ಕೆಎಲ್ಇ ಸ್ಥಾನಿಕ ಹಿರಿಯ ಸದಸ್ಯಜಿ. ಸಿ.ಹುಲ್ಮನಿ ಇನ್ನಿಲ್ಲ
ರಾಣೆಬೆನ್ನೂರು 04: ಕೆಎಲ್ಇ ಶಿಕ್ಷಣ ಸಂಸ್ಥೆಯ, ಸ್ಥಾನಿಕ.ಆಡಳಿತ ಮಂಡಳಿಯ, ಹಿರಿಯ ಸದಸ್ಯ ಜಿಸಿ. ಹುಲ್ಮನಿ (94) ಅವರು ರವಿವಾರ ಮಧ್ಯಾನ ನಿಧನ ಹೊಂದಿದರು. ಮೃತರು ನಾಲ್ವರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧುಗಳನ್ನು ಹೊಂದಿದ್ದರು ನಗರಸಭಾ ಪ್ರೌಢಶಾಲೆಯಲ್ಲಿ 30 ವರ್ಷಗಳ ಕಾಲ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ, ನಿವೃತ್ತಿ ನಂತರ,ದಿ :ಕೆ. ಎಫ್ ಪಾಟೀಲ್ ಅವರ ಒಡನಾಡಿಯಾಗಿದ್ದ ಗೂಳಪ್ಪ ಹುಲ್ಮನಿ ಅವರು ರಾಜರಾಜೇಶ್ವರಿ ಹೆಣ್ಣುಮಕ್ಕಳ ವಿದ್ಯಾ ಸಂಸ್ಥೆಯ, ಸಂಸ್ಥಾಪಕ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಕೆಎಲ್ಇ ಸಂಸ್ಥೆಯ ಆಡಳಿತಾಧಿಕಾರಿಯಾಗಿ, ಸ್ಥಾನಿಕ ಆಡಳಿತ ಮಂಡಳಿಯ ಹಿರಿಯ ಸದಸ್ಯರಾಗಿ, ಕೆ ಎಫ್ ಪಾಟೀಲ್ ಚಾರಿಟೇಬಲ್ ಟ್ರಸ್ಟಿನ ಕಾರ್ಯದರ್ಶಿಯಾಗಿ, ಸೇವೆ ಸಲ್ಲಿಸುತ್ತಿದ್ದರು. ಮೃತರ ನಿಧನಕ್ಕೆ ಕೆ ಎಲ್ ಇ ಶಿಕ್ಷಣ ಸಂಸ್ಥೆಯ, ಅಧ್ಯಕ್ಷರು, ಕಾರ್ಯಧ್ಯಕ್ಷರು, ಸದಸ್ಯರು, ರಾರಾ ಕಾಲೇಜು ಪ್ರಾಚಾರ್ಯರು ಮುಖ್ಯೋಪಾಧ್ಯಾಯರು, ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು, ಉಪನ್ಯಾಸಕರು, ಶಿಕ್ಷಕರು ಸಿಬ್ಬಂದಿ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತರ ಅಂತಿಮ ಸಂಸ್ಕಾರಸೆಪ್ಟೆಂಬರ್ 5ರಂದುಸೋಮವಾರ ಮುಂಜಾನೆ 11 ಗಂಟೆಗೆ ಹಲಗೇರಿ ರಸ್ತೆಯಲ್ಲಿರುವ, ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ