ಕಡಣಿ ಶ್ರೀರಾಮ ನವಮಿ: ಭವ್ಯ ಮೆರವಣಿಗೆ
ಆಲಮೇಲ 26: ಸಮೀಪದ ಕಡಣಿ ಗ್ರಾಮದಲ್ಲಿ ಶ್ರೀರಾಮನ ಭಕ್ತರು ಶ್ರೀರಾಮನ ಭಾವಚಿತ್ರದೊಂದಿಗೆ ರಾಮನ ಗುಂಡಿಯಿಂದ ಊರಿನ ಪ್ರಮುಖ ಬೀದಿಗಳ ಮುಖಾಂತರ ಶಂಕರಲಿಂಗ ದೇವಸ್ಥಾನವರೆಗೆ ಮೆರವಣಿಗೆ ಮಾಡಲಾಯಿತು.
ಆನಂದ ದೇಸಾಯಿ ಶ್ರೀರಾಮ ಸೇನೆಯ ಜೇವರ್ಗಿ ತಾಲೂಕು ಅಧ್ಯಕ್ಷ ಮಾತನಾಡಿ ಹಿಂದೂ ಹುಡುಗಿಯರು ಮತಾಂತರವಾಗುತ್ತಿರುವುದು ನಾವುಗಳು ಹಿಂದು ಹುಡುಗರು ಗವಾಯಿಸಬೇಕು. ಜಾತಿ ಧರ್ಮವನ್ನು ಹೋಗಲಾಡಿಸಿ ದೇಶಕ್ಕಾಗಿ ದೇಶದ ರಕ್ಷಣೆಗಾಗಿ ಹಿಂದೆ ನಾಯಕರು ಯಾವ ರೀತಿಯಾಗಿ ಹೋರಾಡಿದರು. ಅದೇ ರೀತಿ ಅದೇ ದಾರಿಯಲ್ಲಿಯೇ ಸಾಗೋಣ. ಗೋವು, ದೇಶ ರಕ್ಷಣೆ ಮಾಡುವುದು ಪ್ರತಿಯೊಬ್ಬ ಭಾರತೀಯ ಹಿಂದೂವಿನ ಕರ್ತವ್ಯವಾಗಿದೆ ಎಂದು ಹೇಳಿದರು.
ನಂದೀಶ್ ಮಾತನಾಡಿ ಧರ್ಮ ರಕ್ಷಿತಿ ರಕ್ಷಿತಂ ಶ್ರೀರಾಮನ ಜೀವನವನ್ನು ಆದರ್ಶವಾಗಿಟ್ಟುಕೊಂಡು, ಪ್ರತಿಯೊಬ್ಬ ಹಿಂದೂವಿನ ಮನೆಯಲ್ಲಿ ಅಕ್ಕ ತಂಗಿ ಮತಾಂತರ ಮತ್ತು ಲವ್ ಜಿಹಾದ್ ಒಳಗಾಗದೆ ನೋಡಿಕೊಳ್ಳುವುದು ಭಾರತೀಯನ ಹಾಗೂ ಹಿಂದೂ ಯುವಕರ ಕರ್ತವ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಚಂದ್ರಶೇಖರ ಶಿವಾಚಾರ್ಯರು ಹಿರೇಮಠ ಆಲಮೇಲ ಶ್ರೀರಾಮನ ಫೋಟೋಕ್ಕೆ ಹಾರ ಹಾಕುವುದರ ಮೂಲಕ ಚಾಲನೆ ನೀಡಿದರು. ಮಡಿವಾಳಯ್ಯ ಶಾಸ್ತ್ರಿ ಗದ್ದಗಿಮಠ ಜೇರಟಗಿ, ವೇದಮೂರ್ತಿ ಶಂಕರಲಿಂಗ ಹಿರೇಮಠ ಕಡಣಿ,
ವೀರಭದ್ರ ಕತ್ತಿ, ಬಸಲಿಂಗಪ್ಪ ಕತ್ತಿ, ಸಂತೋಷ್ ಕ್ಷತ್ರಿ, ಡಾ. ಮಲ್ಲು ಪ್ಯಾಟಿ, ಅಣವೀರ ಬ ಕತ್ತಿ, ಗಣ್ಯ ವ್ಯಾಪಾರಸ್ಥರು ಕಡಣಿ, ಈರಣ್ಣ ಸುತ್ತಾರ, ಅಮರೇಶ ವಗ್ಗರ, ಮಲ್ಲು ತೇಲಿ, ಮಲ್ಲು ಶಿರಾಶ್ಯಾಡ, ಯಲ್ಲಪ್ಪ ಕಟಬರ, ರಾಜು ವಡ್ಡರ, ಶಂಕರ್ ಕಂಬಾರ, ಗುರುಸಂಗ ಕತ್ತಿ, ದತ್ತು ಕ್ಷತ್ರಿ, ಮೌನೇಶ್ ಪತ್ತಾರ, ಸಾತ್ವಿಕ ಬಸವರಾಜ ಕಂಬಾರ, ಕೃಷ್ಣ ಪಾತ್ರೋಟಿ, ಅನೇಕ ಶ್ರೀರಾಮ ಸೇನೆಯ ಯುವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.