ಕಾರವಾರ

ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿರುವ ಬಸ್ ನಿಲ್ದಾಣ

ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿರುವ ಬಸ್ ನಿಲ್ದಾಣ
ಬನವಾಸಿ: ಸಾರಿಗೆ ನೌಕರರು ಕರೆ ನೀಡಿದ ಮುಷ್ಕರದಿಂದಾಗಿ ಬನವಾಸಿ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿರುವುದ

ಬನವಾಸಿ 07: ರಾಜ್ಯ ಸರ್ಕಾರ ತಮ್ಮ ಬೇಡಿಕೆ ಈಡೇರಿಸದ ಹಿನ್ನಲೆಯಲ್ಲಿ ಸಾರಿಗೆ ನೌಕರರು ಬುಧವಾರ ಕರೆ ನೀಡಿದ ಮುಷ್ಕರದಿಂದಾಗಿ ಸರ್ಕಾರಿ ಬಸ್‍ಗಳಿಲ್ಲದೇ ಬನವಾಸಿಯಲ್ಲಿ ಪ್ರಯಾಣಿಕರು, ವಿದ್ಯಾರ್ಥಿಗಳು ಪರದಾಡಿದರು.

ಬೇರೆ ಬೇರೆ ಕಡೆಗೆ ಹೋಗಬೇಕಾದ ಪ್ರಯಾಣಿಕರು, ವಿದ್ಯಾರ್ಥಿಗಳು ಮುಂಜಾನೆ ಬಸ್ ನಿಲ್ದಾಣಕ್ಕೆ ಆಗಮಿಸಿ ಬಸ್‍ಗಾಗಿ ಕಾದು ಕಾದು ಸುಸ್ತಾಗಿ ಖಾಸಗಿ ವಾಹನ, ಆಟೋ ರಿಕ್ಷಾ, ಖಾಸಗಿ ಬಸ್ ಮೊರೆ ಹೋದರು. ಬನವಾಸಿಯಲ್ಲಿ ಸಂತೆ ದಿನವಾಗಿದ್ದರಿಂದ ಸುತ್ತಮುತ್ತಲಿನ ಹಳ್ಳಿಯ ಸಾರ್ವಜನಿಕರು ಸಂತೆಗೆ ಬರಲು ತೊಂದರೆ ಅನುಭವಿಸಿದರು. ಮುಂಜಾನೆಯಿಂದ ಯಾವುದೇ ಸರ್ಕಾರಿ ಬಸ್‍ಗಳು ರಸ್ತೆಗಿಳಿಯದೇ ಇದ್ದುದರಿಂದ ಬನವಾಸಿ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿತ್ತು. 

ಸುದ್ದಿ ಓದಿ