ತಾಳಿಕೋಟಿ

ಕಬೀರರರು ಸಮಾಜದ ಜ್ಞಾನದ ಗಣಿ: ಜಾಲವಾದಿ

ಕಬೀರರರು ಸಮಾಜದ ಜ್ಞಾನದ ಗಣಿ:  ಜಾಲವಾದಿ

ತಾಳಿಕೋಟೆ 16: ಸಂತ ಕಬೀರದಾಸರು ನಮ್ಮ ಸಮಾಜಕ್ಕೆ ಜ್ಞಾನದ ಗಣಿಯಾಗಿದ್ದರು. 15ನೇ ಶತಮಾನದಲ್ಲಿ ಭಕ್ತಿ ಆಂದೋಲನದ ಮೂಲಕ ಸಮಾಜದ ಸುಧಾರಣೆಯಲ್ಲಿ ಬಹುಮುಖ್ಯ ಪಾತ್ರವಹಿಸಿದ್ದರು. ಕೆಟ್ಟು ಹೋಗಿರುವ ಆಧುನಿಕ ಸಮಾಜಕ್ಕೆ ಕಬಿರದಾಸರಂತವರು  ಅವಶ್ಯಕವಾಗಿ ಬೇಕಾಗಿದ್ದಾರೆ ಎಂದು ಪ್ರಾಚಾರ್ಯ ಆರ್‌.ವಿ.ಜಾಲವಾದಿ ಹೇಳಿದರು. 

ಅವರು ಪಟ್ಟಣದ ವೀ.ವಿ.ಸಂಘದ ಎಸ್‌. ಕೆ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಿಂದಿ ಹಾಗೂ ಇತಿಹಾಸ ವಿಭಾಗದ ವತಿಯಿಂದ ಆಯೋಜಿಸಿದ್ದ ಸಂತ ಕಬೀರದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಮುಖ್ಯ ಅತಿಥಿಯಾಗಿದ್ದ ಇತಿಹಾಸ ವಿಭಾಗದ ಹೇಮಾ ಜೈನಾಪೂರ ಮತನಾಡಿ, ಕಬೀರರ ಜೀವನ ಮತ್ತು ತತ್ವಗಳನ್ನು ತಿಳಿಸುತ್ತಾ ದೋಹಾಗಳ ಸಂದೇಶಗಳನ್ನು ಸಾರುವ ಮೂಲಕ ಹಿಂದೂ-ಮುಸ್ಲಿಮರ ಏಕತೆ ಮತ್ತು ಭಾವೈಕ್ಯತೆಯನ್ನು ಬೆಳೆಸಿಕೊಳ್ಳುವ ಅವಶ್ಯಕತೆ ಇದೆ ಎಂದರು. 

ಹಿಂದಿ ವಿಭಾಗದ ಮುಖಸ್ಥ ಆರ್‌.ವಿ.ಮಿಸ್ಕಿನ ಕಬೀರದಾಸರ ಜೀವನ ಮತ್ತು ತತ್ವಗಳ ಕುರಿತು ಮಾತನಾಡಿದರು. ಯು.ಎ.ಖಾಜಿ ನಿರೂಪಿಸಿದರು, ಕುಮಾರ ಸಂದೀಪ ಬಿರಾದಾರ ಸ್ವಾಗತಿಸಿದರು, ಕುಮಾರ ವಿಠ್ಠಲಸಿಂಗ ಹಜಾರೆ ವಂದಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. 


ಸುದ್ದಿ ಓದಿ