ಶಿಗ್ಗಾವ್

ಕೆ. ರಾಮುಲುಗೆ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆ

ಕೆ. ರಾಮುಲುಗೆ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆ

ಶಿಗ್ಗಾವಿ 26: ತಾಲೂಕಿನ ಗಂಗಿಬಾವಿಯ ಕೆಎಸ್‍ಆರ್‍ಪಿ 10ನೇ ಮೀಸಲು ಪಡೆಯ ಹವಾಲ್ದಾರ ಕೆ. ರಾಮುಲು ಅವರಿಗೆ ಉತ್ತಮ ಸೇವೆಗಾಗಿ ಮುಖ್ಯಮಂತ್ರಿಗಳ ಪದಕ್ಕಾಗಿ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೇರಿಯವರಾದ ರಾಮುಲು ಅವರು 1999ರಿಂದ ಶಿಗ್ಗಾವಿ ಗಂಗಿಬಾವಿಯ ಕೆಎಸ್‍ಆರ್‍ಪಿ 10ನೇ ಪಡೆಯಲ್ಲಿ ಹವಾಲ್ದಾರ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪೊಲೀಸ್ ಸೇವೆಯ ಜತೆಗೆ ಚಿತ್ರಕಲಾ ಪರಿಣಿತರಾಗಿರುವ ಇವರು ರಾಜ್ಯ ಮತ್ತು ಅಂತರಾಜ್ಯ ಚಿತ್ರಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. 2018ರಲ್ಲಿ ಇಲಾಖೆ ವತಿಯಿಂದ ಆಯೋಜಿಸಿದ್ದ ಚಿತ್ರಕಲಾ  ಪ್ರದರ್ಶನದಲ್ಲಿ ಇವರ ಪೆಂಟಿಂಗ್ ಪ್ರದರ್ಶನಗೊಂಡಿವೆ.

ಸುದ್ದಿ ಓದಿ