ಕಲಕೇರಿ ಗ್ರಾಪಂ ಅವ್ಯವಹಾರ 12 ರಿಂದ ಅಹೋರಾತ್ರಿ ಧರಣಿಗೆ ಸದಸ್ಯರ ನಿರ್ಧಾರ
ತಾಳಿಕೋಟೆ 08: ತಾಲೂಕಿನ ಕಲಕೇರಿ ಗ್ರಾಮ ಪಂಚಾಯತಿಯಲ್ಲಿ 15 ನೇ ಹಣಕಾಸು ಹಾಗೂ ವರ್ಗ 1ರ ವಸೂಲಾತಿಯಲ್ಲಿ ಭಾರಿ ಅವ್ಯವಹಾರಗಿದ್ದು ಸೂಕ್ತ ತನಿಖೆ ನಡೆಸಲು ಅಧಿಕಾರಿಗಳು ಹಿಂದೇಟು ಹಾಕಿದ್ದರಿಂದ ಇದೇ ತಿಂಗಳು 12 ರಿಂದ ಗ್ರಾಮ ಪಂಚಾಯತಕ್ಕೆ ಬೀಗ ಜಡಿದು ಅಹೋರಾತ್ರಿ ಧರಣಿ ನಡೆಸಲಾಗುದು ಎಂದು ಗ್ರಾಮ ಪಂಚಾಯತನ ಕೇಲವು ಸದಸ್ಯರು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಗ್ರಾಮ ಪಂಚಾಯತ ಸದಸ್ಯರಿಗೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆ. 2021-22 ಹಾಗೂ 2022-23 ನೇ ಸಾಲಿಗೆ ಕಲಕೇರಿ ಗ್ರಾಮ ಪಂಚಾಯತಗೆ 1.5 ಕೋಟಿ ಅನುದಾನವು 15 ನೇ ಹಣಕಾಸು ಯೋಜನೆಯಡಿಲ್ಲಿ ಬಂದಿದೆ. ಇಷ್ಟು ಅನುದಾನ ಬಂದರೂ ಸಹಿತ ಯಾವುದೇ ಕ್ರೀಯಾ ಯೋಜನೆಯನ್ನು ಮಾಡಿಲ್ಲ. ಪ್ರತಿ ಮನೆಗೆ ನಳ ಸಂಪರ್ಕಿಸುವ ಜೆಜೆಎಮ್ ಯೋಜನೆಗೆ ಹಣ ತುಂಬಬೇಕು. ಉಳಿದ ಹಣ ಕೆಇಬಿಗೆ ತುಂಬಬೇಕು ಎಂದು ಹೇಳಿದ್ದಾರೆ. ಆದೆ ಸದ್ಯ ಯಾವುದೇ ಹಣವನ್ನು ಜಿಪಂಗೆ ತುಂಬದೇ 68 ಲಕ್ಷ ಅನುದಾನ ಖರ್ಚು ಮಾಡಲಾಗಿದೆ. ಇದಕ್ಕೆ ಕೊಟ್ಟಿ ವೋಚರಗಳನ್ನು ಹಚ್ಚಿದ್ದಾರೆ. ನಾವು ಜಿಲ್ಲಾ ಪಂಚಾಯತದಲ್ಲಿ ವಿಚಾರಿಸಿದಾಗ ನಮ್ಮ ಪಂಚಾಯತದಿಂದ ಯಾವುದೇ ಹಣ ಬಂದಿಲ್ಲಾ ಎಂದು ತಿಳಿಸಿದ್ದಾರೆ. ಇನ್ನು ವರ್ಗ 1 ರಲ್ಲಿ ಮನೆ ಕರ ವಸೂಲಾತಿಯಲ್ಲಿ 20 ಲಕ್ಷ ಅನುದಾನ ಖರ್ಚು ಹಾಕಲಾಗಿದೆ. ಇವೆರಡೂ ಯೋಜನೆಯಲ್ಲಿ ಹಣ ದುರ್ಬಳಕೆ ಮಾಡಿಕೊಂಡಿರುವದು ಮೇಲ್ನೋಟಕ್ಕೆ ಕಂಡು ಬಂದಿದೆ, ಈ ಕುರಿತು ತನಿಖೆ ನಡೆಸುವಂತೆ ಜಿಪಂನ ಮುಖ್ಯ ಕಾರ್ಯನಿರ್ವಾಕ ಅಧಿಕಾರಿಗಳಿಗೆ 24-05-222 ಹಾಗೂ 30-5-2022 ರಂದು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದಲ್ಲದೇ ಜಿಲ್ಲಾಧಿಕಾರಿಗಳಿಗೆ 17-06-2022 ರಂದು ಮನವಿ ಸಲ್ಲಿಸಿದರೂ ಸಹಿತ ಅವರು ಕೂಡಾ ಸ್ಪಂದಿಸಿಲ್ಲ. ಹಿಗಾಗಿ ಕೇಲವು ಗ್ರಾಮ ಪಂಚಾಯತ ಸದಸ್ಯರು ಕೂಡಿಕೊಂಡು ಇದೇ ತಿಂಗಳು 12 ರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಖಾಸಿಮ ನಾಯ್ಕೋಡಿ, ಅಲೀಮ ನಾಯ್ಕೋಡಿ, ಅಜೀಪಾಸಾ ಜಾಗಿರದಾರ, ದೇವಿಂದ್ರ ಬಡಿಗೇರ, ಈರಗಂಟೆಪ್ಪ ಬಡಿಗೇರ, ವಿಶ್ವನಾಥ ರಾಟೋಡ, ಶಿವರಾಯ ಮೋಪಗಾರ, ಕುತುಬಿದ್ದಿನ ಹೊಡಮನಿ,. ಬೀಮಣ್ಣ ವಡ್ಡರ, ಉಮೇಸ ಹೆಗ್ಗಣದೊಡ್ಡಿ, ಆನಂದ ಅಡಕಿ ಸೇರಿದಂತೆ ಇತರರು ಇದ್ದರು.