ಬ್ಯಾಡ್ಗಿ

ವಿಜೃಂಭಣೆಯಿಂದ ನೆರವೇರಿದ ಕಾಗಿನೆಲೆ ಆದಿಕೇಶವನ ಮೆರವಣಿಗೆ

ವಿಜೃಂಭಣೆಯಿಂದ ನೆರವೇರಿದ ಕಾಗಿನೆಲೆ ಆದಿಕೇಶವನ ಮೆರವಣಿಗೆ

ಬ್ಯಾಡಗಿ 15: ತಾಲೂಕಿನ ಸುಕ್ಷೇತ್ರ ಕಾಗಿನೆಲೆಯಲ್ಲಿ ಶ್ರೀ ಆದಿಕೇಶವನ ದೇವಸ್ಥಾನ ಇದ್ದು ಸುಮಾರು ನೂರಾರು ವರ್ಷಗಳ ಇತಿಹಾಸ ಇರುವ ದೇವಸ್ಥಾನದಲ್ಲಿ ಪ್ರತಿ ವರ್ಷ ಇಲ್ಲಿ ವಿಜಯ ದಶಮಿ ದಿನವನ್ನು ವೀಶೆಷವಾಗಿ ಆಚರಿಸಲಾಗುತ್ತದೆ. ಪ್ರತಿ ವರ್ಷ  ವಿಜಯದಶಮಿ ದಿನದಂದು ಆದಿಕೇಶವನನ್ನು  ಬಂಗಾರದಿಂದ ಅಲಂಕರಿಸಿ ಪಾಲಿಕೆಯಲ್ಲಿ ಕೂರಿಸಿ ವಿವಿಧ ವಾದ್ಯಗಳೊಂದಿಗೆ ಪಾಲಕಿಯು ಹೊರಡುತ್ತದೆ.

ವೀಶೆಷತೆ ಏನೆಂದರೆ ಆದಿಕೇಶವನ ಉತ್ಸವ ಮೂರ್ತಿ ಪಾಲ್ಕಿಯು ಆದಿಕೇಶವನ ದೇವಸ್ಥಾನ ಹೊರಟು ಬ್ಯಾಡಗಿ ಮಾರ್ಗವಾಗಿ ದಾಸನ ಕೊಪ್ಪ ಗ್ರಾಮಕ್ಕೆ ತೆರಳಿ ಅಲ್ಲಿ ಆದಿಕೇಶವನು ಬನ್ನಿಯನ್ನು ಮುಡಿಯುತ್ತಾನೆ. ರಾತ್ರಿ 11 ವರೆಗೂ ಅದೇ ಗ್ರಾಮದಲ್ಲಿ ಮೆರವಣಿಗೆ ಆಗಿ ಅಲ್ಲಿಂದ ಕುಮ್ಮೂರು ಗ್ರಾಮಕ್ಕೆ ತೆರಳುತ್ತದೆ ಆಗ ಗ್ರಾಮದಲ್ಲಿ ಇಡಿ ರಾತ್ರಿ ವಿಜೃಂಭಣೆಯಿಂದ ಮೆರವಣಿಗೆ ನಡೆದು ಬೆಳಗಿನಜಾವ 5, ಘಂಟೆಗೆ ಇಂಗಳಗುಂದಿ ಪ್ಲಾಟಿನಲ್ಲಿರುವ ಚೆನ್ನಕೇಶವ ದೇವಸ್ಥಾನಕ್ಕೆ ತಲುಪಿ ದೇವಸ್ಥಾನದಲ್ಲಿ ವಿವಿಧ ಪೂಜೆ ಕಾರ್ಯಗಳು ನಡೆದು ಅಲ್ಲಿಂದ ಕಾಗಿನೆಲೆ ಆದಿಕೇಶವನ ದೇವಸ್ಥಾನವನ್ನು ಬೆಳಗ್ಗೆ 8 ಘಂಟೆಗೆ ಬಂದು ಸೇರುತ್ತದೆ.

ಈ ಎಲ್ಲಾ ಕಾರ್ಯಕ್ರಮಗಳು ಮೂಗಿಯುವವರೆಗೂ ಕಾರ್ಯಕ್ರಮದಲ್ಲಿ ಕಾಗಿನೆಲೆ. ದಾಸನ ಕೊಪ್ಪ.ಕುಮ್ಮೂರಿನ.ಇಂಗಳಗುಂದಿಯ.ನೂರಾರು ಭಕ್ತರು ಉಪಸ್ಥಿತರಿರುತ್ತಾರೆ.ಈ ಸಂದರ್ಭದಲ್ಲಿ ಪ್ರಕಾಶ್ ಜೋಶಿ .ಕೇಶವ ಭಟ್ ಜೋಶಿ. ಅರವಿಂದಪ್ಪ ಕುಲಕರ್ಣಿ. ನಾಗಪ್ಪ ಪೂಜಾರ. ಫಕೀರ​‍್ಪ ಪೂಜಾರ. ಪ್ರೇಮಾ ಪಾಟೀಲ.ರಾಮಣ್ಣ ಪೂಜಾರ. ಜಗದೀಶ್ ಪೂಜಾರ. ಗ್ರಾಮದ ಕಾಗಿನೆಲೆ ಗ್ರಾಮದ ಮುಖಂಡರು ಹಿರಿಯರು. ಮತ್ತು ದಾಸನಕೊಪ್ಪ. ಕುಮ್ಮೂರಿನ .ಇಂಗಳಗುಂದಿ ಗ್ರಾಮಗಳ ನೂರಾರು ಭಕ್ತರು.ಪೋಲಿಸ ಸಿಬ್ಬಂದಿ ಉಪಸ್ಥಿತರಿದ್ದರು. 


ಸುದ್ದಿ ಓದಿ