ಕಡಬಿ: ರಾಷ್ಟ್ರೀಯ ಡೇಂಗಿ ದಿನಾಚರಣೆ
ಯರಗಟ್ಟಿ 21: ಸಮೀಪದ ಕಡಬಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಡೇಂಗಿ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಆರೋಗ್ಯ ಶಿಕ್ಷಣಾಧಿಕಾರಿ ಉಮೇಶ ಬೇಟಗೇರಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ರಾಷ್ಟೀಯ ಡೇಂಗಿ ದಿನಾಚರಣೆ ಈ ವರ್ಷದ ಘೋಷಣೆ ಸಮುದಾಯದೊಂದಿಗೆ ಸಂಪರ್ಕ ಸಾಧಿಸಿ ಡೇಂಗಿ ನಿಯಂತ್ರಿಸುವುದು ಎಂಬುದಾಗಿದೆ. ಡೇಂಗಿ ಜ್ವರ ವೈರಸ್‌ನಿಂದ ಉಂಟಾಗುವ ಕಾಯಿಲೆಯಾಗಿದ್ದು, ಇದು ಒಬ್ಬರಿಂದ ಮತ್ತೊಬ್ಬರಿಗೆ ಸೊಳ್ಳೆಗಳ ಮೂಲಕ ಹರಡುತ್ತವೆ. ಈ23 ಸೊಳ್ಳೆಗಳು ಸಾಮಾನ್ಯವಾಗಿ ಸ್ವಚ್ಛ ನೀರಿನಲ್ಲಿ ಸಂತಾನವೃದ್ಧಿ ಮಾಡುತ್ತವೆ ಹಾಗೂ ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತವೆ. ಇದ್ದಕ್ಕಿದ್ದಂತೆ ತೀವ್ರ ಜ್ವರ ವಿಪರೀತ ತಲೆನೋವು ಕಣ್ಣುಗಳ ಹಿಂಭಾಗದಲ್ಲಿ ಮಾಂಸ ಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು ಈ ರೋಗದ ಮುಖ್ಯ ಲಕ್ಷಣಗಳಾಗಿವೆ. ಡೇಂಗಿ ಜ್ವರದ ತೀವ್ರ ಸ್ಥಿತಿಯಲ್ಲಿ ಬಾಯಿ ಮೂಗು ಮತ್ತು ಹೊಸಡುಗಳಿಂದ ರಕ್ತಸಾವ್ರ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸಾವ್ರದ ಗುರುತುಗಳು ಕಾಣಿಸಿಕೊಳ್ಳುತ್ತವೆ. ಸದರಿ ವಿಷಯವನ್ನು ಸಮುದಾಯಕ್ಕೆ ತಿಳಿಸುವುದು ಅತೀ ಅವಶ್ಯಕವಾಗಿದೆ ಎಂದರು.
ಡಾ.ಕಾರ್ತಿಕ ವಾಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಡೇಂಗಿ ಜ್ವರಕ್ಕೆ ಯಾವುದೇ ನಿರ್ದಿಷ್ಟ ಓಷಧಿ ಹಾಗೂ ಲಸಿಕೆ ಇರುವುದಿಲ್ಲಿ. ರೋಗದ ಲಕ್ಷಣಗಳ ಅನುಸಾರವಾಗಿ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬಹುದು. ಡೇಂಗಿ ಜ್ವರ ನಿಯಂತ್ರಣ ಮಾಡಲು ವೈಯಕ್ತಿಕ ಆರೋಗ್ಯ ಪರಿಸರ ನೈರ್ಮಲದ್ಯ ತಿಳಿದುಕೊಳ್ಳುವುದಾಗಿದೆ ಎಂದರು.
ಸಂದರ್ಭದಲ್ಲಿ ದುಂಡಪ್ಪಾ ಭಗನಾಳ, ವಿರೇಶ ಎಸ್, ಇಕ್ಬಾಲ್ ಭಾಗವಾನ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಇಕ್ಬಾಲ್ ಭಾಗವಾನ ನಿರೂಪಣೆ ಮಾಡಿ ಸ್ವಾಗತಿಸಿ ವಂದಿಸಿದರು.