿಮನ್ಯು ಕಾಳಗ ಬಯಲಾಟ


ಸುದ್ದಿ ಓದಿ