ಬೈಲಹೊಂಗಲ

ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮನೆಗೆ ಹಾನಿ

ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮನೆಗೆ ಹಾನಿ

ಸಂತ್ರಸ್ತ ಮನೆಗೆ ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಭೇಟಿ: ವೀಕ್ಷಣೆ 

ಬೈಲಹೊಂಗಲ 31: ತಾಲೂಕಿನ ದೊಡವಾಡ ಗ್ರಾಮದ ಬಾನಿಯವರ ಓಣಿಯಲ್ಲಿನ ಮನೆಯಲ್ಲಿ ಶನಿವಾರ ಮಧ್ಯಾಹ್ನ ಗ್ಯಾಸ್ ಸಿಲಿಂಡರ್ ಸ್ಫೋಟಿಸಿ ಬೆಂಕಿ ಹೊತ್ತಿ ಉರಿದು ಮನೆ ಕಳೆದುಕೊಂಡ ಸಂತ್ರಸ್ತರಾದ ಬಸವ್ವ ಕುಶುಭಾರ ಮನೆಗೆ ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಭೇಟಿ ನೀಡಿ ಬೆಂಕಿಯಿಂದ ಸಂಪೂರ್ಣ ಹಾನಿಗೊಳಗಾದ ಮನೆ ವೀಕ್ಷೀಸಿದರು.  

ಈ ವೇಳೆ ಸಂತ್ರಸ್ತೆಗೆ ವೈಯಕ್ತಿಕವಾಗಿ 10 ಸಾವಿರ ರೂ ಆರ್ಥಿಕ ಸಹಾಯ ಮಾಡಿದರು. ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ಸರಕಾರದಿಂದ ಸಿಗಬೇಕಾದ ಪರಿಹಾರ ಸೌಲಭ್ಯಗಳನ್ನು ದೊರಕಿಸಿ ಕೊಡುವುದಾಗಿ ಭರವಸೆ ನೀಡಿದರು. 

ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ನೇಸರಗಿ, ಮಂಡಲ ಅಧ್ಯಕ್ಷ  ಮಡಿವಾಳಪ್ಪ ಚಳಕೊಪ್ಪ, ಮಡಿವಾಳಪ್ಪ ಹೋಟಿ,  ಶ್ರೀ ಸೋಮೇಶ್ವರ ಶುಗರ್ಸ್‌ ನಿರ್ದೇಶಕ ನಿಂಗಪ್ಪ ಚೌಡಣ್ಣವರ,ಪಿಕೆಪಿಎಸ್ ಅಧ್ಯಕ್ಷ  ವೀರೇಂದ ಸಂಗೊಳ್ಳಿ, ಉದಯ ಕೊಟಬಾಗಿ, ವಿಠ್ಠಲ ಗಾಬಿ, ರಾಚಯ್ಯ ಹಿರೇಮಠ, ಗದಿಗೆಪ್ಪ ಶಿವಧೂತನವರ, ನಿಂಗಪ್ಪ ಗುಂಡಗೈ, ಗಂಗಪ್ಪ ದಿನ್ನಿಮನಿ, ರುದ್ರ​‍್ಪ ಕೊಟಗಿ,ಅಶೋಕ ಚೌಡಣ್ಣವರ, ಚನ್ನಯ್ಯ ದಾಬಿಮಠ, ಶಿವಯ್ಯ ಸಂಗಮೇಶ್ವರಮಠ, ಮಂಜುನಾಥ ಹಳ್ಳದ, ಮುದಕಪ್ಪ ಗಾಯಕವಾಡ, ವಿಜಯ ಅಂದಾನಶೆಟ್ಟಿ, ಅಶೋಕ ಯಲಿಗಾರ, ಈರ​‍್ಪ ಗಾಬಿ ಇದ್ದರು. 


ಸುದ್ದಿ ಓದಿ