ಜ 5ರಂದು ಪ್ರಧಾನಿಯವರಿಂದ ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಕೊಳವೆ ಮಾರ್ಗ ಉದ್ಘಾಟನೆ
ನವದೆಹಲಿ / ಮಂಗಳೂರು, ಜ 2 (ಯುಎನ್ಐ) ಕೇರಳ ಮತ್ತು ಕರ್ನಾಟಕದಲ್ಲಿ ಪರಿಸರ ಸ್ನೇಹಿ ಇಂಧನ ಬಳಕೆಯ ಪ್ರಮುಖ ಮೈಲಿಗಲ್ಲು ಸ್ಥಾಪಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ , ಜ 5ರಂದು ಗೇಲ್ (ಇಂಡಿಯಾ) ಲಿಮಿಟೆಡ್ನ ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಪೈಪ್ಲೈನ್ (ಕೊಳವೆ ಮಾರ್ಗ) ಉದ್ಘಾಟಿಸಲಿದ್ದಾರೆ.ಕರ್ನಾಟಕ ರಾಜ್ಯಪಾಲ ವಜೂಭಾಯ್ ವಾಲಾ, ಕೇರಳ ರಾಜ್ಯಪಾಲ ಆರಿಫ್ ಮೊಹಮದ್ ಖಾನ್, ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ಉಕ್ಕು ಸಚಿವ ಧರ್ಮೇಂದ್ರ ಪ್ರಧಾನ್ ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಗೇಲ್ (ಇಂಡಿಯಾ) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮನೋಜ್ ಜೈನ್ ಶನಿವಾರ ಈ ವಿಷಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಗೇಲ್ ನಿರ್ದೇಶಕ (ಮಾರ್ಕೆಟಿಂಗ್) ಇ ಎಸ್ ರಂಗನಾಥನ್ ಮತ್ತು ಗೇಲ್ ನಿರ್ದೇಶಕ (ವಾಣಿಜ್ಯ ಅಭಿವೃದ್ಧಿ) ಎಂ ವಿ ಅಯ್ಯರ್ ಉಪಸ್ಥಿತರಿದ್ದರು.450 ಕಿಮೀ ಉದ್ದದ ಕೊಳವೆ ಮಾರ್ಗ ಕೇರಳದ ಕೊಚ್ಚಿಯಿಂದ ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಜಿಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳ ಮೂಲಕ ನೈಸರ್ಗಿಕ ಅನಿಲವನ್ನು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿಗೆ ಸಾಗಿಸಲಿದೆ.ಈ ಪ್ರದೇಶದ ವಿವಿಧ ನಗರ ಅನಿಲ ವಿತರಣೆ (ಸಿಜಿಡಿ) ಪ್ರದೇಶಗಳಲ್ಲಿ ಮನೆಗಳು, ವಾಣಿಜ್ಯ ಘಟಕಗಳು ಮತ್ತು ಸಂಕುಚಿತ ನೈಸರ್ಗಿಕ ಅನಿಲ (ಸಿಎನ್ಜಿ) ಗೆ ಈ ಪೈಪ್ಲೈನ್ ನೈಸರ್ಗಿಕ ಅನಿಲ (ಪಿಎನ್ಜಿ) ವನ್ನು ನಿರಂತರವಾಗಿ ಪೂರೈಸಲಿದೆ.