ಬ್ಯಾಡ್ಗಿ

ಕಬಡ್ಡಿ ತಂಡದ ಆಯ್ಕೆ ಪ್ರಕ್ರಿಯೆಗೆ ಚಾಲನೆ

ಕಬಡ್ಡಿ ತಂಡದ ಆಯ್ಕೆ ಪ್ರಕ್ರಿಯೆಗೆ ಚಾಲನೆ

ಬ್ಯಾಡಗಿ 27:  ಪ್ರೋಕಬಡ್ಡಿ ಕ್ರೀಡಾ ಆಯೋಜನೆಯಿಂದ ವಿಶ್ವದ ಬಹುತೇಕ ರಾಷ್ಟ್ರಗಳು ಭಾರತದತ್ತ ತಿರುಗಿ ನೋಡುವಂತಾಗಿ ದ್ದೇನೋ ಸರಿ, ಆದರೆ ವಾಸ್ತವದಲ್ಲಿ ಉದ್ಯೋಗ ಭರವಸೆ ಸಿಗದ ಬಹಳಷ್ಟು ಕಬಡ್ಡಿ ಕ್ರೀಡಾಪಟುಗಳು ಭವಿಷ್ಯ ರೂಪಿಸಿ ಕೊಳ್ಳಲಾಗದೇ ನೇಪಥ್ಯಕ್ಕೆ ಸರಿದಿದ್ದಾರೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಖೇದ ವ್ಯಕ್ತಪಡಿಸಿದರು.  

 ಜಾರ್ಖಂಡ್‌ನ ಬೊಕೋರೋದಲ್ಲಿ ಡಿ.27 ಆರಂಭವಾಗಲಿರುವ 32ನೇ ರಾಷ್ಟ್ರೀಯ ಸಬ್‌-ಜ್ಯೂನಿಯರ್ ಬಾಲಕ-ಬಾಲಕಿಯರ ಕಬಡ್ಡಿ ಚಾಂಪಿಯನ್‌ಶಿಪ್ ಹಿನ್ನೆಲೆಯಲ್ಲಿ ಪಟ್ಟಣದ ಎಸ್‌ಜೆಜೆಎಂ ತಾಲ್ಲೂಕ ಕ್ರೀಡಾಂಗಣದಲ್ಲಿ ಹಾವೇರಿ ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಶನ್ ಆಯೋಜಿಸಿದ್ದ 16 ವರ್ಷದೊಳಗಿನ ಬಾಲಕ-ಬಾಲಕಿಯರ (ಸಬ್‌-ಜ್ಯೂನಿಯರ್) ಕಬಡ್ಡಿ ತಂಡದ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು. 

ಜವಾಬ್ದಾರಿ ಸರ್ಕಾರದ ಮೇಲಿದೆ:ಮೂಲ ಸೌಕರ‌್ಯಗಳ ಕೊರತೆಯಿಂದ ಮಂಕಾಗುತ್ತಿರುವ ದೇಶೀಯ ಕ್ರೀಡೆ ವಿಶ್ವಕ್ಕೆ ಪರಿಚ ಯಿಸುವ ಗುರುತರ ಜವಾಬ್ಧಾರಿ ಸರ್ಕಾರದ ಮೇಲಿದೆ ಉದ್ಯೋಗ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ.2 ರಷ್ಟು ಮೀಸಲು ಸರ್ಕಾರ ಪ್ರಕಟಿಸಿದೆ, ಆದರೆ ಅಧೀಕೃತ 32 ಕ್ರೀಡೆಗಳಿಗೆ ಸಾಕಾಗುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯ ಕೂಡಲೇ ಇದನ್ನು ಶೇ.10ಕ್ಕೆ ಹೆಚ್ಚಿಸುವುದು ಸೂಕ್ತವೆಂದು ಸಲಹೆ ನೀಡಿದರು. 

ಸ್ಪಷ್ಟ ಗುರಿಯಿದೆ:ಪುರಸಭೆ ಸದಸ್ಯ ಬಸವರಾಜ ಛತ್ರದ ಮಾತನಾಡಿ, ನಿರ್ದಿಷ್ಟ ಗುರಿಯನ್ನು ಹೊಂದಿರುವ ಹಾವೇರಿ ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಶನ್ ಹಾಲಿ ಮತ್ತು ಮಾಜಿ ಕ್ರೀಡಾಪಟುಗಳು ಹಾಗೂ ಪೋಷಕರು ಇರು ವಂತಹ ಬಲಿಷ್ಟ ಸಮಿತಿ ರಚಿಸಿಕೊಂಡು ಕಳೆದ 22 ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದು ಜಿಲ್ಲೆಯಲ್ಲಿನ ನೂರಾರು ಬಡ ಕಬಡ್ಡಿ ಕ್ರೀಡಾಪಟುಗಳಿಗೆ ಬದುಕಿನ ಮಾರ್ಗವನ್ನು ತೋರಿಸುವ ಮೂಲಕ ಕಬಡ್ಡಿ ಕ್ರೀಡೆಯನ್ನು ಉತ್ತುಂಗಕ್ಕೇರಿಸಿದೆ ಎಂದರು. 

ಅಪಪ್ರಚಾರ ಮಾಡುವವರಿಗೆ ತಕ್ಕ ಉತ್ತರ:ಸಂಸ್ಥೆಯ ಖಜಾಂಚಿ ಹಾಗೂ ರೈತ ಮುಖಂಡ ಗಂಗಾಧರ ಎಲಿ ಮಾತನಾಡಿ, 

ಕಬಡ್ಡಿ ಅಸೋಸಿಯೇಶನ್ ರಾಜ್ಯದಲ್ಲೇ ಅತ್ಯಂತ ಗೌರವ ಪಡೆದ ಸಂಸ್ಥೆಯಾಗಿದೆ, ಹಾವೇರಿ ಜಿಲ್ಲೆಯ ರಚನೆ ಬಳಿಕ ಉ ದಾತ್ತ ಗುರಿಯೊಂದಿಗೆ ಸದರಿ ಸಂಸ್ಥೆಯನ್ನು ಹುಟ್ಟಿ ಹಾಕಿದ್ದು, ಕಳೆದ 22 ವರ್ಷದಿಂದ ಜಿಲ್ಲೆಯ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕ್ರೀಡಾಪಟುಗಳು ಪಾಲ್ಗೊಳ್ಳಲು ಅನುಕೂಲ ಕಲ್ಪಿಸಿದ್ದು ಬದುಕಿನ ಮಾರ್ಗವನ್ನೂ ಸಹ ತೋರಿಸಿದೆ, ಇದರ ಸಂಪೂರ್ಣ ಅರಿವಿದ್ದರೂ ಸಹ ಇಲ್ಲಿಂದಲೇ ಪರಿಚಿತರಾದ ಕೆಲವರು ಸಂಸ್ಥೆಯ ಏಳಿಗೆ ಸಹಿಸದೇ ತಮ್ಮ ಸ್ವಾರ್ಥ ಸಾಧ ನೆಗೆ ಪ್ರತಿಷ್ಟಿತ ಸಂಸ್ಥೆಯೊಂದರ ಬಗ್ಗೆ ವ್ಯವಸ್ಥಿತ ಅಪಪ್ರಚಾರ ನಡೆಸುತ್ತಿರುವುದು ಅವರ ಘನತೆಗೆ ತಕ್ಕುದಲ್ಲ ಎಂದರು. 

ನಿಸ್ವಾರ್ಥ ಸೇವೆ:ಕಬಡ್ಡಿ ತೀರ​‍್ುಗಾರರ ಮಂಡಳಿ ಛೇರಮನ್ ಸಿ.ಜಿ.ಚಕ್ರಸಾಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರದ ನೆರವಿಲ್ಲದೇ ಕೋಟಿಗೂ ಅಧಿಕ ಮೌಲ್ಯದ ಸ್ವಂತ ನಿವೇಶನ ಹೊಂದುವ ಮೂಲಕ ಕಬಡ್ಡಿ ಕ್ರೀಡೆಯನ್ನು ಸಮರ್ಥವಾಗಿ ನಡೆಸಿಕೊಂಡು ಬಂದಿದ್ದು ಇದಕ್ಕೆ ಸಂಸ್ಥೆಯಲ್ಲಿನ ನಿಸ್ವಾರ್ಥ ಮನಸ್ಸುಗಳೇ ಕಾರಣವಾಗಿದೆ ಎಂದರು. 

 ವೇದಿಕೆಯಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಎಚ್‌.ಎಸ್‌.ಚಾಧವ, ಮಾಜಿ ಅಧ್ಯಕ್ಷ ಸುರೇಶ ಅಸಾದಿ, ರೈತ ಮುಖಂಡ ಕಿರಣ ಗಡಿಗೋಳ, ಸುರೇಶ ಉದ್ಯೋಗಣ್ಣವರ, ಶಿವಯೋಗಿ ಉಕ್ಕುಂದ, ಮಹ್ಮದ್‌ಲಿಜಿನ್ನಾ ಹಲಗೇರಿ, ಕ್ರೀಡಾಧಿಕಾರಿ ಎಚ್‌.ಬಿ. ದಾಸರ, ಕೋಚ್ ಮಂಜುಳ ಭಜಂತ್ರಿ, ಹಿರಿಯ ಕಬಡ್ಡಿ ಕ್ರೀಡಾಪಟುಗಳಾದ ರಘು ಪಾಟೀಲ, ಜುಲ್ಪೀಕರ್‌ಲಿ ಮೆಡ್ಲೇರಿ, ವಿಜಯ್ ಮಾಳಗಿ, ಶಿವಪುತ್ರ ದೊಡ್ಮನಿ, ಅಭಿಷೇಕ ಅಡ್ಡೇರ, ಸುಭಾಸ್ ಮಾಳಗಿ, ಬಸವರಾಜ ಸೊಟ್ಟಮ್ಮನವರ, ತೀರ​‍್ುಗಾರರ ಮಂಡಳಿ ಸದಸ್ಯರಾದ ಕುಮಾರಸ್ವಾಮಿ ಹಿರೇಮಠ, ವಿರೇಶ್, ನಾಗರಾಜ ಮೆಡ್ಲೇರಿ, ಎಂ.ಬಸವರಾಜಪ್ಪ ಎ.ಟಿ.ಪೀಠದ ಎಂ.ಆರ್‌.ಕೋಡಿಹಳ್ಳಿ, ಮಂಜುನಾಥ ಬೆಳಗಲ್, ಸಂಸ್ಥೆಯ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಬಳ್ಳಾರಿ, ಮಲ್ಲಿಕಾರ್ಜುನ ಅಂಗಡಿ, ಸಂಘಟನಾ ಕಾರ‌್ಯದರ್ಶಿ ರಾಜೇಶ್ ಮಾಳಗಿ, ಸದಸ್ಯರಾದ ಮಾರುತಿ ಜನ್ನು, ಬಿ.ಸಿ.ದಾಣ್ಗಲ್, ಬಿ.ಎನ್‌. ಹೊಸಪೇಟಿ, ಕಿರಣ್ ಕಂಬಳಿ, ಬಸನಗೌಡ ಲಕ್ಷ್ಮೇಶ್ವರ, ಶಿವಯೋಗಿ ಎಲಿ ಇನ್ನಿತರರಿದ್ದರು. ಕಾರ‌್ಯದರ್ಶಿ ಶಿವಾನಂದ ಮಲ್ಲನಗೌಡ್ರ ಸ್ವಾಗತಿಸಿದರು, ಎನ್‌.ಎಸ್‌.ಯಲಿಮಣ್ಣನವರ ವಂದಿಸಿದರು.ಬಾಕ್ಸ್‌: 

ಒಟ್ಟು 314 ಕ್ರೀಡಾಪಟುಗಳು:ಆಯ್ಕೆ ಪ್ರಕ್ರಿಯೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದಒಟ್ಟು 314 ಕ್ರೀಡಾಪಟುಗಳು ಪಾ ಲ್ಗೊ ಂಡಿದ್ದು ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ತಲಾ 24 ಜನ ಆಟಗಾರರ ಹೆಸರನ್ನು ಅಂತಿಮಗೊಳಿಸಲಾ ಯಿತು. 


ಸುದ್ದಿ ಓದಿ