ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಬೆಳಗಾವಿ : ಸಚಿವ ಸ್ಥಾನದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈತಪ್ಪಿದ ವಿಚಾರ. ಕಾಂಗ್ರೆಸ್ ಪಕ್ಷವು ಒಬ್ಬರಿಗೆ ಒಂದೇ ಹುದ್ದೆ ನಿಯಮದಿಂದ ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈತಪ್ಪಿದೆ. ಈಗ ಸದ್ಯ ನಿಮಯ ಜಾರಿಯಾಗಿದೆ. ನಾವು ಅದನ್ನು ಒಪ್ಪಿಕೊಳ್ಳಬೇಕಾಗಿದೆ. ಅದರಂತೆ ಸಂಪುಟ ವಿಸ್ತರಣೆಯ ಎರಡನೇ ಹಂತದಲ್ಲಿ ಬೆಳಗಾವಿ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ಸಿಗಲಿದೆ. ಮೂರನೇ ಸಚಿವ ಸ್ಥಾನ ಕೇಳುವುದು ತಪ್ಪಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ರವಿವಾರ ಗೋಕಾಕನಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆ ಮತ್ತೊಮ್ಮೆ ಸಿಕ್ಕಿದೆ. ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿದ್ದು, ಇನ್ನಷ್ಟು ಕೆಲಸ ಮಾಡಲು ಅನುಕೂಲವಾಗಲಿದೆ. ಬ್ರಿಡ್ಜ್, ಫ್ಲೈಯ್ ಓವರ್ ಸೇರಿ ಹಲವು ಕೆಲಸ ಮಾಡಬೇಕಿದೆ.
ಭಾರತ್ ಜೋಡೊಗೆ 1 ಸಾವಿರ ಕೋಟಿ ಕೊಡುವ ವಿಚಾರವಾಗಿ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿತ್ತು. ಹೊರೆ ಆಗಲ್ಲ ಎಂಬ ಸ್ಪಷ್ಟನೆಯನ್ನು ಸಹ ನೀಡಿದ್ದೇವೆ ಎಂದರು.
ಬೆಳಗಾವಿಯಲ್ಲಿ ಮಳೆಗಾಲದ ಅಧಿವೇಶನ ಅಂತಿಮ ಆಗಿಲ್ಲ. ಹೊಸ ಮುಖ್ಯಮಂತ್ರಿ ಬಂದಿದ್ದಾರೆ ಮತ್ತೆ ನೋಡೊಣ. ಸಂಪುಟ ವಿಸ್ತರಣೆ ಆದ ಬಳಿಕ ತೀರ್ಮಾನ ಆಗುತ್ತದೆ ಎಂದರು.
ಜಮೀರ್ ಅಹಮ್ಮದ್ ವಿಚಾರ ವರಿಷ್ಠರ ಗಮನಕ್ಕೆ ಇದೆ. ಮುಸ್ಲಿಂರಿಗೆ ಅನ್ಯಾಯವಾಗದಂತೆ ಪಕ್ಷ ನೋಡಿಕೊಳ್ಳಿದೆ ಎಂದು ತಿಳಿಸಿದರು. ಶಾಸಕ ಅಶೋಕ ಪಟ್ಟಣ ಜಾರಕಿಹೊಳಿ ಬಣ್ಣಕ್ಕೆ ಜಂಪ್ ವಿಚಾರವಾಗಿ ಮಾತನಾಡಿ, ಜಿಲ್ಲಾ ಗರಡಿ ಬೇರೆ ರಾಜ್ಯದ ಗರಡಿ ಬೇರೆ. ಜಿಲ್ಲೆ ಅಂತ ಬಂದಾ ನಾವೇಲ್ಲ ಒಂದೇ ಗರಡಿ ಎಂದ ಸಚಿವ ಸತೀಶ ಜಾರಕಿಹೊಳಿ.
ಆದಿತ್ಯರಾಜ್ ಕ್ಯಾಪಿಟಲ್ ಹಣ ದುರುಪಯೋಗ ಪ್ರಕರಣ.ಅಧಿಕಾರಿಗಳು ತನಿಖೆಯನ್ನು ಮಾಡುತ್ತಾರೆ. ಪ್ರಕರಣ ವಿಚಾರಣೆಯನ್ನು ಸಿಇಡಿ ಸೂಕ್ತ ರೀತಿಯಲ್ಲಿ ಮಾಡಲಿದೆ. ಸ್ಪೀಡ್ ಆಗಿ ಮಾಡಲು ಏನ್ ಮಾಡಬೇಕು ಎಂಬುದು ನೋಡೊಣ.
ಅಹಿಂದ ಸಂಘಟನೆ ನಾವೇ ನಡೆಸಬೇಕು ಎಂದು ಎನಿಲ್ಲ. ಯಾರ ಬೇಕಾದ್ರು ಅಹಿಂದ ಸಂಘಟನೆ ನಡೆಸಬಹುದು. ನಾನು ಹೋಗಿ ಲೀಡರ್ ಏನಲು ಆಗಲ್ಲ. ಸಮಾಜ, ಸಂಘಟನೆ ನಾಯಕ ಎಂದು ಒಪ್ಪಿಕೊಳ್ಳಬೇಕು. ಈಗಾಗಲೇ ಒಂದು ಸಂಘಟನೆ ಇದೆ. ಅವಶ್ಯಕತೆ ಬಿದ್ದಾಗ ನಾವು ಬೆಂಬಲ ಕೊಡ್ತಿವಿ ಎಂದು ಸತೀಶ ಜಾರಕಿಹೊಳಿ ನುಡಿದರು.